ಕಾರಣ ಬಹಿರಂಗಪಡಿಸುವಂತೆ ಬಹಿರಂಗ ಸವಾಲ್​ ಹಾಕಿದ ಜಗದೀಶ ಶೆಟ್ಟರ್!

Jagadish Shettar
Published on

ಹುಬ್ಬಳ್ಳಿ: ಟಿಕೆಟ್ ಕೊಡದೇ ಇರುವುದಕ್ಕೆ ಕಾರಣ ಬಹಿರಂಗ ಮಾಡಿ ಎಂದು ಜಗದೀಶ ಶೆಟ್ಟರ್ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಯಡಿಯೂರಪ್ಪನವರ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹೊಡೆಯುವ ಕೆಲಸ ಮಾಡಲಾಗುತ್ತಿದೆ ಎಂದಿದ್ದರು. ಅದಾದ ಬಳಿಕ ಇದೀಗ ಕಾರಣ ಹೇಳಿದ್ದರೆ ಪಕ್ಷ ಬಿಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ನಾನೇನು ಗುಲಾಮನಾ?

ಸುದ್ದಿಗೋಷ್ಟಿಯಲ್ಲಿ ಜಗದೀಶ ಶೆಟ್ಟರ್​, "ರೀಜನ್ ಹೇಳಿದ್ರೆ ನಾನು ಪಕ್ಷ ಬಿಡುತ್ತಿಲಿಲ್ಲ. ನನ್ನ ಹಿಚಕಬೇಕು ಎಂದು ಹಾಗೆ ಮಾಡಿದ್ರು. ನಾನೇನು ಗುಲಾಮನಾ?' ಎಂದು ಶೆಟ್ಟರ್ ಪ್ರಶ್ನಿಸಿದ್ದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯಲ್ಲಿ 224 ಕ್ಷೇತ್ರಗಳನ್ನೂ ಗೆಲ್ಲಿಸೋ ವ್ಯಕ್ತಿಗಳಿದ್ದಾರೆ!

ಈ ಸಂದರ್ಭದಲ್ಲಿ ಅವರು "ಬಿಜೆಪಿಯಲ್ಲಿ 224 ಕ್ಷೇತ್ರ ಗೆಲ್ಲಿಸೋ ವ್ಯಕ್ತಿಗಳು ಇದ್ದಾರೆ. ಯಾರು ಬಂದರೂ ನನಗೆ ಭಯ ಇಲ್ಲ. ಅಂಡರ್ ಕರೆಂಟ್​ ಏನಿದೆ ನನಗೆ ಗೊತ್ತಿದೆ. ಜೋಶಿ ಅವರೇ ಪಕ್ಷದಲ್ಲಿ ತತ್ವ ಸಿದ್ದಾಂತ ಏನಿದೆ?

ಕೆಲ‌ಮಂತ್ರಿಗಳು ಸಿಡಿ ಸಲುವಾಗಿ ಸ್ಟೇ ತಗೊಂಡಿದ್ದಾರೆ. ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ನನ್ನ ಸಲುವಾಗಿ ಯಾರೂ ಬರಲಿ ಎಂದು ಕರೆಯಲ್ಲ. ನಾನು ಎಲ್ಲಿಯೂ ಕ್ಷಮೆ ಕೇಳಿಲ್ಲ" ಎಂದರು.

ಕಾಂಗ್ರೆಸ್​ ಸೇರದಿದ್ರೂ ಯಡಿಯೂರಪ್ಪ ಪಕ್ಷ ಒಡೆದಿದ್ದರಲ್ಲ?

ಇನ್ನು ಯಡಿಯೂರಪ್ಪ ಕಾಂಗ್ರೆಸ್ ಸೇರಲಿಲ್ಲ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶೆಟ್ಟರ್, "ಒಟ್ಟು ಪಕ್ಷ ಅಂತಾ ಒಡೆದರಲ್ಲ. ಸೈದ್ದಾಂತಿಕ ವಿರೋಧಿ ಯಾಕೆ,ಪಕ್ಷದಲ್ಲಿ ಸಿದ್ದಾಂತ ಎಲ್ಲಿದೆ. ಸಿದ್ದಾಂತ ಇದ್ರೆ ಇವರು ಅಧಿಕಾರಕ್ಕೆ ಬರ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net