

ಮೈಸೂರು: ಚುನಾವಣೆ ಪ್ರಾರಂಭವಾಗುವುದಕ್ಕೂ ಮುನ್ನ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬ ಹೋರಾಟ ಶುರುವಾಗಿತ್ತು. ಒಕ್ಕಲಿಗರೂ ಮೀಸಲಾತಿ ನೀಡದೇ ಹೋಗಿದ್ದಲ್ಲಿ ಹೋರಾಟ ಮಾಡುತ್ತೇವೆ ಎಂದಿದ್ದರು.
ಈ ಸಂದರ್ಭ ರಾಜ್ಯ ಸರ್ಕಾರ ಮುಸ್ಲಿಮರ ಮೀಸಲಾತಿಯನ್ನು ಕಿತ್ತು ಪಂಚಮಸಾಲಿ ಹಾಗೂ ಒಕ್ಕಲಿಗರಿಗೆ ನೀಡಿದ್ದರು. ಅದೇ ಮುಸ್ಲಿಮರಿಗೆ EWS ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗದ ಅಡಿಯಲ್ಲಿ ಮೀಸಲಾತಿ ನೀಡಿದ್ದರು.
ಈ ವಿಚಾರವಾಗಿ ಮೈಸೂರಿನಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ ಡಿ ಕೆ ಶಿವಕುಮಾರ್ ಮಾಧ್ಯಮಗೋಷ್ಠಿ ನಡೆಸಿದ್ದಾರೆ. ಈ ಸಂದರ್ಭ ಮಾತನಾಡಿದ ಸುರ್ಜೇವಾಲ "ಮೀಸಲಾತಿ ವಿಚಾರವಾಗಿ ಬಿಜೆಪಿ ಮೋಸದಾಟ ಬಯಲಾಗಿದೆ. ಇದು ಡಬಲ್ ಇಂಜಿನ್ ಸರ್ಕಾರದ ದ್ರೋಹವಾಗಿದೆ. ಇದನ್ನು ಕಾಂಗ್ರೆಸ್ ಸದಾ ಹೇಳುತಿತ್ತು ಒಕ್ಕಲಿಗ ಲಿಂಗಾಯತರಿಗೆ ಲಾಲಿಪಾಪ್ ಕೊಟ್ಟಂತೆ ಆಗಿದೆ. ಚುನಾವಣೆವರೆಗೂ ಈ ರೀತಿ ಸುಳ್ಳು ಭರವಸೆ ಕೊಡುವುದಾಗಿತ್ತು. ಇದು ಈಗ ಸುಪ್ರೀಂಕೋರ್ಟ್‌ನಲ್ಲಿ ಬಯಲಾಗಿದೆ" ಎಂದು ಹೇಳುತ್ಆ 07 ಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ
ಈ ಸಂದರ್ಭ ಸುರ್ಜೇವಾಲ "2% ಲಿಂಗಾಯತ ಮೀಸಲಾತಿ ರದ್ದಾಗಲಿದೆ. ಒಕ್ಕಲಿಗರ 2 C ಮತ್ತೆ 3Aಗೆ ಹೋಗಲಿದೆ. ಒಕ್ಕಲಿಗರ 2% ಹೆಚ್ಚುವರಿ ರದ್ದಾಗಲಿದೆ. ಅಂತಿಮವಾಗಿ ಯಾರಿಗೂ ಮೀಸಲಾತಿ ಸಿಗುವುದಿಲ್ಲ" ಎಂದಿದ್ದಾರೆ.