ಯಾರೂ ಇಲ್ಲದ ಸಮಯದಲ್ಲಿ ಪ್ರಿಯಕರನನ್ನು ಮನೆಗೆ ಕರೆದು ಖಾಸಗಿ ಅಂಗ ಕತ್ತರಿಸಿದ ಗೆಳತಿ! Girl calls boyfriend

Girl calls boyfriend
Published on

Girl Calls boyfriend : ಯಾರೂ ಇಲ್ಲದ ಸಮಯದಲ್ಲಿ ಪ್ರಿಯಕರನನ್ನು ಮನೆಗೆ ಕರೆಯಿಸಿದ ಯುವತಿಯೊಬ್ಬಳು ಆತನ ಖಾಸಗಿ ಅಂಗವನ್ನು ಕತ್ತರಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸಂತ ಕಬೀರ್ ನಗರದಲ್ಲಿ ನಡೆದಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಜಗಳವಾಗಿದ್ದು, ಅದೇ ಕೋಪದಲ್ಲಿ ಯುವತಿ, ಪ್ರಿಯಕರನ ಗುಪ್ತಾಂಗ ಕತ್ತರಿಸಿದ್ದಾಳೆ.

ಆರೋಪಿ ಯುವತಿ, ಖಾಲಿದಾಹದ್ ಕೊತ್ವಾಲಿ ಪ್ರದೇಶದ ಮುಶಾರಾ ಗ್ರಾಮದ ನಿವಾಸಿ. ಅದೇ ಪ್ರದೇಶದ ಜಂಗಲ್ ಕಲಾದಲ್ಲಿ ವಾಸಿಸುವ 19 ವರ್ಷದ ವಿಕಾಸ್ ನಿಶಾದ್, ಆಕೆಯನ್ನು ಭೇಟಿಯಾಗಲು ಬಂದಿದ್ದ. ವರದಿಗಳ ಪ್ರಕಾರ, ಆಕೆಯ ಕರೆಯ ಮೇರೆಗೆ ವಿಕಾಸ್ ಬಂದಿದ್ದ. ಯಾರೂ ಇಲ್ಲದ ಸಮಯದಲ್ಲಿ ವಿಕಾಸ್​ನನ್ನು ಮನೆಗೆ ಕರೆಸಿಕೊಂಡಿದ್ದಳು.

ವಿಕಾಸ್​ ತನ್ನ ಗೆಳತಿಯೊಂದಿಗೆ ಸುಮಾರು ಆರು ಗಂಟೆಗಳ ಕಾಲ ಆಕೆಯ ಮನೆಯಲ್ಲಿ ಕಳೆದನು. ಈ ಸಮಯದಲ್ಲಿ, ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು, ಜಗಳ ತಾರಕಕ್ಕೇರಿದಾಗ ತಾಳ್ಮೆ ಕಳೆದುಕೊಂಡ ಯುವತಿ, ಬ್ಲೇಡ್‌ ತೆಗೆದುಕೊಂಡು ವಿಕಾಸ್‌ನ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ.

ರಕ್ತಸಿಕ್ತನಾಗಿ ಮನೆಗೆ ಹಿಂತಿರುಗಿದ ವಿಕಾಸ್​ನನ್ನು ಕುಟುಂಬದವರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಯುವಕನಿಗೆ ಹಲವಾರು ಗಂಟೆಗಳ ಕಾಲ ರಕ್ತಸ್ರಾವವಾಗುತ್ತಿತ್ತು ಎಂಬ ವರದಿಗಳಿವೆ. ವಿಕಾಸ್​ ಮತ್ತು ಯುವತಿ ನಡುವೆ ಆರು ವರ್ಷಗಳಿಂದ ಸಂಬಂಧವಿತ್ತು. ಆಕೆ ಉದ್ದೇಶಪೂರ್ವಕವಾಗಿ ವಿಕಾಸ್​ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಆತನ ಪಾಲಕರು ಆರೋಪಿಸಿದ್ದಾರೆ. ಆದರೆ, ಈ ಸಂಬಂಧ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಕೊತ್ವಾಲಿ ಠಾಣಾ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net