ಸಿನಿಮಾ

ಜೈಲಿನಲ್ಲಿರುವ ಎಎಪಿ ನಾಯಕ; 35 ಕೆ.ಜಿ ತೂಕ ಕಳೆದುಕೊಂಡು ಆಸ್ಪತ್ರೆಗೆ ದಾಖಲು!

ನವದೆಹಲಿ: ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ತಿಹಾರ್ ಜೈಲಿನಲ್ಲಿರುವ ದೆಹಲಿ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅನಾರೋಗ್ಯಕ್ಕೆ ತುತ್ತಾಗಿದ್ದು, ಸಫ್ದರ್​​ಜಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಎಪಿ ನಾಯಕ ಸತ್ಯೇಂದ್ರ ಜೈನ್ ಇತ್ತೀಚೆಗಷ್ಟೇ ಆರೋಗ್ಯ ಹದಗೆಟ್ಟಿರುವುದಾಗಿ ತಿಳಿಸಿ ಜಾಮೀನು ಕೋರಿದ್ದರು.

ಇದನ್ನೂ ಓದಿ: VIDEO | ಚಲಿಸುವ ಕಾರಿನ ಮೇಲೆ ಕುಳಿತು ಯುವತಿಯ ಫೋಟೋಶೂಟ್; ದಂಡ ವಿಧಿಸಿದ ಪೊಲೀಸರು

ಹಣ ವರ್ಗಾವಣೆ ಪ್ರಕರಣದ ಬಗ್ಗೆ ಜಾರಿ ನಿರ್ದೇಶನಾಲಯ(ಇಡಿ) ತನಿಖೆ ನಡೆಸುತ್ತಿದ್ದು, ಸತ್ಯೇಂದ್ರ ಜೈನ್ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ. ಇದೀಗ ಅನಾರೋಗ್ಯಕ್ಕೆ ತುತ್ತಾಗಿರುವ ಸತ್ಯೇಂದ್ರ ಜೈನ್ ಸುಮಾರು 35 ಕೆ.ಜಿ ತೂಕ ಕಳೆದುಕೊಂಡಿದ್ದು, ಅಸ್ಥಿಪಂಜರದಂತೆ ಆಗಿದ್ದಾರೆಂದು ಅವರ ಪರ ವಕೀಲ ಅಭಿಷೇಕ್ ಸಿಂಘ್ವಿ ತಿಳಿಸಿದ್ದಾರೆ.

ಇದನ್ನೂ ಓದಿ: VIDEO | ಮೊದಲ ಅಧಿವೇಶನ ಆರಂಭಕ್ಕೂ ಮುನ್ನ ಗೋಮೂತ್ರ ಸಿಂಪಡಿಸಿ ಶುದ್ಧೀಕರಿಸಿದ ಕಾಂಗ್ರೆಸ್ ಕಾರ್ಯಕರ್ತರು!

ಜೈಲಿನಲ್ಲಿ ಒಂಟಿತನ ಕಾಡುತ್ತಿದ್ದು, ಖಿನ್ನತೆಗೆ ಒಳಗಾಗಿದ್ದೇನೆ ಎಂದು ಸತ್ಯೇಂದ್ರ ಜೈನ್ ಹೇಳಿಕೊಂಡಿದ್ದರು. ಬಳಿಕ ಜೈಲಿನಲ್ಲಿ ಮನಃಶಾಸ್ತ್ರಜ್ಞರನ್ನು ಸಂಪರ್ಕಿಸಿ ಸಲಹೆ ಪಡೆದುಕೊಂಡಿದ್ದರು. ಈ ವೇಳೆ ಜೈಲಿನಲ್ಲಿ ಮುಕ್ತವಾಗಿ ಎಲ್ಲರೊಂದಿಗೆ ಮಾತನಾಡುತ್ತಾ ಇರಲು ಹೇಳಿದ್ದರು ಎಂದು ವರದಿಯಾಗಿದೆ. (ಏಜೆನ್ಸೀಸ್)

Latest Posts

ಲೈಫ್‌ಸ್ಟೈಲ್