ಟೆಹ್ರಾನ್: ಇರಾಕ್ ಮತ್ತು ಸಿರಿಯಾದಲ್ಲಿನ ಇಸ್ಲಾಮಿಕ್ ಸ್ಟೇಟ್ ನಾಯಕನನ್ನು ಕೊಲ್ಲಲಾಗಿದೆ ಎಂದು ಇರಾಕ್ ಪ್ರಧಾನಿ ಹೇಳಿದ್ದಾರೆ. ಈ ವಿಷಯದ ಕುರಿತು ಡೊನಾಲ್ಡ್ ಟ್ರಂಪ್(Donald Trump) ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿ: ಪ್ರಧಾನಿ ಮೋದಿ & ಡೊನಾಲ್ಡ್ ಟ್ರಂಪ್ರನ್ನು ಶ್ಲಾಘಿಸಿದ ರಷ್ಯಾ ಅಧ್ಯಕ್ಷ; ವ್ಲಾಡಿಮಿರ್ ಪುಟಿನ್ ಹೇಳಿದ್ದೇನು? | Putin
ಇರಾಕ್‌ನಲ್ಲಿ ಪರಾರಿಯಾಗಿದ್ದ ಐಸಿಸ್ ನಾಯಕನನ್ನು ಕೊಲ್ಲಲಾಯಿತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. ನಮ್ಮ ಧೈರ್ಯಶಾಲಿ ಯೋಧರು, ಇರಾಕಿ ಸರ್ಕಾರ ಮತ್ತು ಕುರ್ದಿಷ್ ಪ್ರಾದೇಶಿಕ ಆಡಳಿತದ ಸಹಕಾರದೊಂದಿಗೆ ಅವನನ್ನು ಪತ್ತೆಹಚ್ಚಿ ಕೊಂದರು ಎಂದು ತಿಳಿಸಿದರು.
ಇಸ್ಲಾಮಿಕ್ ಸ್ಟೇಟ್ ವಿರುದ್ಧ ಹೋರಾಡುತ್ತಿರುವ ಅಮೆರಿಕ ನೇತೃತ್ವದ ಒಕ್ಕೂಟದ ಬೆಂಬಲದೊಂದಿಗೆ ಇರಾಕಿ ಭದ್ರತಾ ಪಡೆಗಳಿಂದ ಅಬು ಖದೀಜಾ ಎಂದೂ ಕರೆಯಲ್ಪಡುವ ಅಬ್ದುಲ್ಲಾ ಮಕ್ಕಿ ಮುಸ್ಲಿಹ್ ಅಲ್-ರುಫೈ ಕೊಲ್ಲಲ್ಪಟ್ಟರು ಎಂದು ಇರಾಕಿ ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ತಿಳಿಸಿದರು.
ಇರಾಕಿ ರಾಷ್ಟ್ರೀಯ ಗುಪ್ತಚರ ಸೇವೆಯು ಜಂಟಿ ಕಾರ್ಯಾಚರಣೆ ಕಮಾಂಡ್ ಮತ್ತು ಅಂತಾರಾಷ್ಟ್ರೀಯ ಒಕ್ಕೂಟ ಪಡೆಗಳ ಸಹಕಾರ ಮತ್ತು ಸಮನ್ವಯದೊಂದಿಗೆ ಭಯೋತ್ಪಾದಕ ಅಬ್ದುಲ್ಲಾ ಮಕಿ ಮುಸ್ಲೆಹ್ ಅಲ್-ರಿಫಾಯಿ (ಅಡ್ಡಹೆಸರು ಅಬು ಖದೀಜಾ) ಅವರನ್ನು ಕೊಂದಿತು. ಇರಾಕ್ ಮತ್ತು ವಿಶ್ವದ ಅತ್ಯಂತ ಅಪಾಯಕಾರಿ ಭಯೋತ್ಪಾದಕರಲ್ಲಿ ಒಬ್ಬನೆಂದು ಅವನನ್ನು ಪರಿಗಣಿಸಲಾಗಿತ್ತು. ಈ ಮಹತ್ವದ ಭದ್ರತಾ ಸಾಧನೆಗಾಗಿ ನಾವು ಇರಾಕ್, ಇರಾಕಿಗಳು ಮತ್ತು ಎಲ್ಲಾ ಶಾಂತಿಪ್ರಿಯ ಜನರನ್ನು ಅಭಿನಂದಿಸುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
CENTCOM Forces Kill ISIS Chief of Global Operations Who Also Served as ISIS #2
On March 13, U.S. Central Command forces, in cooperation with Iraqi Intelligence and Security Forces, conducted a precision airstrike in Al Anbar Province, Iraq, that killed the Global ISIS #2 leader,… pic.twitter.com/rWeEoUY7Lw
— U.S. Central Command (@CENTCOM) March 15, 2025
ಅಬು ಖದೀಜಾ, ಇಸ್ಲಾಮಿಕ್ ಸ್ಟೇಟ್‌ಗಾಗಿ ಇರಾಕ್ ಮತ್ತು ಸಿರಿಯಾದ ಗವರ್ನರ್ ಹುದ್ದೆಯನ್ನು ಹೊಂದಿದ್ದರು. ಅದರ ವಿದೇಶಿ ಕಾರ್ಯಾಚರಣೆ ಕಚೇರಿಗಳ ಮುಖ್ಯಸ್ಥರೂ ಆಗಿದ್ದರು. ಐಸಿಸ್ ನಾಯಕನ ಮೇಲೆ 2023ರಲ್ಲಿ ಅಮೆರಿಕವು ನಿರ್ಬಂಧ ಹೇರಿತ್ತು. ಇರಾಕಿ ಪಡೆಗಳ ಪ್ರಸ್ತುತ ಮಿಲಿಟರಿ ಕಾರ್ಯಾಚರಣೆಯನ್ನು ಅಮೆರಿಕದ ಪಡೆಗಳ ಸಮನ್ವಯದೊಂದಿಗೆ ನಡೆಸಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಮೆರಿಕ ಮತ್ತು ಇರಾಕ್, ಇರಾಕ್‌ನಲ್ಲಿ ತಮ್ಮ ದಶಕದ ಕಾಲದ ಮಿಲಿಟರಿ ಕಾರ್ಯಾಚರಣೆಯನ್ನು ಒಟ್ಟಾಗಿ ಕೊನೆಗೊಳಿಸುವುದಾಗಿ ಮತ್ತು ನಿಧಾನವಾಗಿ ಅಮೆರಿಕದ ಸೈನ್ಯವನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದವು.(ಏಜೆನ್ಸೀಸ್)