ಗೂಂಡಾ ಕಾಯ್ದೆಯಡಿ ಬಂಧಿತ ಆಪ್ತನ ಮನೆಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಭೇಟಿ!

Shettar Chetan
Published on

ಹುಬ್ಬಳ್ಳಿ: ಗೂಂಡಾ ಕಾಯ್ದೆಯಡಿ ಬಂಧಿತನಾಗಿರುವ ತಮ್ಮ ಆಪ್ತ ಚೇತನ್ ಹಿರೇಕೆರೂರ್ ಮನೆಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಭೇಟಿ ನೀಡಿದ್ದಾರೆ. ಇತ್ತೀಚೆಗಷ್ಟೇ ಬಿಜೆಪಿಯನ್ನು ತೊರೆದು ಕಾಂಗ್ರೆಸ್​ಗೆ ಸೇರಿರುವ ಇವರು, ಈಗ ಗೂಂಡಾ ಕಾಯ್ದೆಯಡಿ ಬಂಧಿತ ಆಪ್ತನ ಮನೆಗೆ ಭೇಟಿ ನೀಡುವ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ.

ಚೇತನ್ ಹಿರೇಕೆರೂರ್ ನಿನ್ನೆಯಷ್ಟೇ ಗೂಂಡಾ ಕಾಯ್ದೆಯಡಿ ಬಂಧಿತನಾಗಿದ್ದು, ಹುಬ್ಬಳ್ಳಿಯ ಕೋಟೆಲಿಂಗೇಶ್ವರ ನಗರದಲ್ಲಿರುವ ಆತನ ಮನೆಗೆ ಇಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭೇಟಿ ನೀಡಿ, ಕುಟುಂಬಸ್ಥರ ಜತೆ ಮಾತುಕತೆ ನಡೆಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಜಗದೀಶ ಶೆಟ್ಟರ್​ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಈತ ಶೆಟ್ಟರ್ ಪಕ್ಕವೇ ಇದ್ದ. ತಮ್ಮ ಆಪ್ತ ಚೇತನ್​ನ ಬಂಧನವಾಗುತ್ತಲೇ ಈತನ ಮನೆಗೆ ಶೆಟ್ಟರ್ ಭೇಟಿ ನೀಡಿರುವುದು ಅಚ್ಚರಿ ಮೂಡಿಸಿದೆ. ಕುಟುಂಬಸ್ಥರೊಂದಿಗೆ ಚರ್ಚಿಸಿದ ಶೆಟ್ಟರ್ ಮಾತುಕತೆಯ ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net