

ವಿಜಯನಗರ: ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರವಾದ ಜೇಮ್ಸ್ನ ನಿರ್ದೇಶಕ-ನಿರ್ಮಾಪಕ ಇಬ್ಬರೂ ನಿನ್ನೆ ಬಹಳ ಸುದ್ದಿಯಲ್ಲಿದ್ದರು. ಅದಕ್ಕೆ ಕಾರಣ ಒಂದು ಬೇಸರದ ಸಂಗತಿ. ಜೇಮ್ಸ್ ಸಿನಿಮಾವನ್ನು ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡಲಾಗುತ್ತಿದೆ ಎಂಬ ಹಿನ್ನೆಯಲ್ಲಿ ಅವರು ತಮ್ಮ ಬೇಸರ ವ್ಯಕ್ತಪಡಿಸಿದ್ದರು.
ಜೇಮ್ಸ್ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಇಂದು ಕೂಡ ಸುದ್ದಿಯಲ್ಲಿದ್ದು ಮತ್ತೊಂದು ಬೇಸರದ ಬಗ್ಗೆ ಮಾತನಾಡಿದ್ದಾರೆ. ಮಾತ್ರವಲ್ಲ, ಆ ಕುರಿತು ಅವರು ಕ್ಷಮೆ ಕೋರಿದ್ದಲ್ಲದೆ, ಅದರ ಬೆನ್ನಿಗೇ ಒಂದು ಸಂತೋಷದ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮುತ್ತಲ್ಲೂ ಮೋಸ: ಐನೂರಕ್ಕೂ ಹೆಚ್ಚು ಮಂದಿಗೆ ವಂಚನೆ
ಇಂದು ಹೊಸಪೇಟೆಗೆ ಭೇಟಿ ನೀಡಿದ ಅವರು ಅಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಜೇಮ್ಸ್ ಪ್ರಿರಿಲೀಸ್ ಇವೆಂಟ್ ಹೊಸಪೇಟೆಯಲ್ಲೇ ಮಾಡಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಮಾಡಲಾಗಿಲ್ಲ. ಅದಕ್ಕಾಗಿ ನಾನು ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇನೆ ಎಂದು ಅವರು ಹೇಳಿದರು.
ಆದರೆ ಸಕ್ಸಸ್ ಪ್ರೋಗ್ರಾಂ ಹೊಸಪೇಟೆಯಲ್ಲೇ ಮಾಡುತ್ತೇವೆ. ಆ ಬಗ್ಗೆ ಪ್ರಿರಿಲೀಸ್ ಇವೆಂಟ್ನಲ್ಲಿ ಶಿವಣ್ಣ ಅವರೇ ಹೇಳಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ದಿನಾಂಕ ನಿಗದಿ ಮಾಡುತ್ತೇವೆ. ಯಶಸ್ಸನ್ನು ಇಲ್ಲೇ ಹೊಸಪೇಟೆಯಲ್ಲೇ ಆಚರಿಸುತ್ತೇವೆ ಎಂದು ಜೇಮ್ಸ್ ನಿರ್ಮಾಪಕರು ಭರವಸೆ ನೀಡಿದರು.