

ಬೆಂಗಳೂರು: ಒಂದೂವರೆ ತಿಂಗಳ ಹಿಂದಷ್ಟೇ ಐಪಿಎಲ್ ಹಬ್ಬ ಮುಗಿದಿದ್ದು, ಇನ್ನು ಮೂರು ತಿಂಗಳಲ್ಲಿ ಮತ್ತೊಂದು ಚುಟುಕು ಕ್ರಿಕೆಟ್ ಆವೃತ್ತಿ ಎದುರಾಗಲಿದೆ. ಇದರ ನಡುವೆ ದೇಶೀಯ ಕ್ರಿಕೆಟ್‌ನಲ್ಲೂ ಟಿ20 ಹಬ್ಬಕ್ಕೆ ವೇದಿಕೆ ಸಜ್ಜಾಗಿದೆ. ಕರೊನಾ ಹಾವಳಿಯಿಂದ ವಿಳಂಬಗೊಂಡಿರುವ ದೇಶೀಯ ಕ್ರಿಕೆಟ್ ಋತುವಿಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಮೂಲಕ ಭಾನುವಾರ ಚಾಲನೆ ಸಿಗಲಿದೆ. ಐಪಿಎಲ್‌ನಲ್ಲಿ ಆಡಿರುವ ಹಲವು ಪ್ರಮುಖ ಆಟಗಾರರು ಈ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಮುಂದಿನ ಆವೃತ್ತಿ ಸಿದ್ಧತೆ ಮತ್ತು ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ದೃಷ್ಟಿಯಿಂದ ಯುವ-ಅನುಭವಿ ಆಟಗಾರರಿಗೆ ಇದು ಪ್ರಮುಖ ಸವಾಲೆನಿಸಿದೆ.
ಸುರೇಶ್ ರೈನಾ (ಉತ್ತರ ಪ್ರದೇಶ)
ಇಶಾನ್ ಕಿಶನ್ (ಜಾರ್ಖಂಡ್)
ಸೂರ್ಯಕುಮಾರ್ ಯಾದವ್ (ಮುಂಬೈ)
ದೇವದತ್ ಪಡಿಕಲ್ (ಕರ್ನಾಟಕ)
ಕಳೆದ ದೇಶೀಯ ಕ್ರಿಕೆಟ್‌ನಲ್ಲಿ ರನ್‌ಪ್ರವಾಹ ಹರಿಸಿದ್ದ ಕರ್ನಾಟಕದ ಯುವ ಎಡಗೈ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್, ಬಳಿಕ ಐಪಿಎಲ್‌ನಲ್ಲೂ ಆರ್‌ಸಿಬಿ ಪರ ಸ್ಟಾರ್ ಕ್ರಿಕೆಟಿಗರ ನಡುವೆ ಮಿಂಚಿದ್ದರು. ಈ ಬಾರಿ ಕರ್ನಾಟಕದ ಪ್ರಮುಖ ಬ್ಯಾಟ್ಸ್‌ಮನ್‌ಗಳ ಗೈರಿನಲ್ಲಿ ಬ್ಯಾಟಿಂಗ್ ವಿಭಾಗದ ಜವಾಬ್ದಾರಿ ನಿಭಾಯಿಸಬೇಕಿದ್ದು, ಟೀಮ್ ಇಂಡಿಯಾದ ಬಾಗಿಲು ತಟ್ಟುವ ಅವಕಾಶವೂ ಇದೆ.
ಕರುಣ್ ನಾಯರ್ (ಕರ್ನಾಟಕ)
ಕಳೆದ ಕೆಲ ಸಮಯದಿಂದ ರನ್‌ಬರ ಎದುರಿಸುತ್ತಿರುವ ಕರುಣ್ ನಾಯರ್, ಐಪಿಎಲ್‌ನಲ್ಲೂ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ವೈಲ್ಯ ಕಂಡಿದ್ದರು. ಮನೀಷ್ ಪಾಂಡೆ ಗೈರಿನಲ್ಲಿ ರಾಜ್ಯ ತಂಡದ ನಾಯಕತ್ವವನ್ನೂ ವಹಿಸಿಕೊಂಡಿರುವ ಟೆಸ್ಟ್ ಕ್ರಿಕೆಟ್ ತ್ರಿಶತಕವೀರ ಕರುಣ್ ಹಳೆಯ ಲಯಕ್ಕೆ ಮರಳುವ ಹಂಬಲದಲ್ಲಿದ್ದಾರೆ.
ಶಿಖರ್ ಧವನ್ (ದೆಹಲಿ)
ಎಸ್. ಶ್ರೀಶಾಂತ್ (ಕೇರಳ)
ಸಂಜು ಸ್ಯಾಮ್ಸನ್ (ಕೇರಳ)
ದಿನೇಶ್ ಕಾರ್ತಿಕ್ (ತಮಿಳುನಾಡು)
ರಾಬಿನ್ ಉತ್ತಪ್ಪ (ಕೇರಳ)
ಯಶಸ್ವಿ ಜೈಸ್ವಾಲ್ (ಮುಂಬೈ)
ಋತುರಾಜ್ ಗಾಯಕ್ವಾಡ್ (ಮಹಾರಾಷ್ಟ್ರ)
ಭುವನೇಶ್ವರ್ ಕುಮಾರ್ (ಉತ್ತರ ಪ್ರದೇಶ)