Surat: ನಾವು ನಮ್ಮ ಪೂರ್ವಜರ ಆಚಾರ, ವಿಚಾರ, ಸಂಪ್ರದಾಯಗಳನ್ನು ಉಳಿಸಿಕೊಂಡು ಹೋಗಲು ಬಯಸಯತ್ತೇವೆ. ಕೆಲವೊಂದು ಜವಾಬ್ದಾರಿಗಳು, ಅವರು ನಡೆದುಬಂದ ಹಾದಿಗಳಲ್ಲೇ ನಾವು ನಡೆಯಬೇಕಾಗುತ್ತದೆ. ಆದರೆ ಇಲ್ಲೊಂದು ವಿಚಿತ್ರವಾದ ಪದ್ಧತಿಯಿದೆ. ಅದೇನೆಂದರೆ ಇಲ್ಲಿನ ಪುರುಷರು ಒಂದು ಹೆಣ್ಣಲ್ಲ ಎರಡು ಹುಡುಗಿಯರನ್ನು ಮದುವೆಯಾಗಿ ಸಂಸಾರ ನಡೆಸುವ ವಿಚಿತ್ರವಾದ ಸಂಪ್ರದಾಯವಿದೆ. ಜೊತೆಗೆ ಇದು ಅವರ ಪೂರ್ವಜರು ನಡೆಸಿಕೊಂಡು ಬಂದಂತರ ವಿಚಿತ್ರ ಸಂಪ್ರದಾಯವಂತೆ. ಅದನ್ನೇ ಇಲ್ಲೊಬ್ಬ ಪುರುಷ ಇಂದಿಗೂ ಮುಂದುವರೆಸಿಕೊಳ್ಳಲು ಮುಂದಾಗಿದ್ದಾನೆ. ಹಾಗಾದ್ರೆ ಆ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪಾಕಿಸ್ತಾನದ ಐಎಸ್ಐ ಪರ ಬೇಹುಗಾರಿಕೆ: ಭಯೋತ್ಪಾದನಾ ನಿಗ್ರಹ ದಳದ ಬಲೆಗೆ ಬಿದ್ದ ಮತ್ತೊಬ್ಬ ವ್ಯಕ್ತಿ! Spying for Pakistan
ಗುಜರಾತಿನ ನವಸಾರಿ ಜಿಲ್ಲೆಯ ಖಾನ್ಪುರ ಎಂಬ ಸಣ್ಣ ಪಟ್ಟಣದ ಕುಟುಂಬವೊಂದು ಈ ವಿಚಿತ್ರವಾದ ಸಂಪ್ರದಾಯವನ್ನು ನಡೆಸಲು ಮುಂದಾಗಿ ಗಮನ ಸೆಳೆದಿದೆ. ಈ ಕುಟುಂಬದ 36 ವರ್ಷದ ಮೇಘರಾಜ್ ದೇಶಮುಖ್ ಇಬ್ಬರನ್ನು ಮದುವೆಯಾಗಿ ಮೂವರೂ ಒಟ್ಟಿಗೆ ವಾಸಿಸುವ ಅವರ ಕುಟುಂಬದ ಪೂರ್ವಜರ ಸಂಪ್ರದಾಯದ ಮುಂದುವರಿಸಲು ಮುಂದಾಗಿದ್ದಾರೆ. ಮೇಘರಾಜ್ ತನ್ನ ರಾಮ್ ಮತ್ತು ಅಜ್ಜ ನೇವಲ್ ಅವರು ನಡೆದ ದಾರಿಯಲ್ಲಿಯೇ ನಡೆದಿದ್ದಾರೆ.
ಮೇಘರಾಜ್ ತಂದೆ ರಾಮ್ ಕೂಡಾ ವನಿತಾ ಮತ್ತು ಚಂದಾಳನ್ನು ಮದುವೆಯಾಗಿದ್ದಾರೆ. ಜೊತೆಗೆ ಅವರ ಅಜ್ಜ ನವಲ್ ಸಹ ಸುಕ್ರಿ ಮತ್ತು ಕಾಮು ಅವರನ್ನು ವಿವಾಹವಾಗಿದ್ದಾರೆ. ಹೀಗಾಗಿ ಈಗ ಮೇಘರಾಜ್ ಕೂಡಾ ಕಾಜಲ್ ಮತ್ತು ರೇಖಾ ಅವರನ್ನು ವಿವಾಹವಾಗಲು ಮುಂದಾಗಿದ್ದಾನೆ. 16 ವರ್ಷಗಳಿಂದ ಮೇಘರಾಜ್ ಕಾಜಲ್ ಜೊತೆ ಮತ್ತು 13 ವರ್ಷಗಳಿಂದ ರೇಖಾ ಜೊತೆ ಸಂಸಾರ ನಡೆಸುತ್ತಿದ್ದಾರೆ. ಈಗ ಮೇಘರಾಜ್ ಇಬ್ಬರು ಮಹಿಳೆಯರ ಜೊತೆ ವಿವಾಹವಾಗಲು ಮುಂದಾಗಿದ್ದಾರೆ.
“ನಾನು ರೇಖಾ ಜೊತೆ ಸ್ನೇಹ ಬೆಳೆಸಿಕೊಂಡೆ, ಆದರೆ ನಾನು ಕಾಜಲ್ ಳನ್ನೂ ಪ್ರೀತಿಸುತ್ತಿದೆ. ನಾನು ಅವರಿಬ್ಬರಿಗೂ ಸ್ಪಷ್ಟಪಡಿಸಿದೆ, ಮತ್ತು ಅವರು ಸಹೋದರಿಯರಂತೆ ಬದುಕಲು ಒಪ್ಪಿಕೊಂಡರು” ಎಂದು ಮೇಘರಾಜ್ ಹೇಳಿದ್ದಾರೆ.
ಮನೆಯನ್ನು ನಿರ್ವಹಿಸುವುದರ ಜೊತೆಗೆ, ಕಾಜಲ್ ಮತ್ತು ರೇಖಾ ಮೇಘರಾಜ್ ಅವರ ಎರಡು ಅಂಗಡಿಗಳಿಗೂ ಸಹಾಯ ಮಾಡುತ್ತಾರೆ. ಇಷ್ಟು ವರ್ಷಗಳ ನಂತರ ಮದುವೆಯಾದ ಮೇಘರಾಜ್, ತಾನು ಮೊದಲು ಆರ್ಥಿಕವಾಗಿ ಸುಧಾರಿಸಿರಲಿಲ್ಲ ಆದರೆ ಕ್ರಮೇಣ ಒಂದು ಹಂತಕ್ಕೆ ತಲುಪಿದ್ದೇನೆ ಮತ್ತು ಕಾಜಲ್ ಮತ್ತು ರೇಖಾ ಅವರನ್ನು ಮದುವೆಯಾಗಲು ನಿರ್ಧರಿಸಿದ ಎಂದು ತಿಳಿಸಿದ್ದಾರೆ.
“ನಾವು ಮೊದಲ ಬಾರಿಗೆ ಭೇಟಿಯಾದಾಗಿನಿಂದ ಸಂತೋಷದಿಂದ ಬದುಕುತ್ತಿದ್ದೇವೆ. ಮೇಘರಾಜ್ ನಮ್ಮೆಲ್ಲರನ್ನೂ ಸಂತೋಷ ಮತ್ತು ಆರಾಮದಾಯಕವಾಗಿರಿಸುತ್ತಾನೆ” ಎಂದು ಕಾಜಲ್ ಹೇಳಿದರೆ, “ಮೇಘರಾಜ್ ಮೇಲಿನ ಪ್ರೀತಿ ಎಲ್ಲಕ್ಕಿಂತ ದೊಡ್ಡದು. ಕಾಜಲ್ ಮತ್ತು ನಾನು ಸಹೋದರಿಯರಂತೆ ಬದುಕುತ್ತೇವೆ ಮತ್ತು ದೈನಂದಿನ ಜೀವನದಲ್ಲಿ ಪರಸ್ಪರ ಸಹಾಯ ಮಾಡುತ್ತೇವೆ” ಎಂದು ರೇಖಾ ಅಭಿಪ್ರಯಾಯವನ್ನು ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್)
‘ನನಗೆ ಅದು ಕಾಣಿಸದಿದ್ದರೆ ನಾನು ಏನು ಮಾಡಬೇಕು?’ ಅಪರೂಪದ ಸಮಸ್ಯೆಯಿಂದ ಬಳಲುತ್ತಿರುವ ನಟಿ..payal rajput