ವೇದಿಕೆ ಮೇಲೆ ಜಗ್ಗೇಶ್ ಕಣ್ಣೀರಿಟ್ಟಿದ್ದು ಏಕೆ?

Jaggesh - Final
Published on

ಬೆಂಗಳೂರು: ‘ಒಂದು ಮಧ್ಯಮ ವರ್ಗದ ಕುಟುಂಬದವನು ಇವತ್ತು ಈ ಲೆವೆಲ್‌ಗೆ ಬೆಳೆದಿದ್ದಾನೆ ಎಂದರೆ ...’ ಅಷ್ಟರಲ್ಲಿ ಜಗ್ಗೇಶ್ ಭಾವುಕರಾದರು. ಅವರ ಕಣ್ಣೀರನ ಕಟ್ಟೆ ಒಡೆದಿತ್ತು. ವೇದಿಕೆಯ ಮೇಲೆ ಜಗ್ಗೇಶ್ ಕಣ್ಣೀರು ಸುರಿಸಿದರು.

ಇದೆಲ್ಲಾ ಆಗಿದ್ದು ಮಂಗಳವಾರ ಮಧ್ಯಾಹ್ನ ಜಗ್ಗೇಶ್​ ಅವರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ. ಮಾಧ್ಯಮದವರೆದುರು ಜಗ್ಗೇಶ್ ಕಾಣಿಸಿಕೊಂಡು ಎಂಟು ತಿಂಗಳುಗಳೇ ಆಗಿದ್ದವು. ತಾವು ಚಿತ್ರರಂಗಕ್ಕೆ ಬಂದು ನಾಲ್ಕು ದಶಕಗಳು ಕಳೆದ ಹಿನ್ನೆಲೆಯಲ್ಲಿ, ತಮ್ಮನ್ನು ಬೆಳೆಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಲು ಈ ಪತ್ರಿಕಾಗೋಷ್ಠಿ ಕರೆದಿದ್ದರು.

ಈ ಪತ್ರಿಕಾಗೋಷ್ಠಿಯಲ್ಲಿ ತಾವು ಅನುಭವಿಸಿದ ಕಷ್ಟ-ಸುಖಗಳನ್ನು ನೆನಪಿಸಿಕೊಂಡ ಶಿವರಾಜಕುಮಾರ್, ತಮಗೆ ಬ್ರೇಕ್ ನೀಡಿದ ‘ರಣರಂಗ’ ಮತ್ತು ‘ಕೃಷ್ಣ ನೀ ಕುಣಿದಾಗ’ ಚಿತ್ರಗಳನ್ನು ಮತ್ತು ಹೀರೋ ಆಗುವುದಕ್ಕೆ ಪ್ರೇರೇಪಿಸಿದ ಅಂಬರೀಶ್ ಅವರನ್ನು ನೆನಪಿಸಿಕೊಂಡರು.

ತಮ್ಮ ನಾಲ್ಕು ದಶಕಗಳ ಸುಧೀರ್ಘ ಪಯಣದ ಕುರಿತು ಮಾತನಾಡಿದ ಅವರು, 'ಈ ಜರ್ನಿ ಹೇಗಾಯ್ತು ನನಗೆ ಈಗಲೂ ಗೊತ್ತಿಲ್ಲ. ನನ್ನ ತಂದೆ-ತಾಯಿ ಕಡೆ ಯಾರೂ ನಟರಿರಲಿಲ್ಲ. ನನ್ನ ಸಂಬಂಧಿಕರು ಈಗಲೂ ಮಧ್ಯಮವರ್ಗದವರೇ. ಈಗಲೂ ನನ್ನ ಬಂಧುಗಳು ಆಟೋ ಓಡಿಸುತ್ತಾರೆ. ಇಂಥದ್ದೊಂದು ಸಣ್ಣ ಕುಟುಂಬದಿಂದ ಬಂದವನು, ಇವತ್ತು ಈ ಲೆವೆಲ್​ಗೆ ಬೆಳೆದಿರುವುದು ನಿಜಕ್ಕೂ ಖುಷಿಯಾಗುತ್ತದೆ. ಈ ಪ್ರಯಾಣದಲ್ಲಿ ನನ್ನಗೆ ಸಾಕಷ್ಟು ಜನ ಪ್ರೋತ್ಸಾಹಿಸಿದ್ದಾರೆ. ಅವರೆಲ್ಲರಿಗೂ ನಾನು ಋಣಿ' ಎಂದು ಜಗ್ಗೇಶ್​ ಭಾವುಕರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net