

ಮ್ಯಾಂಚೆಸ್ಟರ್: ಮೂರುವರೆ ತಿಂಗಳು ಲಾಕ್ಡೌನ್ನಿಂದಾಗಿ ಲಾಕ್ ಆಗಿದ್ದ ಇಂಗ್ಲೆಂಡ್ ಕ್ರಿಕೆಟಿಗರು, ಇದೀಗ ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಸರಭಣಿಗೆ ಸಜ್ಜಾಗುತ್ತಿದ್ದಾರೆ. ಜುಲೈ 8 ರಿಂದು ಮೂರು ಪಂದ್ಯಗಳ ಟೆಸ್ಟ್ ಸರಣಿಯೂ ಆರಂಭಗೊಳ್ಳಲಿದೆ. ಇದಕ್ಕಾಗಿ ಜೈವಿಕ ಸುರಕ್ಷತಾ ವಾತಾವರಣದಲ್ಲಿ ಉಭಯ ತಂಡಗಳ ತರಬೇತಿ ಕೈಗೊಂಡಿರುವುದು ಹೊಸ ವಿಷಯ ಏನಲ್ಲ. ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ಗೆ ಜೈವಿಕ ಸುರಕ್ಷತಾ ವಾತಾವರಣದಲ್ಲಿ ಅಭ್ಯಾಸ ನಡೆಸಿದರೆ ‘ನಿಗೂಢ’ ಹಾಗೂ ಸೈನ್ಸ್ ಫಿಕ್ಷನ್ (ಸ್ಕೈ-ಫೈ) ಸಿನಿಮಾಗಳು ನೆನಪಿಗೆ ಬರುತ್ತಿವೆ ಅಂತೆ..
30 ಸದಸ್ಯರ ಇಂಗ್ಲೆಂಡ್ ಆಟಗಾರರ ತಂಡ ಸೌಥಾಂಪ್ಟನ್ನಲ್ಲಿ ತರಬೇತಿ ಶಿಬಿರದಲ್ಲಿದೆ. ವೇಗಿ ಮಾರ್ಕ್ ವುಡ್ ಹಾಗೂ ಆಲ್ರೌಂಡರ್ ಬೆನ್ ಸ್ಟೋಕ್ಸ್ ಸೋಮವಾರ ರಾತ್ರಿ ತಂಡ ಕೂಡಿಕೊಂಡರು. ಆದರೆ, ಇಷ್ಟು ಲವಲವಿಕೆಯಿಂದ ಸಹ-ಆಟಗಾರರೊಂದಿಗೆ ಅಭ್ಯಾಸ ನಡೆಸುತ್ತಿದ್ದ ಆಟಗಾರರು, ಇದೀಗ ಸಾಮಾಜಿಕ ಅಂತರ ಅವಶ್ಯಕವಾಗಿದೆ. ‘ಎಲ್ಲರೂ ಮಾಸ್ಕ್ ಹಾಕಿಕೊಂಡೇ ಓಡಾಡುತ್ತಿದ್ದಾರೆ. ಯಾರನ್ನು ಸರಿಯಾಗಿ ಗುರಿತಿಸಲು ಸಾಧ್ಯವಾಗುತ್ತಿಲ್ಲ. ಒಂಥರ ನಿಗೂಢ, ಸ್ಕೈ-ಫೈ ಸಿನಿಮಾಗಳಂತೆ ಭಾಸವಾಗುತ್ತಿದೆ ಎಂದು ಮಾರ್ಕ್ವುಡ್ ಹೇಳಿದ್ದಾರೆ.
ಇಂಗ್ಲೆಂಡ್ನ ಮತ್ತೋರ್ವ ವೇಗಿ ಜ್ರೋಾ ಆರ್ಚರ್ ಇನ್ನು ತಂಡ ಕೂಡಿಕೊಂಡಿಲ್ಲ. ಮನೆಯ ಸದಸ್ಯರೊಬ್ಬರಿಗೆ ಅನಾರೋಗ್ಯವಿದ್ದ ಕಾರಣ 2ನೇ ಬಾರಿಗೆ ಕೋವಿಡ್ ಪರೀಕ್ಷೆಗೆ ಆರ್ಚರ್ ಒಳಗಾಗಿದ್ದಾರೆ. ಇದೀಗ ಮನೆ ಸದಸ್ಯರ ವರದಿ ಕೂಡ ನೆಗೆಟಿವ್ ಬಂದಿದ್ದು, ಆರ್ಚರ್ ವರದಿ ನೆಗೆಟಿವ್ ಬಂದರೆ ಶೀಘ್ರವೇ ತಂಡ ಕೂಡಿಕೊಳ್ಳಲಿದ್ದಾರೆ.