

End Conflict: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಸಂಘರ್ಷ ಇದೀಗ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಎರಡೂ ದೇಶಗಳಿಂದ ಕ್ಷಿಪಣಿ ದಾಳಿಗಳ ಸುರಿಮಳೆಯೇ ಹರಿದುಬರುತ್ತಿವೆ. ಮೊದಲಿಗೆ ಸರಣಿ ದಾಳಿಗಳನ್ನು ನಡೆಸಿದ ಇಸ್ರೇಲ್ಗೆ ಈಗ ಇರಾನ್ ಪ್ರತೀಕಾರದ ಬಿಸಿಯನ್ನು ಪ್ರತಿದಾಳಿಯ ಮೂಲಕ ತೋರಿಸುತ್ತಿದೆ. ಕ್ಷಿಪಣಿ, ಡ್ರೋನ್ ದಾಳಿಗಳ ಸುಳಿಯಲ್ಲಿ ಸಿಲುಕಿ ನೂರಾರು ನಾಗರೀಕರು ಪ್ರಾಣಬಿಟ್ಟರೂ ಎರಡೂ ದೇಶಗಳ ಮಧ್ಯೆ ಭುಗಿಲೆದ್ದಿರುವ ದ್ವೇಷದ ಕಿಚ್ಚು ಸದ್ಯ ಆರುವಂತೆ ಕಾಣುತ್ತಿಲ್ಲ.
ಇರಾನ್ನ ಸುಪ್ರೀಂ ನಾಯಕನನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಕುರಿತು ಇಸ್ರೇಲ್ ಹೂಡಿರುವ ಸಂಚು ಸರಿಯಲ್ಲ. ಇದನ್ನು ಈ ಕೂಡಲೇ ಕೈಬಿಡಿ. ನಿಮ್ಮ ಈ ಗುರಿ ಪ್ರಸ್ತುತ ಸಂಘರ್ಷವನ್ನು ಇನ್ನಷ್ಟೂ ಹದಗೆಡಿಸಬಹುದೇ ಹೊರತು ಕಡಿಮೆ ಮಾಡುವುದಿಲ್ಲ ಎಂದು ಹೇಳಿದ್ದರು. ಟ್ರಂಪ್ ಎಚ್ಚರಿಕೆ ಮಾತುಗಳ ಬೆನ್ನಲ್ಲೇ 'ಎಬಿಸಿ' ಸಂದರ್ಶನದಲ್ಲಿ ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, "ಇರಾನಿಯನ್ನರು ಒಬ್ಬೇ ಒಬ್ಬ ಅಮೆರಿಕನ್ನರನ್ನು ಹತ್ಯೆಗೈದಿದ್ದಾರೆಯೇ? ಇಲ್ಲ ಅಲ್ವೇ. ಅವರು ಹಾಗೆ ಮಾಡುವವರೆಗೆ, ನಾವು ರಾಜಕೀಯ ನಾಯಕತ್ವವನ್ನು ಹಿಂಬಾಲಿಸುವ ಬಗ್ಗೆಯೂ ಮಾತನಾಡುವುದಿಲ್ಲ" ಎಂದು ಟ್ರಂಪ್ ಮಾತಿಗೆ ತಿರುಗೇಟು ನೀಡಿದರು.
ಮಾತು ಮುಂದುವರಿಸಿದ ಬೆಂಜಮಿನ್ ನೆತನ್ಯಾಹು, "ಇರಾನ್ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಹತ್ಯೆಗೈಯುವುದೇ ಎರಡೂ ದೇಶಗಳ ನಡುವಿನ ಸಂಘರ್ಷಕ್ಕೆ ಕೊನೆ ಎಂದು ಗುಡುಗಿದರು. ಇರಾನ್ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಗಳನ್ನು ಸಮರ್ಥಿಸಿಕೊಂಡಿದ್ದು, ಸಂಘರ್ಷವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಬದಲು ಅದನ್ನು ಶೀಘ್ರವೇ ಅಂತ್ಯಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂಬ ಮಾತುಗಳನ್ನಾಡಿದ್ದಾರೆ.