More

    ಏರುತ್ತಿದೆ ಮದ್ಯದ ಕಿಕ್!

    ಬೆಂಗಳೂರು: ಅನ್​ಲಾಕ್ 4.0 ಜಾರಿಗೊಂಡ ಬಳಿಕ ರಾಜ್ಯದಲ್ಲಿ ಮದ್ಯ ವಹಿವಾಟು ಏರಿಕೆಯಾಗಿದ್ದು, ಆರ್ಥಿಕ ಸಂಕಷ್ಟದಿಂದ ನಲುಗಿದ್ದ ಸರ್ಕಾರ ಹಾಗೂ ಮದ್ಯದಂಗಡಿ ಮಾಲೀಕರಿಗೆ ತುಸು ನೆಮ್ಮದಿ ಸಿಕ್ಕಿದೆ.

    ಕಳೆದ ವರ್ಷ ಇದೇ ಅವಧಿಯಲ್ಲಿ 9,599 ಕೋಟಿ ರೂ. ಆದಾಯ ಹರಿದು ಬಂದರೆ ಈ ಬಾರಿ ಇದೇ ಅವಧಿಯ ಸೆ.9ರವರೆಗೆ 8,468 ಕೋಟಿ ರೂ. ಆದಾಯ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 1,130 ಕೋಟಿ ರೂ. ಆದಾಯ ನಷ್ಟವಾಗಿದೆ. ರಾಜ್ಯದಲ್ಲಿ ಮಾ.23ರಿಂದ ಮೇ 3ರವರೆಗೆ ಅಂದರೆ 42 ದಿನ ಲಾಕ್​ಡೌನ್ ಮಾಡಲಾಗಿತ್ತು. ಇದರಿಂದ ಇಲಾಖೆಗೆ ಅಂದಾಜು 3 ಸಾವಿರ ಕೋಟಿ ರೂ. ಆದಾಯ ನಷ್ಟವಾಗಿತ್ತು. ಮೇ 4ರಿಂದ ಸಿಎಲ್2 ಹಾಗೂ ಸಿಎಲ್11ಸಿ ಮದ್ಯದಂಗಡಿಗಳಲ್ಲಿ ಪಾರ್ಸೆಲ್ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದರಿಂದ ರಾಜ್ಯಾದ್ಯಂತ ಮದ್ಯ ವಹಿವಾಟು ಜೋರಾಗಿ ನಡೆಯಿತು.

    ಬಳಿಕ, ಆನ್​ಲಾಕ್ 4.0 ಜಾರಿಯಾದ ಹಿನ್ನೆಲೆಯಲ್ಲಿ 5 ತಿಂಗಳಿಂದ ಮುಚ್ಚಲಾಗಿದ್ದ ಬಾರ್, ಪಬ್ ಹಾಗೂ ಕ್ಲಬ್​ಗಳಲ್ಲಿ ಸೆ.1ರಿಂದ ಆಹಾರದೊಂದಿಗೆ ಮದ್ಯ ಕುಡಿಯಲು ಅನುಮತಿ ನೀಡಿದ್ದರಿಂದ ಮದ್ಯ ವಹಿವಾಟಿನಲ್ಲಿ ತುಸು ಚೇತರಿಕೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts