ನಿಮ್ಮ ಕಾಲಿನ ರಚನೆ ಹೇಳುತ್ತೆ ನಿಮ್ಮ ಭವಿಷ್ಯ! ಪಾದದ ಬಣ್ಣ ಹೀಗಿದ್ದರೆ ಅದೃಷ್ಟವೇ ಅದೃಷ್ಟ | Samudrika Shastra

Samudrika Shastra
Published on

Samudrika Shastra : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುತ್ತಾರೆ. ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರ ಮತ್ತು ಸಾಮುದ್ರಿಕ ಶಾಸ್ತ್ರವೂ ಒಂದು.

ಸಾಮುದ್ರಿಕ ಶಾಸ್ತ್ರವೂ ವ್ಯಕ್ತಿಯ ಕೈ ರೇಖೆ ಮತ್ತು ಕಾಲಗಳು ರಚನೆಯನ್ನು ನೋಡಿ ಆತನ ಭವಿಷ್ಯ ಹೇಗಿರಲಿದೆ ಎಂಬುದನ್ನು ಹೇಳುತ್ತದೆ. ವ್ಯಕ್ತಿಯ ಭವಿಷ್ಯ, ವೃತ್ತಿ, ಆರ್ಥಿಕ ಸ್ಥಿತಿ, ಸ್ವಭಾವ ಇತ್ಯಾದಿಗಳನ್ನು ಪಾದದ ಆಕಾರ, ವಿನ್ಯಾಸ, ಕಾಲ್ಬೆರಳುಗಳು ಮತ್ತು ಅದರ ಬಣ್ಣಗಳಿಂದ ತಿಳಿಯಬಹುದು.

ದಪ್ಪ ಕಾಲ್ಬೆರಳುಗಳು

ಕಾಲ್ಬೆರಳುಗಳು ದಪ್ಪವಾಗಿದ್ದರೆ, ಆ ವ್ಯಕ್ತಿಯು ತನ್ನ ಪ್ರೀತಿಪಾತ್ರರಿಗಾಗಿ ತನ್ನ ಜೀವನವನ್ನು ತ್ಯಾಗ ಮಾಡಲಿದ್ದಾನೆ ಎಂದರ್ಥ. ಅಲ್ಲದೆ, ಯಾವಾಗಲೂ ತನ್ನ ಕುಟುಂಬ, ಸ್ನೇಹಿತರು ಇತ್ಯಾದಿಗಳ ಬಗ್ಗೆ ಕಾಳಜಿ ವಹಿಸುತ್ತಾನೆ ಮತ್ತು ಅವರನ್ನು ಸಂತೋಷವಾಗಿರಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಾನೆ.

ಸಣ್ಣ ಬೆರಳುಗಳು

ಇನ್ನು ತೆಳ್ಳಗಿನ ಕಾಲ್ಬೆಬೆರಳುಗಳು ಹೊಂದಿರುವ ವ್ಯಕ್ತಿಯ ಜೀವನದಲ್ಲಿ ತನ್ನ ಇಚ್ಛೆಯ ಪ್ರಕಾರ ಬದುಕುತ್ತಾನೆ. ಆತ ಬೇರೆಯವರ ಬಗ್ಗೆ ತಲೆಕಡಿಸಿಕೊಳ್ಳುವುದಿಲ್ಲ. ಅಲ್ಲದೆ, ಅವರು ತಮಗಾಗಿ ಮಾತ್ರ ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಇತರರ ವಿಚಾರದಲ್ಲಿ ತುಂಬಾ ಜಿಪುಣರಾಗಿರುತ್ತಾರೆ.

ಪಾದದ ಬಣ್ಣ

ಪಾದದ ಅಡಿಭಾಗವು ಗುಲಾಬಿ ಅಥವಾ ಕೆಂಪು ಬಣ್ಣದ್ದಾಗಿದ್ದರೆ ಅದು ತುಂಬಾ ಮಂಗಳಕರವಾಗಿದೆ. ಅಂತಹ ವ್ಯಕ್ತಿ ರಾಜನಂತೆ ಬದುಕುತ್ತಾನೆ ಎಂದು ನಂಬಲಾಗಿದೆ. ಅಪಾರ ಸಂಪತ್ತಿನ ಜತೆಗೆ ಸ್ಥಾನಮಾನ, ಗೌರವ ಸಿಗುತ್ತದೆ. ಒರಟು ಚರ್ಮದೊಂದಿಗೆ ಒಣ ಮತ್ತು ಹಳದಿ ಅಡಿಭಾಗವನ್ನು ಒಳ್ಳೆಯದು ಎಂದು ಕರೆಯಲಾಗುವುದಿಲ್ಲ. ಅಂತಹ ವ್ಯಕ್ತಿಯ ಜೀವನವು ಆರ್ಥಿಕ ಬಿಕ್ಕಟ್ಟು, ಹೋರಾಟ ಮತ್ತು ತೊಂದರೆಗಳಲ್ಲಿ ಕಳೆಯುತ್ತದೆ. ಇಮ್ಮಡಿ ಬಿರುಕು ಬಿಟ್ಟರೆ, ಅದು ಕೂಡ ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದು.

ಕಾಲ್ಬೆರಳುಗಳ ನಡುವಿನ ಅಂತರ

ಕಾಲ್ಬೆರಳುಗಳ ನಡುವೆ ಹೆಚ್ಚಿನ ಅಂತರ ಹೊಂದಿರುವ ಜನರು ಸ್ವಾರ್ಥಿಗಳಾಗಿರುತ್ತಾರೆ. ಈ ಜನರು ತಮಗಾಗಿ ಮಾತ್ರ ಬದುಕುತ್ತಾರೆ ಮತ್ತು ಸಂವೇದನಾಶೀಲರಾಗಿರುತ್ತಾರೆ. ಬೆರಳುಗಳು ಕೂಡಿಸಿಕೊಂಡಿದ್ದರೆ, ಅಂಥವರು ಪ್ರಾಮಾಣಿಕರು ಮತ್ತು ಶಾಂತಿಯುತ ಸ್ವಭಾವವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ಹೆಚ್ಚು ಸ್ನೇಹಿತರನ್ನು ಮಾಡಿಕೊಳ್ಳುವುದಿಲ್ಲ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net