ಪ್ರಧಾನಿ ಮೋದಿ & ಡೊನಾಲ್ಡ್ ಟ್ರಂಪ್​ರನ್ನು ಶ್ಲಾಘಿಸಿದ ರಷ್ಯಾ ಅಧ್ಯಕ್ಷ; ವ್ಲಾಡಿಮಿರ್ ಪುಟಿನ್ ಹೇಳಿದ್ದೇನು? | Putin

blank

ಮಾಸ್ಕೋ: ರಷ್ಯಾ ಮತ್ತು ಯುಕ್ರೇನ್ ಕದನ ವಿರಾಮದ ಕುರಿತು ಚರ್ಚೆ ತೀವ್ರಗೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಮತ್ತು ಯುಕ್ರೇನ್‌ಗೆ ಕದನ ವಿರಾಮ ಒಪ್ಪಂದ ಮಾಡಿಕೊಳ್ಳುವಂತೆ ನಿರಂತರವಾಗಿ ಮನವಿ ಮಾಡುತ್ತಿದ್ದರೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡೂ ದೇಶಗಳು ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಕದನ ವಿರಾಮ ಪ್ರಸ್ತಾಪದ ಕುರಿತು ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯನ್ನು ನೀಡುತ್ತಾ ರಷ್ಯಾ ಅಧ್ಯಕ್ಷ ಪುಟಿನ್(Putin)​ ವಿಶ್ವದ ಎಲ್ಲಾ ನಾಯಕರಿಗೆ ಧನ್ಯವಾದ ಅರ್ಪಿಸಿದರು.

ಇದನ್ನು ಓದಿ: ಟೆಸ್ಲಾ ಕಾರು ಖರೀದಿಸಿದ ಅಮೆರಿಕ ಅಧ್ಯಕ್ಷ ; ಮಸ್ಕ್ ಅವರನ್ನು ಶಿಕ್ಷಿಸಲು ಸಾಧ್ಯವಿಲ್ಲ ಎಂದಿದ್ದೇಕೆ ಡೊನಾಲ್ಡ್​ ಟ್ರಂಪ್​​ | Donald Trump

ಈ ಮಧ್ಯೆ ಕದನ ವಿರಾಮವನ್ನು ಪ್ರತಿಪಾದಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್ ಅವರಿಗೆ ಪುಟಿನ್ ಧನ್ಯವಾದ ತಿಳಿಸಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾಡ ಸಿಲ್ವಾ ಸೇರಿದಂತೆ ವಿಶ್ವ ನಾಯಕರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಧನ್ಯವಾದ ತಿಳಿಸಿದರು.

ಬೆಲರೂಸಿಯನ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವ್ಲಾಡಿಮಿರ್ ಪುಟಿನ್, ಯುದ್ಧವನ್ನು ಕೊನೆಗೊಳಿಸುವ ಪ್ರಸ್ತಾಪಗಳನ್ನು ರಷ್ಯಾ ಒಪ್ಪುತ್ತದೆ. ಆದರೆ ಕದನ ವಿರಾಮದ ನಂತರ ದೀರ್ಘಾವಧಿಯ ಶಾಂತಿ ನೆಲೆಸುತ್ತದೆ ಮತ್ತು ಪರಿಸ್ಥಿತಿಯನ್ನು ಸೃಷ್ಟಿಸಿದ ಕಾರಣಗಳನ್ನು ತೆಗೆದುಹಾಕಲಾಗುತ್ತದೆ ಎಂದು ನಮಗೆ ಭರವಸೆ ನೀಡಬೇಕಾಗಿದೆ ಎಂದು ಹೇಳಿದರು.

ಕದನ ವಿರಾಮ ಒಪ್ಪಂದದಲ್ಲಿ ಕೆಲವು ಸೂಕ್ಷ್ಮ ವ್ಯತ್ಯಾಸಗಳಿವೆ ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂಬುದರ ಕುರಿತು ಅವರಿಗೆ ಗಂಭೀರ ಪ್ರಶ್ನೆಗಳಿವೆ. ನಾವು ನಮ್ಮ ಅಮೆರಿಕನ್ ಸಹೋದ್ಯೋಗಿಗಳೊಂದಿಗೆ ಮಾತನಾಡಬೇಕು ಎಂದು ನಾನು ಭಾವಿಸುತ್ತೇನೆ. ಅಧ್ಯಕ್ಷ ಟ್ರಂಪ್ ಅವರೊಂದಿಗೆ ಬಹುಶಃ ಫೋನ್‌ನಲ್ಲಿ ಮಾತನಾಡಿ ಅವರೊಂದಿಗೆ ಚರ್ಚಿಸಬಹುದು ಎಂದು ರಷ್ಯಾದ ಅಧ್ಯಕ್ಷರು ಹೇಳಿದರು.

ಇತ್ತೀಚೆಗೆ ಅಮೆರಿಕವು ಯಾವುದೇ ಷರತ್ತುಗಳಿಲ್ಲದೆ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ರಷ್ಯಾವನ್ನು ಕೇಳಿತ್ತು. ಟ್ರಂಪ್ ಅವರು ಪುಟಿನ್ ಅವರನ್ನು ಭೇಟಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಅಲ್ಲದೆ ಕೆಲ ದಿನಗಳ ಹಿಂದೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಅವರೊಂದಿಗೆ ಮಾತನಾಡಿದರು. ಅಮೆರಿಕದಲ್ಲಿ ನಡೆದ ಸಭೆಯು ಪ್ರಪಂಚದ ಗಮನ ಸೆಳೆಯಿತು. ವಾಸ್ತವವಾಗಿ ಸಭೆಯ ಸಮಯದಲ್ಲಿ ಅಧ್ಯಕ್ಷ ಟ್ರಂಪ್ ಮತ್ತು ಯುಕ್ರೇನಿಯನ್ ಅಧ್ಯಕ್ಷರ ನಡುವೆ ಬಿಸಿ ಮಾತಿನ ಚಕಮಕಿ ನಡೆಯಿತು.

ಝೆಲೆನ್ಸ್ಕಿಯ ಹಠಮಾರಿತನದಿಂದಾಗಿ ಜಗತ್ತು 3ನೇ ಮಹಾಯುದ್ಧದತ್ತ ಸಾಗುತ್ತಿದೆ ಎಂದು ಟ್ರಂಪ್ ಹೇಳಿದ್ದರು. ಯಾವುದೇ ಷರತ್ತುಗಳಿಲ್ಲದೆ ಯುಕ್ರೇನ್ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಕೊಳ್ಳಬೇಕು ಎಂದಿದ್ದರು. ಅದೇ ಸಮಯದಲ್ಲಿ ಝೆಲೆನ್ಸ್ಕಿ ತನ್ನ ಭೂಮಿಯ ಒಂದು ಇಂಚು ಕೂಡ ರಷ್ಯಾಕ್ಕೆ ನೀಡುವುದಿಲ್ಲ ಎಂದು ಹೇಳಿದರು. ಅಲ್ಲದೆ ಕದನ ವಿರಾಮದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲಿ ರಷ್ಯಾ-ಯುಕ್ರೇನ್ ಪರಸ್ಪರ ನಿರಂತರವಾಗಿ ದಾಳಿ ನಡೆಸುತ್ತಿವೆ.(ಏಜೆನ್ಸೀಸ್​​)

ಮಾರ್ಚ್ 19ರ ಮೊದಲು ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ಹಿಂತಿರುಗುವುದಿಲ್ಲ; ನಾಸಾ ಹೀಗೇಳಿದ್ದೇಕೆ? | Sunita Williams

Share This Article

ನಾಗರಹಾವು ಕಚ್ಚಿದ್ರೆ ತಕ್ಷಣ ಈ ರೀತಿ ಮಾಡಿ… ಇಲ್ಲವಾದಲ್ಲಿ ಮೂರೇ ನಿಮಿಷಕ್ಕೆ ಪ್ರಾಣ ಹೋಗುತ್ತೆ! Cobra Snake

Cobra Snake : ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು…

ದೇ ಪದೇ ಗಂಟಲು ನೋವು ಬರುತ್ತಿದೆಯೇ? ಹಾಗಾದ್ರೆ ಈ ಸುಲಭ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ | Home remedies

Home remedies: ಹವಾಮಾನ ಬದಲಾದಂತೆ ಸೋಂಕಿನ ಹರಡುವಿಕೆ ಕೂಡಾ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ ಅನೇಕ ಜನರು…

ಈರುಳ್ಳಿ ರಸ ಕುಡಿಯುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ | Onion Juice

Onion Juice: ಈರುಳ್ಳಿ ನಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸುವ ಪ್ರಮುಖ ಪದಾರ್ಥಗಳಲ್ಲಿ ಒಂದಾಗಿದೆ. ಇದು ಆಡುಗೆಯನ್ನು…