ಗುಜರಾತ್​ಗೆ ಶೂಟಿಂಗ್​ ಲೊಕೇಷನ್​ ನೋಡೋಕೆ ಹೋಗಿದ್ದ ಪ್ರೇಮ್​ ಎಮ್ಮೆ ಜತೆ ಮರಳಿದ್ರು!

Prem
Published on

ಬೆಂಗಳೂರು: ನಿರ್ದೇಶಕ ಪ್ರೇಮ್​ ಏಕ್​ಲವ್​ಯಾ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ಅವರು, ಇದೀಗ ಹಾಡು, ಒಂದಷ್ಟು ದೃಶ್ಯಗಳ ಸೆರೆಹಿಡಿಯಲು ಲೊಕೇಷನ್​ ಹುಡುಕಾಟದಲ್ಲಿದ್ದಾರೆ. ಹೀಗಿರುವಾಗಲೇ ಲೊಕೇಷನ್​ ನೋಡುಕೊಂಡು ಬರುವಾಗ ಇಬ್ಬರು ಅತಿಥಿಗಳನ್ನೂ ಕರೆದುಕೊಂಡು ಬಂದಿದ್ದಾರೆ.

ಅಂದರೆ, ಗುಜರಾತ್​ಗೆ ತಂಡದ ಜತೆ ಹೋಗಿದ್ದ ಪ್ರೇಮ್​ ಮರಳಿ ಬರುವಾಗ ಎರಡು ಎಮ್ಮೆಗಳ ಜತೆ ಮರಳಿದ್ದಾರೆ. 2000 ಕಿಲೋ ಮೀಟರ್​ ದೂರದಿಂದ ಎಮ್ಮೆ ಮತ್ತದರ ಕರುವನ್ನು ಖರೀದಿಸಿ ತೋಟಕ್ಕೆ ಕರೆತಂದಿದ್ದಾರೆ. ಆ ವಿಚಾರವನ್ನು ಸ್ವತಃ ಅವರೇ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಏಕ್​ಲವ್​ಯಾ ಶೂಟ್​ಗೆ ಲೋಕೇಷನ್ ನೋಡಕ್ಕೆ ಗುಜರಾತ್​ನ ಕಚ್​ಗೆ ಹೋಗಿದ್ದೆ. ಅಲ್ಲಿ ಒಂದ್ ಎಮ್ಮೆನ ನೋಡ್ದೆ, ತುಂಬಾ ಇಷ್ಟ ಆಯ್ತು. ಡಿಸೈಡ್ ಮಾಡ್ದೆ. 2000km ಜೊತೇಲಿ ಕರ್ಕೊಂಡ್ ಬಂದೆ, ತಾಯಿಗೆ ಮಂಡೋದರಿ ಮಗಳಿಗೆ ಭೈರವಿ ಅಂತ ಹೆಸರಿಟ್ಟೆ. ಅಲ್ಲಿಗೆ ಅಮ್ಮನ ತೋಟಕ್ಕೆ ಹೊಸ ಅತಿಥಿ ಎಂಟ್ರಿ ಆದ್ರು..’ ಎಂದು ಪ್ರೇಮ್​ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net