More

    ಐಪಿಎಲ್​ 16ನೇ ಆವೃತ್ತಿಯಿಂದ ಹರಿದುಬಂದ ಆದಾಯವೆಷ್ಟು? ಇಲ್ಲಿದೆ ಮಾಹಿತಿ…

    ನವದೆಹಲಿ: ಕಳೆದ ಐಪಿಎಲ್​ 16ನೇ ಆವೃತ್ತಿಯ ವೇಳೆ ಜಾಹೀರಾತುಗಳಿಂದಲೇ ಬರೋಬ್ಬರಿ 10,120 ಕೋಟಿ ರೂ. ಆದಾಯ ಹರಿದು ಬಂದಿದೆ. ‘ರೆಡ್​ಸೀರ್​ ಸ್ಟ್ರಾಟಜಿ ಕನ್​ಸಲ್ಟಟಂಟ್ಸ್​’ ಎಂಬ ವಾಣಿಜ್ಯ ಸಲಹಾ ಸಂಸ್ಥೆ ನಡೆಸಿದ ಅಧ್ಯಾಯನದ ಪ್ರಕಾರ, ಈ ಪೈಕಿ ಶೇ. 65ರಷ್ಟು ಮೊತ್ತ ಬಿಸಿಸಿಐ, ಐಪಿಎಲ್ ಫ್ರಾಂಚೈಸಿಗಳು ಮತ್ತು ಪ್ರಸಾರ ಸಂಸ್ಥೆಗಳಿಗೆ ನೇರ ಆದಾಯದ ರೂಪದಲ್ಲಿ ಬಂದಿದ್ದರೆ, ಉಳಿದ ಮೊತ್ತವನ್ನು ಪರೋಕ್ಷವಾಗಿ ಗಳಿಸಿದೆ.

    ಸಾಮಾಜಿಕ ಜಾಲತಾಣ ಮತ್ತು ಇತರ ಇಂಟರ್​ನೆಟ್​ ಪ್ಲಾಟ್​ಫಾರ್ಮ್​ಗಳಿಂದ ಈ ಪರೋಕ್ಷ ಜಾಹೀರಾತು ಆದಾಯ ಲಭಿಸಿದೆ. ಪ್ರಸಾರ ಸಂಸ್ಥೆಗಳಾದ ಸ್ಟಾರ್​ ಸ್ಪೋರ್ಟ್ಸ್​ ಮತ್ತು ಜಿಯೋ ಸಿನಿಮಾ, ಜಾಹೀರಾತುಗಳಿಂದ 4,700 ಕೋಟಿ ರೂ. ಆದಾಯ ಗಳಿಸಿದ್ದರೆ, ಫ್ರಾಂಚೈಸಿಗಳು 1,450 ಕೋಟಿ ರೂ. ಮತ್ತು ಬಿಸಿಸಿಐ 430 ಕೋಟಿ ರೂ. ಆದಾಯ ಗಳಿಸಿದೆ.

    ಫ್ಯಾಂಟಸಿ ಕ್ರೀಡಾ ಫ್ಲಾಟ್​ಫಾರ್ಮ್​ಗಳು ಐಪಿಎಲ್​ ವೇಳೆ 2,800 ಕೋಟಿ ರೂ. ಆದಾಯ ಗಳಿಸಿವೆ ಎಂದು ‘ರೆಡ್​ಸೀರ್​’ ವರದಿ ತಿಳಿಸಿದೆ.

    ಭಾರತ-ವಿಂಡೀಸ್​ ಕ್ರಿಕೆಟ್​ ಸರಣಿಯನ್ನು ಯಾವ ಆ್ಯಪ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು ಗೊತ್ತೇ?

    ವಿಂಬಲ್ಡನ್​ನಲ್ಲಿ ಒಳಉಡುಪಿನ ನಿಯಮ ಸಡಿಲ; ಟೆನಿಸ್ ಆಟಗಾರ್ತಿಯರು ಈಗ ನಿರಾಳ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts