ಚುನಾವಣಾ ಬಿಸಿಯ ನಡುವೆಯೂ ಸಿಎಂ ಬೊಮ್ಮಾಯಿ ಬೆನ್ನು ತಟ್ಟಿದ ಸಿದ್ದರಾಮಯ್ಯ!

cm meets siddaramaiah
Published on

ಬೆಳಗಾವಿ: ಚುನಾವಣಾ ಕಣ ರಂಗೇರುತ್ತಿದ್ದು ರಾಜಕೀಯ ನಾಯಕರ ನಡುವಿನ ಆರೋಪ ಪ್ರತ್ಯಾರೋಪಗಳೂ ಹೆಚ್ಚಾಗುತ್ತಿವೆ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲವೋ ಎನ್ನುವಷ್ಟರ ಮಟ್ಟಿಗೆ ವಾಗ್ದಾಳಿಗಳು ನಡೆಯುತ್ತವೆ. ಆದರೆ ಇಂದು ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಒಂದು ಅಪರೂಪದ ಘಟನೆ ನಡೆದಿದೆ. ಇದು ರಾಜಕೀಯ ನಾಯಕರ ನಡುವೆ ವೈಯಕ್ತಿಕ ದ್ವೇಷ ಇರಲೇ ಬೇಕು ಎಂದೇನಿಲ್ಲ ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕಸ್ಮಿಕವಾಗಿ ಭೇಟಿಯಾಗಿದ್ದಾರೆ. ಈ ಸಂದರ್ಭ ಇಬ್ಬರೂ ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಈ ಸಂದರ್ಭ ಸಿದ್ದರಾಮಯ್ಯ, ಕುಷಲೋಪರಿಯ ಭಾಗವಾಗಿ ಸಿಎಂ ಬೊಮ್ಮಾಯಿಯ ಬೆನ್ನು ತಟ್ಟಿದ್ದಾರೆ. ಇದಾದ ಮೇಲೆ ಇಬ್ಬರೂ ಶೇಕ್​ಹ್ಯಾಂಡ್​ ನೀಡಿದ್ದು ಅಲ್ಲಿಂದ ತೆರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net