ಐಪಿಎಲ್​ ಇತಿಹಾಸದಲ್ಲೇ ಗರಿಷ್ಠ ವೈಯಕ್ತಿಕ ಸ್ಕೋರ್​ ಗಳಿಸಿದ ಆಟಗಾರರಿವರು…ಆರ್​ಸಿಬಿಯೇ ಮೇಲುಗೈ! IPL History

IPL History

IPL History : ಕ್ರಿಕೆಟ್ ಅಭಿಮಾನಿಗಳು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಸೀಸನ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಐಪಿಎಲ್​ ಅನ್ನು ವಿಶ್ವದ ಅತ್ಯಂತ ಜನಪ್ರಿಯ ಟಿ20 ಲೀಗ್ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ನಡೆಯುವ ಈ ಮೆಗಾ ಪಂದ್ಯಾವಳಿಯಲ್ಲಿ ಅನೇಕ ಅದ್ಭುತ ಬ್ಯಾಟಿಂಗ್ ಪ್ರದರ್ಶನಗಳು ಮತ್ತು ಹೊಸ ದಾಖಲೆಗಳು ಸೃಷ್ಟಿಯಾಗುತ್ತವೆ. ಈ ಹಿಂದೆಯೂ ಅನೇಕ ಆಟಗಾರರು ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ವೈಯಕ್ತಿಕ ಸ್ಕೋರ್‌ಗಳನ್ನು ದಾಖಲಿಸಿದ ಆಟಗಾರರ ಬಗ್ಗೆ ನಾವೀಗ ತಿಳಿದುಕೊಳ್ಳೋಣ.

ಕ್ರಿಸ್ ಗೇಲ್

ಐಪಿಎಲ್ ಇತಿಹಾಸದಲ್ಲಿ ಕ್ರಿಸ್ ಗೇಲ್ ಅವರ ಹೆಸರಿನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಇದೆ. 2013, ಏಪ್ರಿಲ್ 23ರಂದು ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಗೇಲ್​ ಅವರು 175 ರನ್ ಗಳಿಸಿದರು. ಗೇಲ್ ಕೇವಲ 66 ಎಸೆತಗಳಲ್ಲಿ 13 ಬೌಂಡರಿ ಮತ್ತು 17 ಸಿಕ್ಸರ್‌ಗಳೊಂದಿಗೆ 265.15 ಸ್ಟ್ರೈಕ್ ರೇಟ್‌ನಲ್ಲಿ ಆಕ್ರಮಣಕಾರಿಯಾಗಿ ಆಡಿದರು. ಈ ಇನ್ನಿಂಗ್ಸ್ ಇನ್ನೂ ಐಪಿಎಲ್‌ನಲ್ಲಿ ಯಾರೂ ಮುರಿಯದ ದಾಖಲೆಯಾಗಿದೆ. ಅಲ್ಲದೆ, 2016 ರಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್ ವಿರುದ್ಧ ಅವರ 129 ರನ್​ಗಳ ನಾಟ್ ಔಟ್ ಇನ್ನಿಂಗ್ಸ್‌ ಕೂಡ ಟಾಪ್ 10 ಸ್ಕೋರ್‌ಗಳಲ್ಲಿ ಒಂದಾಗಿದೆ.

ಬ್ರೆಂಡನ್ ಮೆಕಲಮ್

2008ರ ಐಪಿಎಲ್​ನ ಮೊದಲ ಪಂದ್ಯದಲ್ಲಿ ಬ್ರೆಂಡನ್ ಮೆಕಲಮ್ ಅದ್ಭುತ ಶತಕ ಗಳಿಸಿದರು. 2008ರ ಏಪ್ರಿಲ್ 18ರಂದು ನಡೆದ ಪಂದ್ಯದಲ್ಲಿ ಕೊಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಪರ ಆಡಿದ ಮೆಕಲಮ್​, ಆರ್​ಸಿಬಿ ವಿರುದ್ಧ 151 ರನ್ ಗಳಿಸಿದರು. ಈ ಇನ್ನಿಂಗ್ಸ್​ನಲ್ಲಿ ಅವರು 73 ಎಸೆತಗಳಲ್ಲಿ 10 ಬೌಂಡರಿ ಮತ್ತು 13 ಸಿಕ್ಸರ್​ಗಳನ್ನು ಬಾರಿಸಿದರು. ಮೊದಲ ಐಪಿಎಲ್ ಪಂದ್ಯವೇ ಐಪಿಎಲ್ ಅನ್ನು ಹೆಚ್ಚು ಜನಪ್ರಿಯಗೊಳಿಸಿತು.

ಇದನ್ನೂ ಓದಿ: ಸುನಿತಾ ವಿಲಿಯಮ್ಸ್ ಬಂದಿಳಿದ ಕ್ರೂ ಡ್ರ್ಯಾಗನ್ ನೌಕೆ ಭೂಪ್ರದೇಶ ಬಿಟ್ಟು ಸಾಗರದಲ್ಲಿ ಇಳಿದಿದ್ದೇಕೆ? ಕಾರಣ ಹೀಗಿದೆ… Sunita Williams

ಕ್ವಿಂಟನ್ ಡಿ ಕಾಕ್

2022ರ ಸೀಸನ್​ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಲಖನೌ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಪರ ಕ್ವಿಂಟನ್ ಡಿ ಕಾಕ್ ದಾಖಲೆಯ 140 ರನ್ ಗಳಿಸಿದರು. ಅವರು 70 ಎಸೆತಗಳಲ್ಲಿ 200 ಸ್ಟ್ರೈಕ್ ರೇಟ್‌ನಲ್ಲಿ 10 ಬೌಂಡರಿ ಮತ್ತು 10 ಸಿಕ್ಸರ್‌ಗಳನ್ನು ಬಾರಿಸಿದರು. ಅವರ ಇನ್ನಿಂಗ್ಸ್ ಎಲ್ಎಸ್​ಜಿ ಗೆಲುವಿಗೆ ಸಹಾಯ ಮಾಡಿತು.

ಎಬಿ ಡಿವಿಲಿಯರ್ಸ್

2015, ಮೇ 10ರಂದು ಎಬಿ ಡಿವಿಲಿಯರ್ಸ್ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ ಭರ್ಜರಿ 133 ರನ್ ಗಳಿಸಿದರು. ಆರ್‌ಸಿಬಿ ಪರ 59 ಎಸೆತಗಳಲ್ಲಿ 19 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿ 225.42 ಸ್ಟ್ರೈಕ್ ರೇಟ್‌ನಲ್ಲಿ ಆಡಿದರು. ಮುಂದಿನ ವರ್ಷ ಅಂದರೆ, 2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ 129 ರನ್ ಗಳಿಸಿದರು.

ವಿಶ್ವದ ಶ್ರೀಮಂತ ಟಿ20 ಲೀಗ್ ಎನಿಸಿರುವ ಐಪಿಎಲ್ 18ನೇ ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 22ರಂದು ಹಾಲಿ ಚಾಂಪಿಯನ್ ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳ ಮುಖಾಮುಖಿಯೊಂದಿಗೆ ಐಪಿಎಲ್ ಹಬ್ಬಕ್ಕೆ ಚಾಲನೆ ಸಿಗಲಿದೆ. ಮೇ 25ಕ್ಕೆ ಫೈನಲ್​ ಪಂದ್ಯದೊಂದಿಗೆ 18ನೇ ಆವೃತ್ತಿ ಮುಕ್ತಾಯವಾಗಲಿದೆ. (ಏಜೆನ್ಸೀಸ್​)

ಐಪಿಎಲ್​ ಕ್ಯಾಪ್ಟನ್ಸ್​ ಚಾಲೆಂಜ್​: ಕಳೆದ ಆವೃತ್ತಿಯ ಐವರು ಮಾತ್ರ ಮುಂದುವರಿಕೆ, 9 ತಂಡಗಳಿಗೆ ಭಾರತೀಯರ ಸಾರಥ್ಯ

ವಿರಾಟ್​ ಕೊಹ್ಲಿ ವಿರೋಧದ ಹೇಳಿಕೆ ಬೆನ್ನಲ್ಲೆ ಬಿಸಿಸಿಐ ಯುರ್ಟನ್​!: 13 ತಾಣಗಳಲ್ಲಿ ಐಪಿಎಲ್​ ಕಾರ್ಯಕ್ರಮ

Share This Article

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…

ಬೇಸಿಗೆಯಲ್ಲಿ ಬೇವಿನ ನೀರಿನಿಂದ ಸ್ನಾನ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? Neem

Neem: ಬೇವು ಎಂದರೆ ಮೂಗು ಮುರಿಯುವ ಜನರೇ ಹೆಚ್ಚು. ಆದರೆ ಈ ಬೇವಿನಲ್ಲಿ ಎಷ್ಟೆಲ್ಲಾ ಪ್ರಯೋಜನಗಳಿವೆ…