ಭಾರತದ ಮೊದಲ ಶ್ರೀಮಂತ ವ್ಯಕ್ತಿ ಇವರು… ಮುಕೇಶ್​ ಅಂಬಾನಿಗಿಂತ 50 ಪಟ್ಟು ಹೆಚ್ಚು ಆಸ್ತಿ ಹೊಂದಿದ್ದರು!

Mukesh Ambani Property
Published on

ನವದೆಹಲಿ: ರಿಲಯನ್ಸ್​ ಇಂಡಸ್ಟ್ರೀಸ್​ನ ಚೇರ್ಮನ್​ ಮುಕೇಶ್​ ಅಂಬಾನಿ ಭಾರತ ಮಾತ್ರವಲ್ಲದೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ. ವಿಶ್ವದ ಶ್ರೀಮಂತರ ಪಟ್ಟಿಯಲ್ಲೂ ಮುಕೇಶ್ ಅಂಬಾನಿ ಸ್ಥಾನ ಪಡೆದಿದ್ದಾರೆ. ಆದರೆ, ಅವರಿಗಿಂತ 50 ಪಟ್ಟು ಹೆಚ್ಚು ಆಸ್ತಿ ಹೊಂದಿದ್ದ ಭಾರತದ ಮೊದಲ ಶ್ರೀಮಂತರೊಬ್ಬರನ್ನು ಈ ಪೋಸ್ಟ್‌ನಲ್ಲಿ ನೀವು ತಿಳಿದುಕೊಳ್ಳುತ್ತೀರಿ.

ಮುಕೇಶ್​ ಅಂಬಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ಅತಿದೊಡ್ಡ ಷೇರುದಾರರಾಗಿದ್ದಾರೆ. ಅವರ ನಿವ್ವಳ ಮೌಲ್ಯ ಸುಮಾರು 1.51 ಲಕ್ಷ ಕೋಟಿ ರೂಪಾಯಿ (ಸುಮಾರು $119.9 ಬಿಲಿಯನ್). ಭಾರತದಲ್ಲಿ ಮಾತ್ರವಲ್ಲದೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿಯೂ ಮುಕೇಶ್ ಅಂಬಾನಿ ಮುಂಚೂಣಿಯಲ್ಲಿದ್ದಾರೆ.

ಆದರೆ, ಮುಕೇಶ್​ ಅಂಬಾನಿಗಿಂತ ಮೊದಲು ಹೈದರಾಬಾದ್‌ನ ಕೊನೆಯ ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್ ಅವರು ಭಾರತದಲ್ಲಿ ಅಂಬಾನಿಯವರ ಸಂಪತ್ತಿನ 50 ಪಟ್ಟು ಹೆಚ್ಚು ಆಸ್ತಿ ಹೊಂದಿದ್ದರು. ಕೆಲವು ವರ್ಷಗಳ ಹಿಂದೆ ಅವರ ನಿವ್ವಳ ಮೌಲ್ಯವು 230 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಇಂದಿಗೆ ಹೋಲಿಕೆ ಮಾಡಿದರೆ ಅಂಬಾನಿ ಆಸ್ತಿಗಿಂತ 50 ಪಟ್ಟು ಜಾಸ್ತಿ ಎಂದು ಹೇಳಬಹದು.

Mukesh Ambani

ಮೀರ್ ಉಸ್ಮಾನ್ ಅಲಿ ಖಾನ್ ಅಂಬಾನಿ ಅವರಿಗಿಂತಲೂ ಶ್ರೀಮಂತರಾಗಿದ್ದರೆ, ಅವರಿಗಿಂತ ಮೊದಲು ಮೊಘಲ್ ಸಾಮ್ರಾಜ್ಯವನ್ನು ಮುನ್ನಡೆಸಿದ್ದ ಅಕ್ಬರ್ "ಅಗಣಿತ" ಸಂಪತ್ತನ್ನು ಹೊಂದಿದ್ದರೆಂದು ಇತಿಹಾಸಕಾರರು ಹೇಳುತ್ತಾರೆ. ಇತ್ತೀಚಿನ ಸಂಶೋಧನೆಗಳು ಅಕ್ಬರನ ಅಪಾರ ಸಂಪತ್ತಿನ ಬಗ್ಗೆ ಮಾಹಿತಿ ನೀಡುತ್ತಿವೆ. ಅವರ ಆಳ್ವಿಕೆಯಲ್ಲಿ ಅವರು ವಿಶ್ವದ ಜಿಡಿಪಿಯ 25 ಪ್ರತಿಶತವನ್ನು ನಿಯಂತ್ರಿಸಿದರು ಎಂದು ಹೇಳಲಾಗುತ್ತದೆ.

Akbar

ಅಕ್ಬರನ ಕಾಲದಲ್ಲಿ ಮೊಘಲ್ ಸಾಮ್ರಾಜ್ಯವು ವಿಶ್ವ ಆರ್ಥಿಕತೆಯಲ್ಲಿ ಪ್ರಬಲ ಶಕ್ತಿಯಾಯಿತು. 1600 ADನಲ್ಲಿ ಅಕ್ಬರನ ವಾರ್ಷಿಕ ಆದಾಯವು 17.5 ಮಿಲಿಯನ್ ಯುಎಸ್ ಡಾಲರ್ ಎಂದು ಅಂದಾಜಿಸಲಾಗಿದೆ. ಅಕ್ಬರನ ಸಂಪತ್ತು ಇಂದು 21 ಟ್ರಿಲಿಯನ್ ಯುಎಸ್ ಡಾಲರ್​ಗಳಿಗೆ ಹೆಚ್ಚಾಗುತ್ತಿತ್ತು ಅಂಕಿ-ಅಂಶ ಸೂಚಿಸುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net