More

    IPL ಮ್ಯಾಚ್: ಸ್ವಿಗ್ಗಿಯಿಂದ ಹೆಚ್ಚು ಡೆಲಿವರಿ ಆಗಿದ್ದು ಕಾಂಡೋಮ್‌, ಬಿರಿಯಾನಿ!

    ನವದೆಹಲಿ: ಐಪಿಎಲ್ 2023 ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಗುಜರಾತ್ ಟೈಟಾನ್ಸ್ (GT) ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್‌ಗಳ ಗೆಲುವನ್ನು ದಾಖಲಿಸುವುದರ ಮೂಲಕ ಐದನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಟೂರ್ನಿಗೆ ತೆರೆ ಬಿದ್ದಿದೆ.

    ಫೈನಲ್ ಪಂದ್ಯವನ್ನು ವೀಕ್ಷಿಸಲು ಮಳೆಯನ್ನು ಲೆಕ್ಕಿಸದೇ 75 ಸಾವಿರ ಮಂದಿ ಸ್ಟೇಡಿಯಂಗೆ ಬಂದಿದ್ದಾರೆ. ಐಪಿಎಲ್​ ದಿನ ಆನ್​ಲೈನ್​ ಡೆಲವರಿ ಮಾಡುವ ಕಂಪನಿಯಾಗಿರುವ ಸ್ವಿಗ್ಗಿಯಲ್ಲಿ ಅತೀ ಹೆಚ್ಚು ಆರ್ಡ್​​ಗಳು ಬಂದಿವೆ ಎನ್ನುವುದಾಗಿ ಕಂಪನಿಯೇ ಮಾಹಿತಿ ಹಂಚಿಕೊಂಡಿದೆ.

    ಪಂದ್ಯ ನಡೆಯುತ್ತಿರುವಾಗ ಫುಡ್‌ ಡೆಲಿವರಿ ಸ್ವಿಗ್ಗಿ ಆ್ಯಪ್ ಮೂಲಕವಾಗಿ, ಪಂದ್ಯದ ವೇಳೆ ಪ್ರತಿ ನಿಮಿಷಕ್ಕೆ 212 ಬಿರಿಯಾನಿಗಳು ಆರ್ಡರ್‌ ಆಗಿವೆ. ಒಟ್ಟು 12 ಮಿಲಿಯನ್‌ ಬಿರಿಯಾನಿಗಳು ಫೈನಲ್‌ ಪಂದ್ಯದ ವೇಳೆ ಆರ್ಡರ್‌ ಆಗಿವೆ. ಸ್ವಿಗ್ಗಿ ಇನ್‌ಸ್ಟಾಮಾರ್ಟ್ ನಲ್ಲಿ 2423 ಕಾಂಡೋಮ್‌ಗಳನ್ನು ಆರ್ಡರ್‌ ಮಾಡಿದ್ದಾರೆ ಎಂದು ಸ್ವಿಗ್ಗಿ ಟ್ವೀಟ್‌ ಮಾಡಿದೆ.

    ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿ ಟ್ವೀಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಸೀಸನ್ ವೇಳೆ ಬಿರಿಯಾನಿಯ 12 ಮಿಲಿಯನ್ ಆರ್ಡರ್‌ಗಳನ್ನು ಪಡದಿರುವುದಾಗಿ, ತನ್ನ ಅಪ್ಲಿಕೇಶನ್‌ನಲ್ಲಿ ನಿಮಿಷಕ್ಕೆ 212 ಬಿರಿಯಾನಿಗಳನ್ನು ವಿತರಿಸಿರುವುದಾಗಿದೆ ಎಂದು ಬಹಿರಂಗಪಡಿಸಿದೆ.

    ತಲಾಖ್‌..ತಲಾಖ್‌..ತಲಾಖ್‌..; ಮಂಗಳೂರಿನಲ್ಲಿ ತ್ರಿವಳಿ ತಲಾಖ್‌ ಪ್ರಕರಣ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts