ಕೋಲ್ಕತ್ತ: ದೇಶ ಕಂಡ ಅತ್ಯುತ್ತಮ ಕ್ರೀಡಾಪಟುಗಳ ಪೈಕಿ ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಕೂಡ ಸೇರಿದ್ದಾರೆ. ಶಮಿ 2023ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ಗೆ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಚಾಂಪಿಯನ್ ಬೌಲರ್. ಸಾನಿಯಾ ಭಾರತದ ಅತ್ಯುತ್ತಮ ಮಹಿಳಾ ಟೆನಿಸ್ ಆಟಗಾರ್ತಿ. ಇದೀಗ ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಆಗಾಗ ಕೇಳಿಬರುತ್ತಿದೆ.
ಇತ್ತೀಚೆಗಷ್ಟೇ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯಿಬ್ ಮಲಿಕ್ ವಿಚ್ಛೇದನ ಪಡೆದಿದ್ದರು. ಅವರಂತೆಯೇ, ಶಮಿ ಮತ್ತು ಅವರ ಪತ್ನಿ ಹಸಿನ್ ಜಹಾನ್ ಸಹ ಬೇರ್ಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಸಾನಿಯಾ ಮತ್ತು ಶಮಿ ವಿವಾಹವಾಗುತ್ತಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ.
ಇದಿಷ್ಟೇ ಅಲ್ಲದೆ, ಮದುವೆ ಫೋಟೋಗಳು ಕೂಡ ಹರಿದಾಡಿದ್ದವು. ಆದರೆ, ಈ ಚಿತ್ರಗಳು ಸ್ಪಷ್ಟವಾಗಿ ನಕಲಿ ಎಂಬುದು ಬಯಲಾಗಿದೆ. ಇದರ ನಡುವೆ ಇಬ್ಬರೂ ಇನ್ನೂ ಮದುವೆಯಾಗಿಲ್ಲ ಮತ್ತು ಆಗಸ್ಟ್ 20 ರಂದು ಮದುವೆ ಸಮಾರಂಭ ನಿಗದಿಪಡಿಸಲಾಗಿದೆ ಎಂದು ವದಂತಿಗಳು ಸಹ ಹರಿದಾಡುತ್ತಿವೆ. ಆದರೆ, ಸಾನಿಯಾ ತಂದೆ ಮದುವೆ ಸುದ್ದಿಯನ್ನು ನಿರಾಕರಿಸಿದ್ದಾರೆ. ನೀವು ಕೇಳುತ್ತಿರುವುದೆಲ್ಲ ಶುದ್ಧ ಸುಳ್ಳು, ನನ್ನ ಮಗಳು ಶಮಿಯನ್ನು ಭೇಟಿಯಾಗಿಲ್ಲ ಎಂದು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಸಾನಿಯಾ ಅವರು 2010ರಲ್ಲಿ ಶೋಯಿಬ್ ಮಲಿಕ್ ಅವರನ್ನು ವಿವಾಹವಾದರು. ಇದು ಶೋಯಿಬ್ ಅವರ ಎರಡನೇ ವಿವಾಹವಾಗಿತ್ತು. ಮೊದಲ ಪತ್ನಿ ಆಯೇಷಾ ಸಿದ್ದಿಕ್ಗೆ ವಿಚ್ಛೇದನ ನೀಡಿ ಸಾನಿಯಾರನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಂಡಿದ್ದರು. 2018ರಲ್ಲಿ ದಂಪತಿಗೆ ಮಗ ಜನಿಸಿದನು. ಇಬ್ಬರು ದುಬೈನಲ್ಲಿ ವಾಸಿಸುತ್ತಿದ್ದರು.
ಶೋಯಿಬ್ ಮಲ್ಲಿಕ್ ಅವರ ಅಕ್ರಮ ಸಂಬಂಧಗಳಿಂದ ಮನನೊಂದಿದ್ದ ಸಾನಿಯಾ, ಶೋಯಿಬ್ರಿಂದ ಅಂತರ ಕಾಯ್ದುಕೊಂಡಿದ್ದರು. ಅಲ್ಲದೆ, ಇಬ್ಬರು ಡಿವೋರ್ಸ್ ಆಗಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿತ್ತು. ಹೀಗಿರುವಾಗ ಶೋಯಿಬ್ ಮಲ್ಲಿಕ್, ಪಾಕ್ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿರುವುದಾಗಿ ದಿಢೀರನೇ ಘೋಷಿಸಿದಾಗ ವದಂತಿಗಳು ನಿಜವಾದವು.
ಇನ್ನು ಶಮಿ ಮತ್ತು ಹಸಿನ್ ಜಹಾನ್ ನಡುವಿನ ಸಮಸ್ಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ಇಬ್ಬರು 2014 ರಲ್ಲಿ ಕೋಲ್ಕತ್ತದಲ್ಲಿ ವಿವಾಹವಾದರು. 2018ರಲ್ಲಿ ಹಸಿನ್ ಜಹಾನ್, ಶಮಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದರು. (ಏಜೆನ್ಸೀಸ್)
ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ: ನಟ ಶಿವರಾಜ್ಕುಮಾರ್ ವಿರುದ್ಧ ಪ್ರಶಾಂತ್ ಸಂಬರಗಿ ಆಕ್ರೋಶ
ಪದೇಪದೆ ಎನರ್ಜಿ ಡ್ರಿಂಕ್ಸ್ ಕುಡಿದರೆ ಏನಾಗುತ್ತದೆ ಗೊತ್ತಾ? ಇಲ್ಲಿದೆ ನೋಡಿ ಆಘಾತಕಾರಿ ಮಾಹಿತಿ…