

Coconut : ಹಿಂದು ಸಂಪ್ರದಾಯದಲ್ಲಿ ತೆಂಗಿನಕಾಯಿಯನ್ನು ದೇವರ ಪ್ರತಿರೂಪವಾಗಿ ನೋಡಲಾಗುತ್ತದೆ. ಕೆಲವೆಡೆ ತೆಂಗಿನಕಾಯಿಯನ್ನೇ ಪೂಜಿಸಿದರೆ, ಇನ್ನು ಕೆಲವೆಡೆ ಪೂಜೆಗಳಲ್ಲಿ ಪ್ರಮುಖವಾಗಿ ಬಳಸುತ್ತಾರೆ. ಹೀಗಾಗಿ ಇದನ್ನು ತುಂಬಾ ಪವಿತ್ರವಾದ ವಸ್ತುವೆಂದು ಪರಿಗಣಿಸಲಾಗಿದೆ. ಊಟಕ್ಕೂ ಕೂಡ ತೆಂಗಿನಕಾಯಿ ಬೇಕು. ಇದರಲ್ಲಿ ಕೇವಲ ರುಚಿ ಮಾತ್ರ ಇಲ್ಲ ಅನೇಕ ಆರೋಗ್ಯ ಗುಣಗಳನ್ನು ಸಹ ಇದು ಹೊಂದಿದೆ.
ತೆಂಗಿನಕಾಯಿಯನ್ನು ಪ್ರಸಾದವಾಗಿ ಒಡೆದು ಪೂಜೆಯ ಸಮಯದಲ್ಲಿ ಪ್ರಸಾದವಾಗಿ ತಿನ್ನುತ್ತಾರೆ. ಆದರೆ, ಅನೇಕ ಬಾರಿ ಪೂಜೆಯ ವೇಳೆ ತೆಂಗಿನಕಾಯಿ ಒಡೆದಾಗ ಒಳಗೆ ಕೊಳೆತು ಹೋಗಿರುತ್ತದೆ ಅಥವಾ ಹಾಳಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ, ಜನರು ಮುಜುಗರಕ್ಕೆ ಒಳಗಾಗುತ್ತಾರೆ. ಪೂಜೆಯ ವೇಳೆ ತೆಂಗಿನಕಾಯಿ ಕೊಳೆತಿದ್ದರೆ ಅದರ ಅರ್ಥವೇನು ಎಂಬುದನ್ನು ಈ ಪೋಸ್ಟ್ನಲ್ಲಿ ನಾವು ವಿವರವಾಗಿ ತಿಳಿಯೋಣ.
ಪೂಜೆಯ ಸಮಯದಲ್ಲಿ ತೆಂಗಿನಕಾಯಿ ಒಡೆಯುವಾಗ ಅದು ಹಾಳಾಗಿದ್ದರೆ ಏನು ಮಾಡೋದು ಎಂಬ ಭಯ ಬೇಡ. ಇದು ಕೆಟ್ಟ ಶಕುನದ ಸಂಕೇತವಲ್ಲ. ಬದಲಾಗಿ, ದೇವರು ಅರ್ಪಣೆಯನ್ನು ಸ್ವೀಕರಿಸಿದನೆಂದು ಪರಿಗಣಿಸಲಾಗಿದೆ. ಹಾಗಾಗಿ ತೆಂಗಿನಕಾಯಿ ಒಣಗುತ್ತದೆ ಅಥವಾ ಕೊಳೆತಿರುತ್ತದೆ. ದೇವರು ನಿಮ್ಮ ಪೂಜೆಯನ್ನು ಸ್ವೀಕರಿಸಿದ್ದಾನೆ ಮತ್ತು ನಿಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ನಂಬಲಾಗಿದೆ.
ದೇವರಿಗೆ ಅರ್ಪಿಸುವ ತೆಂಗಿನಕಾಯಿ ಶುಚಿಯಾಗಿದ್ದರೆ ಮತ್ತು ಒಡೆದಾಗ ಉತ್ತಮವಾಗಿದ್ದರೆ ಅದರ ನೈವೇದ್ಯವನ್ನು ಭಕ್ತರಿಗೆ ಅರ್ಪಿಸಬಹುದು. ಆದರೆ ಪ್ರಸಾದವನ್ನು ಮುಟ್ಟಬಾರದು ಅಥವಾ ಕೊಳಕು ಕೈಗಳಿಂದ ಸ್ವೀಕರಿಸಬಾರದು ಎಂಬುದನ್ನು ನೆನಪಿಡಿ. ಅಲ್ಲದೆ, ಪ್ರಸಾದವನ್ನು ಕೊಳಕು ಪಾತ್ರೆಯಲ್ಲಿ ಕೊಳಕು ಹಾಗೂ ಜಾಗದಲ್ಲಿ ಇಡಬೇಡಿ. ನೈವೇದ್ಯವು ಆಕಸ್ಮಿಕವಾಗಿ ನೆಲದ ಮೇಲೆ ಬಿದ್ದರೆ, ಅದನ್ನು ಪಕ್ಷಿಗಳಿಗೆ ಹಾಕಿ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.