

Actor Mohanlal : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್ ಹಾಗೂ ವಾಚ್ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಸ್ಟಾರ್ ನಟರ ಪತ್ನಿ ಮತ್ತು ಮಕ್ಕಳು ಹೇಗಿದ್ದಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ.
ಸಿನಿಮಾಗಳಲ್ಲಿ ಚಿರಯುವಕರಂತೆ ಕಾಣುವ ನಟರಿಗೆ ನಿಜ ಜೀವನದಲ್ಲಿ ಆಳೆತ್ತರದ ಮಕ್ಕಳಿರುವುದನ್ನು ನೋಡಿ, ಕೆಲವರು ನಂಬುವುದೇ ಇಲ್ಲ. ಇಷ್ಟು ದೊಡ್ಡ ಮಕ್ಕಳಿದ್ದಾರಾ ಎಂದು ಹುಬ್ಬೇರಿಸುತ್ತಾರೆ. ಇನ್ನು ಸ್ಟಾರ್ ನಟಿಯರ ಮಕ್ಕಳನ್ನು ಅಮ್ಮನನ್ನೇ ಮೀರಿಸುವ ಸೌಂದರ್ಯವತಿಯರಾಗಿರುತ್ತಾರೆ. ಅವರನ್ನು ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಾರೆ. ತಾಜಾ ಸಂಗತಿ ಏನೆಂದರೆ, ನಟ ಮೋಹನ್ ಲಾಲ್ ಮಗಳ ಫೋಟೋ ನೋಡಿ ಎಲ್ಲರು ಅದೇ ರೀತಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ನಟ ಮೋಹನ್ ಲಾಲ್ ಬಗ್ಗೆ ವಿಶೇವಾಗಿ ಹೇಳಬೇಕಿಲ್ಲ. ಅವರು ಮಲಯಾಳಂ ಚಿತ್ರರಂಗದ ಸ್ಟಾರ್ ನಟ. ಒಟಿಟಿ ವೇದಿಕೆ ಬಂದ ಮೇಲೆ ಎಲ್ಲ ಭಾಷೆಯ ಸಿನಿ ಪ್ರೇಕ್ಷಕರಿಗೆ ಮೋಹನ್ ಲಾಲ್ ಹತ್ತಿರವಾಗಿದ್ದಾರೆ. ಅವರ ನಟನೆಗೆ ಮನಸೋತಿದ್ದಾರೆ. ಸಹಜವಾಗಿ ನಟಿಸುವ ಮೋಹನ್ಲಾಲ್ ಮಲಯಾಳಂ ಸಿನಿ ಪ್ರೇಕ್ಷಕರಿಗೆ ತುಂಬಾ ಅಚ್ಚುಮೆಚ್ಚು. ಅವರು ಸಿನಿಮಾಗಾಗಿ ಅಸಂಖ್ಯಾತ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಇಂದಿಗೂ ಸಿನಿಮಾಗಳಲ್ಲಿ ಚಿರು ಯುವಕನಂತೆ ಕಂಗೊಳಿಸುವ ಮೋಹನ್ ಲಾಲ್ಗೆ ಮದುವೆಯ ವಯಸ್ಸಿನ ಮಗಳಿದ್ದಾಳೆ ಅಂದರೆ ಬಹುತೇಕ ಮಂದಿ ನಂಬುವುದೇ ಇಲ್ಲ.
ಅಂದಹಾಗೆ, ಮೋಹನ್ ಲಾಲ್ ಅವರಿಗೆ ಪ್ರಣವ್ ಮತ್ತು ವಿಸ್ಮಯ ಹೆಸರಿನ ಓರ್ವ ಪುತ್ರ ಮತ್ತು ಓರ್ವ ಪುತ್ರಿ ಇದ್ದಾರೆ. ಇದೀಗ ಮಗಳು ವಿಸ್ಮಯ ಅವರ ಇತ್ತೀಚಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಮಗ ಪ್ರಣವ್ ಈಗಾಗಲೇ ನಟರಾಗಿದ್ದರೂ, ಅವರ ಮಗಳು ವಿಸ್ಮುಯ ಕೂಡ ಚಿತ್ರರಂಗಕ್ಕೆ ಪ್ರವೇಶಿಸಲು ಯೋಜಿಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ.
ವಿಸ್ಮಯ ಅವರು ಜೂಡ್ ಆ್ಯಂಟನಿ ನಿರ್ದೇಶನದ ಮತ್ತು ತಂದೆ ಮೋಹನ್ ಲಾಲ್ ನಿರ್ಮಿಸುವ "ತುಡಕ್ಕಂ" ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇದೆ. ಹೀಗಾಗಿ ದಪ್ಪಗಿದ್ದ ವಿಸ್ಮಯ ಇದೀಗ ತೂಕ ಇಳಿಸಿಕೊಂಡು ಫಿಟ್ ಆಗಿದ್ದಾರೆ. ಈ ಹಿಂದೆ ದಡೂತಿ ರೀತಿ ಇದ್ದರು. ಅವರ ಈ ಹಿಂದಿನ ಫೋಟೋ ಮತ್ತು ಪ್ರಸ್ತುತ ಫೋಟೋಗಳನ್ನು ಒಟ್ಟಿಗೆ ಎಡಿಟ್ ಮಾಡಿ, ಅಭಿಮಾನಿಗಳು ಹರಿಬಿಡುತ್ತಿದ್ದು, ಫೋಟೋಗಳು ವೈರಲ್ ಆಗಿವೆ.
ವಿಸ್ಮಯ ಅವರ ಇತ್ತೀಚಿನ ಫೋಟೋ ನೋಡಿದ ಅಭಿಮಾನಿಗಳು, ಇವಳು ಮೋಹನ್ ಲಾಲ್ ಅವರ ಮಗಳೇ? ಇಷ್ಟು ದೊಡ್ಡ ಮಗಳಿದ್ದಾಳಾ? ನಿಜಕ್ಕೂ ನಂಬಲಾಗುತ್ತಿಲ್ಲ. ವಿಸ್ಮಯ ಅವರು ಯಾವ ಹೀರೋಯಿನ್ಗೂ ಕಮ್ಮಿ ಇಲ್ಲ ಎಂದು ಬಗೆ ಬಗೆಯ ಕಾಮೆಂಟ್ಗಳನ್ನು ಹರಿಬಿಡುತ್ತಿದ್ದಾರೆ. (ಏಜೆನ್ಸೀಸ್)