ತನ್ನದೇ ದಾಖಲೆ ಉಡೀಸ್​ ಮಾಡುವಲ್ಲಿ ಹಿಂದೆಬಿದ್ದ SRH​! ಆರ್​ಆರ್​ ಬೌಲರ್​ಗಳ ಬೆವರಿಳಿಸಿದ ಕಿಶನ್ ಭರ್ಜರಿ ಶತಕ | SRHvsRR

ವಿಜಯವಾಣಿ (58)
Published on

SRHvsRR: ಕಳೆದ ಬಾರಿ ಐಪಿಎಲ್ ಆವೃತ್ತಿಯಲ್ಲಿ ತನ್ನದೇ ಅತಿ ಹೆಚ್ಚು ರನ್​ಗಳ ದಾಖಲೆಯನ್ನು ಮುರಿದಿದ್ದ ಸನ್​ರೈಸರ್ಸ್​ ಹೈದರಾಬಾದ್​, 2025ರ ಐಪಿಎಲ್​ನ ಇಂದಿನ ಪಂದ್ಯದಲ್ಲಿ ಮತ್ತೊಮ್ಮೆ ತನ್ನದೇ ದಾಖಲೆಯನ್ನು ಮುರಿಯುವ ಅವಕಾಶವನ್ನು ಎರಡೇ ಎರಡು ರನ್​ಗಳಿಂದ ಕಳೆದುಕೊಂಡಿತು.

ಕಳೆದ ಸೀಸನ್​ನಲ್ಲಿ 20 ಓವರ್​ ಅಂತ್ಯಕ್ಕೆ 287 ರನ್​ಗಳನ್ನು ಸಿಡಿಸುವ ಮೂಲಕ ಐಪಿಎಲ್​ ಇತಿಹಾಸದಲ್ಲಿ ಅತೀ ಹೆಚ್ಚು ರನ್ ದಾಖಲಿಸಿದ ತಂಡ ಎಂಬ ದಾಖಲೆಗೆ ಎಸ್​ಆರ್​ಎಚ್​ ಸಾಕ್ಷಿಯಾಗಿತ್ತು. ಆದರೆ, ಇಂದಿನ ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 286 ರನ್​ ದಾಖಲಿಸಿದ ಎಸ್​ಆರ್​ಎಚ್​, ಕೇವಲ ಎರಡು ರನ್​ಗಳಿಂದ ತನ್ನದೇ ದಾಖಲೆಯ ಬೃಹತ್ ಮೊತ್ತವನ್ನು ಮುರಿಯುವಲ್ಲಿ ಕೊನೆಗೂ ಎಡವಿತು.

ರಾಜಸ್ಥಾನ ರಾಯಲ್ಸ್ ಎದುರು ಕಣಕ್ಕಿಳಿದ ಎಸ್​ಆರ್​ಎಚ್​, ಟಾಸ್​ ಗೆದ್ದ ಆರ್​ಆರ್​ ಆಹ್ವಾನದಂತೆ ಮೊದಲು ಬ್ಯಾಟಿಂಗ್ ಮಾಡಿತು. ಅಂತೆಯೇ ಬ್ಯಾಟ್​ ಮಾಡಲು ಆರಂಭಿಸಿದ ಸನ್​ರೈಸರ್ಸ್​ ಹೈದರಾಬಾದ್​ನ ಸ್ಟಾರ್​ ಬ್ಯಾಟರ್​ಗಳು, ಆರ್​ಆರ್​ ಬೌಲರ್​ಗಳ ಬೆವರಿಳಿಸುವಲ್ಲಿ ಯಶಸ್ವಿಯಾದರು. 47 ಎಸೆತ ಆಡಿದ ಕಿಶನ್​ ಅಜೇಯ 106 ರನ್​ ಸಿಡಿಸಿದರು. ಅದರಲ್ಲಿ 11 ಬೌಂಡರಿ, 6 ಸಿಕ್ಸರ್​ ಬಾರಿಸಿದರು. ಇನ್ನು 31 ಎಸೆತ ಎದುರಿಸಿದ ಟ್ರಾವಿಸ್ ಹೆಡ್​, ಸ್ಫೋಟಕ ಬ್ಯಾಟಿಂಗ್ ಮೂಲಕ 67 ರನ್​ ಸಿಡಿಸಿದರು.

ಒಟ್ಟಾರೆ 20 ಓವರ್ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡ ಎಸ್​ಆರ್​ಎಚ್​, ರಾಜಸ್ಥಾನ ರಾಯಲ್ಸ್​ಗೆ 287 ರನ್​ಗಳ ಬೃಹತ್​ ಗುರಿಯನ್ನು ಬೆನ್ನಟ್ಟುವಂತೆ ಸವಾಲು ನೀಡಿದೆ. ಈ ಗುರಿಯನ್ನು ಬೆನ್ನಟ್ಟಿ, ಆರ್​ಆರ್​ ಗೆಲುವು ಸಾಧಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net