ಖ್ಯಾತ ನಟಿಯೊಂದಿಗೆ ನಟ ದಳಪತಿ ವಿಜಯ್​ ಡೇಟಿಂಗ್​; ಇವರಿಬ್ಬರ ಫೋಟೋಸ್​ ವೈರಲ್​

Thalapathy Vijay
Published on

ಚೆನ್ನೈ: ತಮಿಳು ಚಿತ್ರರಂಗದ ಸ್ಟಾರ್​ ನಟ ದಳಪತಿ ವಿಜಯ್​ ಜೂನ್​ 22ರಂದು 50ನೇ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ರಾಜಕೀಯದ ಜೊತೆ ಸಿನಿಮಾಗಳಲ್ಲಿಯೂ ಬ್ಯುಸಿ ಇದ್ದು, ಶೀಘ್ರದಲ್ಲೇ ಅವರು ನಟಿಸಲಿರುವ 69ನೇ ಸಿನಿಮಾ ಘೋಷಣೆಯಾಗಲಿದೆ. ಇದಾದ ಬಳಿಕ 2026ರಲ್ಲಿ ನಡೆಯಲಿರುವ ತಮಿಳುನಾಡು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅವರ ಸ್ಥಾಪನೆಯ ತಮಿಳಗಾ ವೆಟ್ರಿ ಕಳಗಂ ಪಕ್ಷದಿಂದ ಅವರು ಸ್ಪರ್ಧಿಸಲಿದ್ದಾರೆ. ಇದೀಗ ದಳಪತಿ ವಿಜಯ್​ ಸಿನಿಮಾ ಮತ್ತು ರಾಜಕೀಯ ಹೊರತಾಗಿ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಟ ದಳಪತಿ ವಿಜಯ್​ ಅವರ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎಂಬ ಸುದ್ದಿ ಕಾಲಿವುಡ್​ ಅಂಗಳದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಅವರು ತಮ್ಮ ಪತ್ನಿಯಿಂದ ದೂರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ನಡುವೆಯೇ ನಟ ವಿಜಯ್​ ಖ್ಯಾತ ನಟಿಯೊಂದಿಗೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಗುಸುಗುಸು ನಡುವೆಯೇ ಈ ಫೋಟೋ ವೈರಲ್​ ಆಗಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.

ಜೂನ್​ 22ರಂದು 50ನೇ ಜನ್ಮದಿನಕ್ಕೆ ಕಾಲಿಟ್ಟ ನಟ ವಿಜಯ್​ಗೆ ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಹಲವರು ಶುಭ ಹಾರೈಸಿದ್ದರು. ಈ ಪೈಕಿ ಹೆಚ್ಚು ಗಮನ ಸೆಳೆದ ಪೋಸ್ಟ್​ ಎಂದರೆ ಅದು ನಟಿ ತ್ರಿಶಾ ಶೇರ್​ ಮಾಡಿರುವ ಪೋಸ್ಟ್​. ಸೌತ್​ ಸಿನಿ ಇಂಡಸ್ಟ್ರಿಯ ಬಹು ಬೇಡಿಕೆಯ ನಟಿ ತ್ರಿಶಾ ಹಾಗೂ ವಿಜಯ್​ ಡೇಟಿಂಗ್​ ಮಾಡುತ್ತಿದ್ದರಾ ಎಂಬ ಪ್ರಶ್ನೆ ಮೂಡಲು ಶುರುವಾಗಿದೆ.

ಮುಂದೆ ಇನ್ನೂ ಹಲವು ಮೈಲಿಗಲ್ಲುಗಳಿಗೆ ಎಂದು ವಿಜಯ್​ ಜೊತೆಗಿರುವ ಪೋಟೋ ಒಂದನ್ನು ಪೋಸ್ಟ್​ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದ್ದು, ಇವರಿಬ್ಬರು ನಿಜವಾಗಲೂ ಡೇಟಿಂಗ್​ ಮಾಡುತ್ತಿದ್ದಾರಾ ಎಂದು ಅನುಮಾನ ಮೂಡಲು ಶುರುವಾಗಿದೆ. ಈ ಬಗ್ಗೆ ಇವರಿಬ್ಬರು ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net