More

    ನಾನು ಯಾವತ್ತೂ ಡಿಪ್ರೆಶನ್​ಗೆ ಹೋಗಲ್ಲ ..ಬೇರೆಯವರಿಗೆ ಡಿಪ್ರೆಶನ್ ಹೋಗುವಂತೆ ಮಾಡುತ್ತೇನೆ: ಜಗದೀಶ್ ಶೆಟ್ಟರ್

    ಹುಬ್ಬಳ್ಳಿ : ಸೋಲು ನಮ್ಮ ಕುಟುಂಬಕ್ಕೆ ಹೊಸದಲ್ಲ. ನಾನು ಸೋತರೆ ಡಿಪ್ರೆಶನ್​​ಗೆ ಹೋಗುತ್ತೇನೆಂದು ಕೆಲವರು ಹೇಳಿದ್ದರು. ನಾನು ಬೇರೆಯವರಿಗೆ ಡಿಪ್ರೆಶನ್ ಹೋಗುವಂತೆ ಮಾಡುತ್ತೇನೆ ಹೊರತು ನಾನು ಯಾವತ್ತೂ ಡಿಪ್ರೆಶನ್​​ಗೆ ಹೋಗಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ನಾವು ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ ಸೋತಿರಬಹುದು ಆದರೆ ರಾಜ್ಯದಲ್ಲಿ ಗೆದ್ದಿದ್ದೇವೆ. ಕಾಂಗ್ರೆಸ್​​ನ ಈ ಗೆಲುವನ್ನು ಬಹುಶಃ ದೆಹಲಿಯಲ್ಲಿ ಕುಳಿತಿರುವವರು ನಿರೀಕ್ಷೆ ಮಾಡಿರಲಿಲ್ಲ. ಜನ ಮನಸ್ಸು ಮಾಡಿದರೆ ಏನು ಬೇಕಾದರೂ ಬದಲಾವಣೆ ಮಾಡಬಹುದು ಅಂತ ತೋರಿಸಿದ್ದಾರೆ. ದೆಹಲಿಯಲ್ಲಿ ಕುಳಿತವರಿಗೆ ಈಗ ಅರ್ಥವಾಗಿದೆ ಎಂದು ಟಾಂಗ್​ ಕೊಟ್ಟಿದ್ದಾರೆ.

    ಕೆಲವರು ನಾನು ಸೋತರೆ ಡಿಪ್ರೆಶನ್​​ಗೆ ಹೋಗುತ್ತಾರೆ ಅಂತ ಹೇಳಿದ್ದರು:
    ಇದು ರಾಷ್ಟ್ರ ರಾಜಕೀಯವನ್ನು ಅಲ್ಲೊಲ ಕಲ್ಲೋಲ ಮಾಡಿದ ಫಲಿತಾಂಶವಾಗಿದೆ. ನಾನು ವಯಕ್ತಿಕವಾಗಿ ಎಂದೂ ಸೋತ್ತಿಲ್ಲ. ಸೋಲು ನಮ್ಮ ಕುಟುಂಬಕ್ಕೆ ಹೊಸದಲ್ಲ. ಕೆಲವರು ನಾನು ಸೋತರೆ ಡಿಪ್ರೆಶನ್ ಗೆ ಹೋಗುತ್ತಾರೆ ಅಂತ ಹೇಳಿದ್ದರು. ನಾನು ಬೇರೆಯವರಿಗೆ ಡಿಪ್ರೆಶನ್ ಹೋಗುವಂತೆ ಮಾಡುತ್ತೇನೆ. ನನ್ನನ್ನು ಡಿಪ್ರೆಶನ್ ಹೋಗುವಂತೆ ಮಾಡಲು ಹೋದವರು ಈಗ ಯಾವ ರೀತಿ ಡಿಪ್ರೆಶನ್​ಗೆ ಹೋಗಿದ್ದಾರೆ ಅನ್ನೋದು ಅರ್ಥ ಮಾಡಿಕೊಳ್ಳಲಿ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

    ಸೋಲು ಅಂತಿಮವಲ್ಲ ಮತ್ತೆ ಪುಟಿದು ಬರಬೇಕು. ದೇವೆಗೌಡ, ಯಡಿಯೂರಪ್ಪ, ಸಿದ್ದರಾಮಯ್ಯ ಸೋತು ಗೆದ್ದವರೇ ಆಗಿದ್ದಾರೆ. ಸೋಲಿನಿಂದ ಎದೆಗುಂದಬೇಕಿಲ್ಲ, ಮುಂದಿನ ಚುನಾವಣೆಯಲ್ಲಿ ಎದ್ದು ಬರೋಣ. ಜಿ.‌ಪಂ, ತಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಅತೀ ಹೆಚ್ಚು ಸ್ಥಾನಗಳು ಬರುತ್ತವೆ. ಆ ರೀತಿಯಲ್ಲಿ ನಾವು ಕಾರ್ಯ ಮಾಡಬೇಕು. ಮುಂದೆ ಬರುವ ಲೋಕಸಭೆ ಚುನಾವಣೆಯಲ್ಲಿ ಈಗಿರುವ ಸ್ಥಾನಗಳನ್ನು ಉಲ್ಟಾ ಮಾಡಬೇಕು. ಕರ್ನಾಟಕದ ಈ ಫಲಿತಾಂಶ ದೇಶದ ಮುಂದಿನ ಎಲ್ಲಾ ಚುನಾವಣೆಗಳ ದಿಕ್ಸೂಚಿಯನ್ನೇ ಬದಲಿಸಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ:  ಪುರುಷ ಕಾರ್ಮಿಕರಿಗೂ ಸ್ತನ ಕ್ಯಾನ್ಸರ್‌ ಪರೀಕ್ಷೆ ಹೆಸರಲ್ಲಿ ಅಕ್ರಮ! ಮುಖ್ಯ ಆರೋಪಿಯೇ ತನಿಖಾಧಿಕಾರಿ

    ಹಣ ಕೊಟ್ಟು ಬಿಜೆಪಿ ಗೆದ್ದಿದೆ: ನಾನು ಆರು ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ. ಎಂದೂ ಹಣ ಕೊಟ್ಟು ಚುನಾವಣೆಗೆ ಗೆದ್ದಿಲ್ಲ.ಆದರೆ ಈ ಬಾರಿ ಹಣ ಕೊಟ್ಟು ಬಿಜೆಪಿ ಗೆದ್ದಿದೆ. ಜನರ ಬ್ರೈನ್ ವಾಶ್ ಮಾಡಿ, ಹಣದ ಪ್ರಭಾವ, ಐಟಿ ರೈಡ್ ಅಸ್ತ್ರ ಬಳಸಿ ಬಿಜೆಪಿ ಗೆದ್ದಿದೆ. ಜನ ಬಿಜೆಪಿ ಮೈಂಡ್ ಸೆಟ್ ನಿಂದ ಹೊರ ಬರೋಕೆ ಸ್ವಲ್ಪ ಟೈಮ್ ಬೇಕಾಗುತ್ತದೆ. ಒಂದೆರಡು ತಿಂಗಳಲ್ಲಿ ಜನರ ಮೈಂಡ್ ಸೆಟ್ ಬದಲಾಗಲಿದೆ. ತಪ್ಪುಗಳನ್ನು ಸರಿಮಾಡಿಕೊಂಡು ಹೋದ್ರೆ, ಮುಂಬರುವ ಯಾವುದೇ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುತ್ತದೆ. ಮುಂದಿನ ಹಲವಾರು ಚುನಾವಣೆಗಳಲ್ಲಿ ಅಗ್ನಿ ಪರೀಕ್ಷೆ ಎದುರಿಸೋಣ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

    ಐದು ಗ್ಯಾರಂಟಿ ಕೊಟ್ಟ ಪಕ್ಷ ಕಾಂಗ್ರೆಸ್ ಆಗಿದೆ. ಪ್ರತಿಪಕ್ಷಗಳು ಈಗಾಗಲೇ ಈ ಬಗ್ಗೆ ಕೂಗೆಬ್ಬಿಸಿವೆ. ಐದರ ಪೈಕಿ ಕನಿಷ್ಟ ಮೂರು ಗ್ಯಾರಂಟಿ ಜಾರಿಗೆ ತಂದ್ರೂ ಲೋಕಸಭೆಯಲ್ಲಿ ಗೆಲುವು ಖಚಿತ. ಗ್ಯಾರಂಟಿ ಜಾರಿಗೆ ಸಮಯಾವಕಾಶ ಬೇಕಾಗುತ್ತದೆ. ಸಿಎಂ ಖಂಡಿತಾ ಜಾರಿಗೆ ತರ್ತಾರೆ ಅಂತ ವಿಶ್ವಾಸವಿದೆ. ಇಡೀ ರಾಜ್ಯದಲ್ಲಿ ನಾನು ಕಾಂಗ್ರೆಸ್ ಸಂಘಟನೆಗೆ ಸಿದ್ಧನಿದ್ದೇನೆ. ಪಕ್ಷ ಕೊಡುವ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ತಿಳಿಸಿದ್ದಾರೆ.

    IPL ಮ್ಯಾಚ್: ಸ್ವಿಗ್ಗಿಯಿಂದ ಹೆಚ್ಚು ಡೆಲಿವರಿ ಆಗಿದ್ದು ಕಾಂಡೋಮ್‌, ಬಿರಿಯಾನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts