More

  ಸಿದ್ದರಾಮಯ್ಯ ಸಿಎಂ ಆದರೆ ನಮ್ಮ ಪಕ್ಷದ ಬೆಂಬಲ ಕಾಂಗ್ರೆಸ್‌ಗೆ: ಜನಾರ್ದನ ರೆಡ್ಡಿ

  ಕೊಪ್ಪಳ: ಮತದಾರರು ನನ್ನನ್ನು ಬೆಂಬಲಿಸುವ ವಿಶ್ವಾಸವಿದ್ದು, ಭಾರೀ ಮತಗಳ ಅಂತರದಿಂದ ಗೆಲ್ಲುತ್ತೇನೆ. ಫಲಿತಾಂಶದ ನಂತರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಯಾವುದಾದರೂ ಒಂದು ಪಕ್ಷಕ್ಕೆ ಬೆಂಬಲ‌ ನೀಡಬೇಕಾಗುತ್ತದೆ. ಒಂದೊಮ್ಮೆ ಕಾಂಗ್ರೆಸ್​ನವರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದಲ್ಲಿ ನಾನು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

  ಇದನ್ನೂ ಓದಿ: ಮಕ್ಕಳೊಂದಿಗೆ ತೆರಳಿ ಮತ ಚಲಾಯಿಸಿದ ಸಿಎಂ ಬೊಮ್ಮಾಯಿ

  ಮತದಾರರು ನನ್ನನ್ನು ಬೆಂಬಲಿಸುತ್ತಾರೆ

  ಗಂಗಾವತಿ ನಗರ 155ನೇ ಮತಗಟ್ಟೆಯಲ್ಲಿ ಮಾಜಿ ಸಚಿವ, ಕೆಆರ್​ಪಿಪಿ ಅಭ್ಯರ್ಥಿ ಜನಾರ್ದನರೆಡ್ಡಿ ಮತದಾನ ಮಾಡಿದ್ದಾರೆ. ಬಳಿಕ ಸುದ್ದಿರಾರೊಂದಿಗೆ ಮಾತನಾಡಿ, ನಗರದ ಆರಾಧ್ಯದೈವ ಚನ್ನಬಸವ ತಾತ ಹಾಗೂ ಗ್ರಾಮದೇವತೆ ದುರ್ಗಾದೇವಿ ಆರ್ಶಿವಾದ ಪಡೆದಿರುವೆ. ಮತದಾರರು ನನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ಹೇಳಿದರು.

  ಇದನ್ನೂ ಓದಿ: ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಡಾ.ವಿಜಯ ಸಂಕೇಶ್ವರ ಕುಟುಂಬಸ್ಥರು

  ನನಗೆ ಯಾರೂ ಪ್ರತಿಸ್ಪರ್ಧಿ ಇಲ್ಲ

  ನಮ್ಮ ಅಭ್ಯರ್ಥಿಗಳು 13 ಕ್ಷೇತ್ರಗಳಲ್ಲಿ ಸ್ಪಷ್ಟವಾಗಿ ಗೆಲುವು ಸಾಧಿಸಲಿದ್ದಾರೆ. ಉಳಿದ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ಇದೆ. ಬಳ್ಳಾರಿ ನಗರದಲ್ಲಿ ಕೆಆರ್‌ಪಿಪಿ ಅಭ್ಯರ್ಥಿ ಅರುಣಾ ಲಕ್ಷ್ಮೀ ಗೆಲುವು ಸಾಧಿಸುವುದು ಖಚಿತ. ಗಂಗಾವತಿ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿ ಯಾರು ಎಂಬ ಪ್ರಶ್ನೆಗೆ ನನಗೆ ಯಾರೂ ಸ್ಪರ್ಧಿಯಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದರು. ಈ ಸಂದರ್ಭದಲ್ಲಿ ಕೆಆರ್‌ಪಿಪಿ ಜಿಲ್ಲಾಧ್ಯಕ್ಷ ಮನೋಹರಗೌಡ ಹೇರೂರು, ರಾಜೇಶರೆಡ್ಡಿ, ಕಾರ್ಯಕರ್ತರು ಇದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts