More

  ನೀನೊಬ್ಬಳೇ ಬಾ ಏಕಾಂತದಲ್ಲಿ ಭೇಟಿಯಾಗೋಣ… ಖ್ಯಾತ ನಟನ ಮುಖವಾಡ ಕಳಚಿದ ಇಶಾ ಕೊಪ್ಪಿಕರ್!

  ಹೈದರಾಬಾದ್​: ಈಗಾಗಲೇ ಸಾಕಷ್ಟು ನಟಿಯರು ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಅವಕಾಶದ ಹೆಸರಿನಲ್ಲಿ ತಮ್ಮ ಬಯಕೆಗಳನ್ನು ಈಡೇರಿಸುವಂತೆ ನಟಿಯರನ್ನು ಕೇಳುವುದು ಸಿನಿ ಇಂಡಸ್ಟ್ರಿಗೆ ಅಂಟಿಕೊಂಡಿರುವ ಶಾಪವಾಗಿದೆ. ಬಾಲಿವುಡ್​, ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಮತ್ತು ಮಾಲಿವುಡ್​ನಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ಗೆ ಅನೇಕ ಕಲಾವಿದೆಯರು ಸಂತ್ರಸ್ತೆಯರಾಗಿದ್ದಾರೆ. ಇನ್ನು ಕೆಲವರು ಅದನ್ನು ಎದುರಿಸಿದ್ದಾರೆ. ಸಾಕಷ್ಟು ನಟಿಯರು ತಮ್ಮ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದು, ಇದೀಗ ಆ ಸಾಲಿಗೆ ನಟಿ ಇಶಾ ಕೊಪ್ಪಿಕರ್​ ಸೇರಿಕೊಂಡಿದ್ದಾರೆ.

  ಇಶಾ ಕೊಪ್ಪಿಕರ್​ ಕನ್ನಡಗಿರಿಗೇನು ಗೊತ್ತಿರದ ಮುಖವಲ್ಲ. ಸೂರ್ಯವಂಶ ಹಾಗೂ ಓ ನನ್ನ ನಲ್ಲೆ ಚಿತ್ರದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಸ್ಸಲ್ಲಿ ಗಟ್ಟಿಯಾಗಿ ಉಳಿದುಕೊಂಡಿದ್ದಾರೆ. 90ರ ದಶಕದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿದ ನಟಿಯಾಗಿದ್ದಾರೆ. 2009ರಲ್ಲಿ ಮದುವೆಯಾಗಿ ಸಿನಿಮಾ ರಂಗದಿಂದ ದೂರ ಉಳಿದಿದ್ದ ಇಶಾ ಕೊಪ್ಪಿಕರ್​ ತೆಲುಗು ನಟ ನಿಖಿಲ್​ ಅಭಿನಯದ ಕೇಶವ ಸಿನಿಮಾ ಮೂಲಕ ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಸದ್ಯ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿದ್ದು, ಆಗಾಗ ಬೋಲ್ಡ್​ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ದೂರದರ್ಶನ ನಿರೂಪಕ ಮತ್ತು ರೇಡಿಯೋ ಜಾಕಿ ಸಿದ್ಧಾರ್ಥ್ ಕಣ್ಣನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಸಿನಿ ಜೀವನದಲ್ಲಿ ನಡೆದ ಕಹಿ ಅನುಭವವನ್ನು ಮತ್ತೊಮ್ಮೆ ಮೆಲಕು ಹಾಕಿದ್ದಾರೆ.

  18ನೇ ವಯಸ್ಸಿನಲ್ಲಿ ಸಿನಿಮಾ ರಂಗದಲ್ಲಿ ತಮಗಾದ ಕಹಿ ಅನುಭವಗಳ ಬಗ್ಗೆ ಮನಬಿಚ್ಚಿ ಮಾತನಾಡಿರುವ ಇಶಾ, ಆರಂಭದ ದಿನಗಳಲ್ಲಿ ಕಷ್ಟಗಳನ್ನು ಅನುಭವಿಸಿದ್ದೇನೆ. ನಾನು ಚಿತ್ರರಂಗ ಪ್ರವೇಶಿಸುವ ವೇಳೆಗೆ ಮೀಟೂ ಕಾರಣದಿಂದ ಹಲವು ನಾಯಕಿಯರು ಆಗಲೇ ಸಿನಿಮಾ ಕ್ಷೇತ್ರವನ್ನು ತೊರೆದಿದ್ದರು. ಯಾವುದೇ ಆಮಿಷಗಳಿಗೆ ಮಣಿಯದೇ ಅವರೆಲ್ಲ ಮನೆಗೆ ವಾಪಸ್ ಹೋದರು. ಹೀಗಾಗಿ ಚಿತ್ರರಂಗದಲ್ಲಿ ನೆಲೆಯೂರುವುದು ನಮಗೆ ಸವಾಲಾಗಿತ್ತು. ಆದರೆ ನಾನು ಸೇರಿದಂತೆ ಕೆಲವು ನಟಿಯರು ಎಲ್ಲವನ್ನು ಎದುರಿಸಿ ಚಿತ್ರರಂಗದಲ್ಲಿ ಉಳಿದುಕೊಂಡೆವು. ಚಿತ್ರದಲ್ಲಿ ನಟಿಸುವ ಕೆಲ ನಾಯಕರು ಸೇರಿದಂತೆ ನಿರ್ಮಾಪಕರು ಮತ್ತು ನಿರ್ದೇಶಕ ಅನೇಕ ವಿಷಯಗಳನ್ನು ನಿರ್ಧರಿಸುತ್ತಾರೆ ಮತ್ತು ನಿಯಂತ್ರಿಸುತ್ತಾರೆ ಎಂದು ಇಶಾ ಹೇಳಿದರು.

  See also  ಒಳ್ಳೆಯದನ್ನು ಗುರುತಿಸುವ ಜವಾಬ್ಧಾರಿ ಪತ್ರಕರ್ತರದು - ವಿವೇಕ ಚೇತನ್ ಕಾರ್ಯಕ್ರಮ ಉದ್ಘಾಟಿಸಿ ಪ್ರಭಾಕರ ಭಟ್ ಕಲ್ಲಡ್ಕ ಸಲಹೆ

  ವಿದ್ಯಾಭ್ಯಾಸದ ಸಂದರ್ಭದಲ್ಲಿ ಪಾಕೆಟ್​ ಮನಿಗಾಗಿ ಮಾಡೆಲಿಂಗ್​ ಮಾಡಿದೆ. ಇದರಿಂದಾಗಿ ಸಿನಿಮಾ ಅವಕಾಶಗಳು ಬರಲು ಆರಂಭವಾಯಿತು. ಎಕ್​ ಥ ದಿಲ್​ ಥ ಧಡ್ಕನ್​ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶ ನೀಡಿದೆ. ಆದಾಗ್ಯೂ, ಇಂಡಸ್ಟ್ರಿಗೆ ಹೊಸದಾಗಿ ಬಂದಾಗ ಯಾರೋ ಒಬ್ಬರು ನನಗೆ ಕರೆ ಮಾಡಿದರು. ನೀವು ಮೊದಲು ನಾಯಕನನ್ನು ಭೇಟಿ ಮಾಡಬೇಕು ಎಂದರು. ಆ ನಂತರ ನಾಯಕನಿಗೆ ಕರೆ ಮಾಡಿದೆ. ನೀನೊಬ್ಬಳೇ ಬಾ, ಏಕಾಂತದಲ್ಲಿ ಭೇಟಿಯಾಗೋಣ, ಯಾರೂ ಕೂಡ ನಿನ್ನ ಜತೆ ಇರಬಾರದು ಎಂದು ಯಾರು ಹೇಳಿದರು. ಹಾಗಾಗಿ ನಾನು ಅವರನ್ನು ನೋಡಲು ನಿರಾಕರಿಸಿದೆ. ಆತ ಖ್ಯಾತ ನಟರಲ್ಲಿ ಒಬ್ಬರಾಗಿದ್ದರು. ಹೀಗೆ ಹಲವು ನಟರ ಕಾರ್ಯದರ್ಶಿಗಳು ಮತ್ತು ನಿರ್ದೇಶಕರು ತಪ್ಪು ಉದ್ದೇಶದಿಂದ ನನ್ನನ್ನು ಮುಟ್ಟಿದ್ದಾರೆ ಮತ್ತು ಸಂಪರ್ಕಿಸಿದ್ದಾರೆ ಎಂದು ಇಶಾ ಹೇಳಿದರು. ಆದರೆ, ಆ ಖ್ಯಾತ ಯಾರು ಎಂಬುದನ್ನು ಬಹಿರಂಗಪಡಿಸಲಿಲ್ಲ.

  ಅಂದಹಾಗೆ ಇಶಾ ಅವರು ಎಕ್​ ಥ ದಿಲ್​ ಥ ಧಡ್ಕನ್​ ಸಿನಿಮಾದಲ್ಲಿ ನಟಿಸಿದ ಬಳಿಕ ಸಾಕಷ್ಟು ಅವಕಾಶಗಳನ್ನು ಅವರನ್ನು ಹುಡುಕಿಕೊಂಡು ಬಂದವಂತೆ. ಅಲ್ಲದೆ, ಒಳ್ಳೆಯ ಹೆಸರನ್ನು ಗಳಿಸಿದ ಅವರು ನಂತರದಲ್ಲಿ ಟಾಲಿವುಡ್​, ಸ್ಯಾಂಡಲ್​ವುಡ್​ ಮತ್ತು ಕಾಲಿವುಡ್​ನಲ್ಲೂ ಸಾಕಷ್ಟು ಅವಕಾಶಗಳೊಂದಿಗೆ ಎಲ್ಲ ಚಿತ್ರರಂಗದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. (ಏಜೆನ್ಸೀಸ್​)

  ಆಗಸ್ಟ್​ 20ಕ್ಕೆ ಸಾನಿಯಾ ಮಿರ್ಜಾ- ಮೊಹಮ್ಮದ್​ ಶಮಿ ಮದುವೆ! ಸಾನಿಯಾ ತಂದೆ ಕೊಟ್ಟ ಸ್ಪಷ್ಟನೆ ಹೀಗಿದೆ…

  ಕೊಲೆ ಪ್ರಕರಣದಲ್ಲಿ ದರ್ಶನ್​ ಬಂಧನ: ನಟ ಶಿವರಾಜ್​ಕುಮಾರ್​ ವಿರುದ್ಧ ಪ್ರಶಾಂತ್​ ಸಂಬರಗಿ ಆಕ್ರೋಶ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts