

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 70ನೇ ಜನ್ಮದಿನದ ನಿಮಿತ್ತ ದೇಶಕ್ಕೆ ದೇಶ, ಜಾಗತಿಕ ನಾಯಕರು ಶುಭ ಹಾರೈಸುತ್ತಿದ್ದರೆ, "NATIONAL UNEMPLOYMENT DAY" ಎಂಬ ಪ್ರಾಯೋಜಿತ ಅಭಿಯಾನ ಸದ್ದುಮಾಡತೊಡಗಿತು. ಕೆಲವೇ ಸೆಕೆಂಡ್ಗಳಲ್ಲಿ ಅದು ರಾಷ್ಟ್ರಮಟ್ಟದಲ್ಲಿ ಟ್ರೆಂಡಿಂಗ್ ಎಂದು ತೋರಿಸುತ್ತಿತ್ತು.
ಈ ರೀತಿ ಟ್ರೆಂಡಿಂಗ್ ಆಗ್ತಾ ಇರುವ ಸುದ್ದಿಯನ್ನು ಕೆಲವು ಆಂಗ್ಲ ಮಾಧ್ಯಮಗಳು ಸುದ್ದಿಯನ್ನೂ ಮಾಡಿದ್ವು. ಆದರೆ, ಇದರ ಬೆನ್ನಿಗೇ, ಈ ಟ್ರೆಂಡಿಂಗ್ ರಹಸ್ಯ ಕೂಡ ಬಯಲಾಗಿದೆ. ರಿಷಿ ಬಾಗ್ರೀ ಎಂಬುವವರು ಮಾಡಿದ ಟ್ವೀಟ್ ಮಾರ್ಮಿಕವಾಗಿ ಗಮನಸೆಳೆಯುತ್ತಿದೆ.
ಅದು ಹೀಗಿದೆ- ಮೋದಿಜಿ ಎಷ್ಟು ಪವರ್ಫುಲ್ ಅಂದ್ರೆ ಅವರು ಕತಾರ್, ಯುಎಇ, ಸೌದಿ ಅರೇಬಿಯಾ, ಒಮಾನ್, ಕೆನ್ಯಾ ಮುಂತಾದ ರಾಷ್ಟ್ರಗಳ ನಿರುದ್ಯೋಗ ಸಮಸ್ಯೆಗೂ ಹೊಣೆಗಾರರು. ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಯೂನಿಟ್ ಬಗ್ಗೆ ಖೇದವೆನಿಸುತ್ತಿದೆ. ಪ್ರತಿ ಸಲವೂ ಏನೋ ಒಂದರಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದೆ.