ಗಾಜಾ ಮೇಲೆ ಇಸ್ರೇಲ್ ದಾಳಿ; ಒಂದೇ ದಿನ 150 ಮಂದಿ ಬಲಿ; 450 ಮಂದಿಗೆ ಗಾಯ| Israel war

isreal
Published on

ಈ ಅಂಕಿ-ಅಂಶಗಳ ಪ್ರಕಾರ ಯುದ್ಧ ಪ್ರಾರಂಭವಾದಾಗಿನಿಂದ ಗಾಜಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 53,272 ಕ್ಕೆ ತಲುಪಿದ್ದು, 120,673 ಜನರು ಗಾಯಗೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಟೆಲ್ ಅವೀವ್: ಹಮಾಸ್ ಉಗ್ರಗಾಮಿ ಸಂಘಟನೆಯನ್ನು ಶತಾಯ ಗತಾಯ ಸರ್ವನಾಶ ಮಾಡಿಯೇ ತೀರುತ್ತೇವೆ ಎಂದು ಇಸ್ರೇಲ್ ಸೇನೆ ದಾಳಿ ಮುಂದುವರೆಸಿದೆ. ಗಾಜಾ ಪಟ್ಟಿಯ ಮೇಲೆ ಇಸ್ರೇಲಿ ದಾಳಿಗಳು ತೀವ್ರಗೊಂಡಿದ್ದು, ಇತ್ತೀಚಿನ 24 ಗಂಟೆಗಳ ವರದಿ ಅವಧಿಯಲ್ಲಿ ಸುಮಾರು 150 ಜನರು ಸಾವನ್ನಪ್ಪಿದ್ದಾರೆ ಎಂದು ಬಾಂಬ್ ದಾಳಿಗೊಳಗಾದ ಪ್ರದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ.

ಆಪರೇಷನ್ ಗಿಡಿಯಾನ್ಸ್ ರಥ

ಗಿಡಿಯನ್ಸ್ ರಥಗಳು ಕಾರ್ಯಾಚರಣೆಯ ಆರಂಭಿಕ ಹಂತದ ಭಾಗವಾಗಿ ಮತ್ತು ಗಾಜಾದಲ್ಲಿ ಅಭಿಯಾನದ ವಿಸ್ತರಣೆಯ ಭಾಗವಾಗಿ ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದು ಐಡಿಎಫ್ ಹೇಳಿದೆ. ಕಳೆದ ದಿನದಲ್ಲಿ ಐಡಿಎಫ್ ವ್ಯಾಪಕ ದಾಳಿಗಳನ್ನು ನಡೆಸಿ ಗಾಜಾ ಪಟ್ಟಿಯಲ್ಲಿನ ಕಾರ್ಯತಂತ್ರದ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಪಡೆಗಳನ್ನು ಸಜ್ಜುಗೊಳಿಸಿದೆ.

ಇಸ್ರೇಲಿ ರಕ್ಷಣಾ ಪಡೆಗಳು ಗಾಜಾ ಪಟ್ಟಿಯಲ್ಲಿ ದಾಳಿ ಮುಂದುವರೆದಂತೆ ಆಪರೇಷನ್ ಗಿಡಿಯಾನ್ಸ್ ರಥಗಳನ್ನು ಪ್ರಾರಂಭಿಸಿವೆ. ಗಾಜಾದ ಉತ್ತರದಲ್ಲಿ ಹಾಗೂ ಗಾಜಾ ನಗರದ ತುಫಾ ನೆರೆಹೊರೆಯ ಪೂರ್ವ ಭಾಗದಲ್ಲಿ ನಿರಂತರ ಸ್ಫೋಟಗಳು ಸಂಭವಿಸಿವೆ. ಪಟ್ಟಿಯ ದಕ್ಷಿಣದಲ್ಲಿರುವ ಖಾನ್ ಯೂನಿಸ್, ಜಬಾಲಿಯಾ ಮತ್ತು ದೇರ್ ಅಲ್-ಬಲಾಹ್‌ನಲ್ಲಿ ವ್ಯಾಪಕ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ.

ಕಾರ್ಯಾಚರಣೆ ತೀವ್ರಗೊಳ್ಳುತ್ತಿದ್ದಂತೆ ಮುಂಬರುವ ದಿನಗಳಲ್ಲಿ ಸೈನಿಕರು ಮತ್ತು ಮೀಸಲು ಪಡೆಗಳು ಸೇರಿದಂತೆ ಸಾವಿರಾರು ಇಸ್ರೇಲಿ ಪಡೆಗಳು ಗಾಜಾವನ್ನು ಪ್ರವೇಶಿಸುವ ನಿರೀಕ್ಷೆಯಿದೆ.

ಕದನ ವಿರಾಮ ಮಾತುಕತೆಗಳನ್ನು ಪುನರಾರಂಭಿಸಲು ಮತ್ತು ತನ್ನ ದಿಗ್ಬಂಧನವನ್ನು ಕೊನೆಗೊಳಿಸಲು ಅಂತರರಾಷ್ಟ್ರೀಯ ಒತ್ತಡ ಹೆಚ್ಚುತ್ತಿರುವ ಹೊರತಾಗಿಯೂ ಇಸ್ರೇಲ್ ತನ್ನ ಬಾಂಬ್ ದಾಳಿಯನ್ನು ತೀವ್ರಗೊಳಿಸಿದೆ ಮತ್ತು ಗಡಿಯಲ್ಲಿ ಶಸ್ತ್ರಸಜ್ಜಿತ ಪಡೆಗಳನ್ನು ನಿರ್ಮಿಸಿದೆ.

ಬೆದರಿಕೆಯಿಂದ ಮುಕ್ತವಾಗುವವರೆಗೆ ಮತ್ತು ನಮ್ಮ ಎಲ್ಲಾ ಒತ್ತೆಯಾಳುಗಳು ಮನೆಗೆ ಸೇರುವವರೆಗೆ ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದೆ ಮತ್ತು 24 ಗಂಟೆಗಳಲ್ಲಿ ಗಾಜಾ ಪಟ್ಟಿಯಾದ್ಯಂತ 150 ಕ್ಕೂ ಹೆಚ್ಚು ಭಯೋತ್ಪಾದಕ ಗುರಿಗಳ ಮೇಲೆ ದಾಳಿ ನಡೆಸಿದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net