ಜಮೀನು ಗುತ್ತಿಗೆ ನೀಡದಿದ್ದಕ್ಕೆ ಸಿಟ್ಟಿಗೆದ್ದ ವ್ಯಕ್ತಿ ಮಾಡಿದ್ದೇನು ಗೊತ್ತಾ?

lizard
Published on

ಮಧ್ಯಪ್ರದೇಶ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಿಸಬೇಕೆಂದುಕೊಂಡಿದ್ದ ಬುಡಕಟ್ಟು ವ್ಯಕ್ತಿಯ ಬಹುಕಾಲದ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಚೀಫ್ ಮುನ್ಸಿಪಲ್ ಆಫೀಸರ್ (CMO) ಕೊಠಡಿಯೊಳಗೆ ದೈತ್ಯ ಹಲ್ಲಿಯನ್ನು ಬಿಟ್ಟಿರುವ ಘಟನೆ ಮಧ್ಯಪ್ರದೇಶದ ಚಂದೇರಿ ಎಂಬಲ್ಲಿ ನಡೆದಿದೆ.
ಕಚೇರಿಯಲ್ಲಿ ಉಡ ಕಾಣಿಸಿಕೊಳ್ಳುತ್ತಿದ್ದಂತೆ ಅಧಿಕಾರಿಗಳು ಗಾಬರಿಗೊಂಡಿದ್ದಾರೆ. ಬಳಿಕ ಅಧಿಕಾರಿಗಳು ಮನವಿ ಮಾಡಿದ ಮೇಲೆ ಆತ ಆ ಹಲ್ಲಿ ತೆಗೆದುಕೊಂಡು ಅಲ್ಲಿಂದ ತೆರಳಿದ್ದಾನೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನೀವು ನನ್ನ ಬೇಡಿಕೆ ಈಡೇರಿಸಿದಿದ್ದರೆ ಇನ್ನಷ್ಟು ವಿಷಕಾರಿ ಹಾವುಗಳನ್ನು ತಂದುಬಿಡುವೆ ಎಂದು ಬೆದರಿಸಿದ್ದಾನೆ.

ಏನಿದು ಘಟನೆ?
ತೋಟರಾಮ್ ಎಂಬ ವ್ಯಕ್ತಿ ಹಲವಾರು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ವಾಸಿಸುತ್ತಿದ್ದನು. ಇವನು ಚಂದೇರಿಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಜಮೀನು ಮತ್ತು ಮನೆಯನ್ನು ಭೋಗ್ಯಕ್ಕೆ ಕೊಡಬೇಕೆಂದು ಅಧಿಕಾರಿಗಳನ್ನು ನಿರಂತರವಾಗಿ ಸಂಪರ್ಕಿಸುತ್ತಿದ್ದನು ಎನ್ನಲಾಗಿದೆ.

ಹಾವು ಹಿಡಿಯುವ ಕೆಲಸ
ಈ ತೋಟರಾಮ್ ವೃತ್ತಿಯಲ್ಲಿ ಹಾವು ಹಿಡಿಯುವ ಕೆಲಸ ಮಾಡುತ್ತಿದ್ದಾನೆ. ಚಂದೇರಿಯಲ್ಲಿನ ತುಂಡು ಭೂಮಿಯಲ್ಲಿ ವರ್ಷಗಳಿಂದ ವಾಸವಿದ್ದ ಇವನು ಲೀಸ್ ಹಾಗೂ ವಸತಿ ಘಟಕ ಎರಡಕ್ಕೂ ಬೇಡಿಕೆ ಇಟ್ಟಿದ್ದನು. ಆದರೆ, ಅವರು ಒತ್ತುವರಿ ಮಾಡಿಕೊಂಡಿರುವ ಜಮೀನು ವಕ್ಫ್ ಬೋರ್ಡ್​​​ಗೆ ಸೇರಿದ್ದರಿಂದ ಅವರ ಕೋರಿಕೆ ಈಡೇರಲಿಲ್ಲ. ಆದರೆ ಗುತ್ತಿಗೆಗೆ ಪರ್ಯಾಯ ಸ್ಥಳಗಳನ್ನು ಸೂಚಿಸಲಾಯಿತು, ಆದರೆ ತೋಟರಾಮ್ ಇದಕ್ಕೆ ಸಿದ್ಧರಿರಲಿಲ್ಲ.

ಒಂದೆಡೆ ತೋಟರಾಮ್ ವಸತಿಗಾಗಿ ಮಂಜೂರು ಮಾಡಿದ ಹಣವನ್ನು ಖರ್ಚು ಮಾಡಿದ್ದಾನೆ ಎಂದು ಹೇಳಲಾಗಿದೆ. ಮತ್ತೊಂದೆಡೆ, ಚಂದೇರಿ ಮುನ್ಸಿಪಲ್ ಕಾರ್ಪೊರೇಶನ್‌ನ ಸಿಎಂಒ ಸಂತೋಷ್ ಸೈನಿ ಹೇಳಿದ ಜಮೀನಿನಲ್ಲಿ ತೋಟರಾಮ್‌ಗೆ ವಸತಿ ಮಂಜೂರಾಗಿದ್ದು, ಈಗಾಗಲೇ ಅವರಿಗೆ ಒಂದು ಲಕ್ಷ ರೂಪಾಯಿಗಳನ್ನು ಒದಗಿಸಲಾಗಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net