ಬೆಂಗಳೂರು: ಪ್ರತಿ ಆವೃತ್ತಿಯಲ್ಲೂ ಕ್ರೀಡಾಭಿಮಾನಿಗಳಲ್ಲಿ ಕುತೂಹಲದ ಜತೆಗೆ ಹಲವು ನಿರೀೆ ಹುಟ್ಟುಹಾಕುವ ಐಪಿಎಲ್ ಈ ಬಾರಿಯೂ ವಿಶೇಷ ಎನಿಸಿದೆ. ಮೆಗಾ ಹರಾಜಿನಲ್ಲಿ ಆಟಗಾರರ ಅದಲು&ಬದಲು ತಂಡಗಳ ನಾಯಕತ್ವವನ್ನೇ ಬದಲಾಯಿಸಿದ್ದು, 2024ರಲ್ಲಿ ನಾಯಕರಾಗಿದ್ದ ಐವರು ಆಟಗಾರರು ಮಾತ್ರ ಈ ಬಾರಿಯೂ ಅದೇ ತಂಡವನ್ನು ಮುನ್ನಡೆಸಲಿದ್ದಾರೆ.
ಯುವ ಆಟಗಾರರಿಗೆ ಚಿಮ್ಮುಹಲಗೆ ಎನಿಸಿರುವ ಟೂರ್ನಿಯ 10 ತಂಡಗಳ ಪೈಕಿ 9 ತಂಡಗಳಿಗೆ ಈ ಬಾರಿ ಭಾರತೀಯರೇ ಸಾರಥ್ಯ ವಹಿಸಿಕೊಂಡಿದ್ದಾರೆ ಎಂಬುದು ವಿಶೇಷ. ಆದರೆ ಈ ಬಾರಿ ಕನ್ನಡಿಗರು ಒಂದು ತಂಡಕ್ಕೂ ನಾಯಕರಾಗಿಲ್ಲ. ಈ ಬಾರಿ ಯಾರೊಬ್ಬರು ಸಹ ತಮ್ಮ ತವರು ರಾಜ್ಯದ ತಂಡದ ನಾಯಕರಾಗಿ ಆಡುತ್ತಿಲ್ಲ. ಈ ಬಾರಿ ಹಳೆ&ಹೊಸ ನಾಯಕರ ಮುಂದಿರುವ ಸವಾಲುಗಳು ಹೀಗಿವೆ…
ಋತುರಾಜ್ ಗಾಯಕ್ವಾಡ್ (ಸಿಎಸ್ಕೆ)
ಐಪಿಎಲ್ನ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಸಿಎಸ್ಕೆ ತಂಡದ ನಾಯಕ ಎಂಬ ಪಟ್ಟಕ್ಕೆ ನ್ಯಾಯ ಒದಗಿಸಬೇಕಾದ ಸವಾಲು ಋತುರಾಜ್ ಗಾಯಕ್ವಾಡ್ ಮುಂದಿದೆ. ಧೋನಿ ಉತ್ತರಾಧಿಕಾರಿಯಾಗಿರುವ ಅವರಿಗೆ ನಾಯಕನಾಗಿ ಇದು 2ನೇ ಆವೃತ್ತಿ. ಧೋನಿ ನೆರಳಿನಿಂದ ಹೊರಬಂದು ಯಶಸ್ವಿ ತಂಡವನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ಹೊಂದಿರುವ ಋತುರಾಜ್, ಮಾಜಿ ನಾಯಕ ಧೋನಿಗೆ (ಕೊನೇ ಟೂರ್ನಿ ಆದರೆ) ಪ್ರಶಸ್ತಿ ಗೆಲುವಿನ ವಿದಾಯ ನೀಡುವ ಸವಾಲು ಹೊಂದಿದ್ದಾರೆ. ಕಳೆದ ವರ್ಷ ಲೀಗ್ನಲ್ಲಿ ಹೊರಬಿದ್ದಿದ್ದ ತಂಡಕ್ಕೆ ಈ ಬಾರಿ ದಾಖಲೆಯ 6ನೇ ಪ್ರಶಸ್ತಿ ಜಯಿಸಲು, ಅನುಭವಿ ಬ್ಯಾಟಿಂಗ್ ಹಾಗೂ ಯುವ ಬೌಲಿಂಗ್ ವಿಭಾಗವನ್ನು ಸಮರ್ಥವಾಗಿ ನಿಭಾಯಿಸಬೇಕಿದೆ.
ರಜತ್ ಪಾಟೀದಾರ್ (ಆರ್ಸಿಬಿ)
ಬದಲಿ ಆಟಗಾರನಾಗಿ ಆರ್ಸಿಬಿ ತಂಡಕ್ಕೆ ಎಂಟ್ರಿ ನೀಡಿದ್ದ ಬಲಗೈ ಬ್ಯಾಟರ್ ರಜತ್ ಪಾಟೀದಾರ್ ಇದೀಗ ನಾಯಕನ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. “ಈ ಸಲ ಕಪ್ ನಮ್ದೇ’ ಘೋಷವಾಕ್ಯದೊಂದಿಗೆ ಸತತ 17 ವರ್ಷಗಳಿಂದ ಪ್ರಶಸ್ತಿ ನಿರೀೆಯಲ್ಲಿರುವ ಅಭಿಮಾನಿಗಳಿಗೆ ಟ್ರೋಫಿ ಗ್ಯಾರಂಟಿ ನೀಡಬೇಕಿದೆ. ದೇಶೀಯ ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದು, ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಹ್ಯಾಸಲ್ವುಡ್ ಅವರನ್ನು ಸದುಪಯೋಗಪಡಿಸಿಕೊಳ್ಳುವ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಬೇಕು. ಜತೆಗೆ ಅಭಿಮಾನಿಗಳ ನಿರೀೆ ಉಳಿಸಿಕೊಳ್ಳಬೇಕಿದೆ.
ಹಾರ್ದಿಕ್ ಪಾಂಡ್ಯ (ಮುಂಬೈ ಇಂಡಿಯನ್ಸ್)
ನಾಯಕನಾಗಿ ಮೊದಲ 2 ವರ್ಷಗಳಲ್ಲಿ ದೊರೆತ ಯಶಸ್ಸು 3ನೇ ಬಾರಿ ಸಿಗಲಿಲ್ಲ. ವೃತ್ತೀಜಿವನ ಹಾಗೂ ವೈಯಕ್ತಿಕ ಜೀವನದ ಹಲವು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿರುವ ಹಾರ್ದಿಕ್, ಮುಂಬೈ ತಂಡವನ್ನು 6ನೇ ಪ್ರಶಸ್ತಿಯತ್ತ ಮುನ್ನಡೆಸಬೇಕಿದೆ. ಕಳೆದ 8 ತಿಂಗಳುಗಳಲ್ಲಿ 2 ಜಾಗತಿಕ ಐಸಿಸಿ ಟೂರ್ನಿಗಳಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದ ಪಾಂಡ್ಯ ಈಗ ಹೀರೋ ಆಗಿದ್ದಾರೆ. ಹಿಂದಿನ 3 ಆವೃತ್ತಿಗಳಲ್ಲಿ ಮುಂಬೈ ಒಮ್ಮೆ ಮಾತ್ರ ಪ್ಲೇಆ್ಗೇರಿದ್ದು, ್ರಾಂಚೈಸಿಯನ್ನು ಲಯಕ್ಕೆ ಮರಳಿಸಬೇಕಿದೆ. ಭಾರತ ತಂಡದ ಏಕದಿನ ಹಾಗೂ ಟೆಸ್ಟ್ ನಾಯಕ ರೋಹಿತ್, ಟಿ20 ಕ್ಯಾಪ್ಟನ್ ಸೂರ್ಯಕುಮಾರ್ ಇಬ್ಬರು ಹಾರ್ದಿಕ್ ಅಡಿಯಲ್ಲಿ ಆಡಲಿದ್ದಾರೆ. ಟೂರ್ನಿಯ ಮೊದಲಾರ್ಧದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಗೈರು ತಂಡಕ್ಕೆ ಹಿನ್ನಡೆ ಉಂಟುಮಾಡುವುದನ್ನು ತಪ್ಪಿಸಬೇಕಿದೆ.
ಅಜಿಂಕ್ಯ ರಹಾನೆ (ಕೆಕೆಆರ್)
ಹಿಂದಿನ ಎರಡು ಆವೃತ್ತಿಗಳಲ್ಲಿ ತೋರಿದ ಪ್ರದರ್ಶನದ ಆಧಾರದಲ್ಲಿ ಐಪಿಎಲ್ನಲ್ಲಿ ಮರುಹುಟ್ಟು ಪಡೆದುಕೊಂಡಿರುವ ರಹಾನೆ, ಈ ಬಾರಿ ನಾಯಕತ್ವದ ಜತೆಗೆ ಪ್ರಶಸ್ತಿ ಉಳಿಸಿಕೊಳ್ಳುವ ದೊಡ್ಡ ಸವಾಲು ಹೊಂದಿದ್ದಾರೆ. ಈ ಹಿಂದೆ ಕೆಕೆಆರ್ ತಂಡದಲ್ಲಿ ಆಡಿದ ಅನುಭವ ಹೊಂದಿದ್ದರೂ, ಭಾರತೀಯ ಸ್ಟಾರ್ ಆಟಗಾರರ ಕೊರತೆ ತಂಡದಲ್ಲಿದೆ. ದೇಶೀಯ ಟೂರ್ನಿಯಲ್ಲಿ ಮುಂಬೈ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಅನುಭವವಿದೆ. ವೆಂಕಟೇಶ್ ಅಯ್ಯರ್ ಉಪನಾಯಕನಾಗಿ ಬೆಂಬಲ ಒದಗಿಸಲಿದ್ದಾರೆ. ಟೂರ್ನಿಯಲ್ಲಿ ತಂಡ ಮುನ್ನಡೆಸಲಿರುವ ಹಿರಿಯನಾಗಿದ್ದು, ಅವರಿಗೆ ಇದು ಐಪಿಎಲ್ನಲ್ಲಿ 3ನೇ ತಂಡದ ನಾಯಕತ್ವವಾಗಿದೆ.
ಶುಭಮಾನ್ ಗಿಲ್ (ಗುಜರಾತ್ ಟೈಟಾನ್ಸ್)
ಹಾಲಿ ಆವೃತ್ತಿಯಲ್ಲಿ ಕಣಕ್ಕಿಳಿಯಲಿರುವ ಕಿರಿಯ ನಾಯಕ ಶುಭಮಾನ್ ಗಿಲ್. ಹಾಲಿ ವರ್ಷ ಸೀಮಿತ ಓವರ್ಗಳ ಪಂದ್ಯದಲ್ಲಿ ಭರ್ಜರಿ ಾಮ್ರ್ನಲ್ಲಿರುವ ಶುಭಮಾನ್ ಸತತ ಎರಡನೇ ಆವೃತ್ತಿಯಲ್ಲಿ ಗುಜರಾತ್ ತಂಡ ಮುನ್ನಡೆಸಲಿದ್ದಾರೆ. ಹಿಂದಿನ ಐಪಿಎಲ್ ಟೂರ್ನಿಯ ಪ್ರದರ್ಶನದಿಂದ ಭಾರತ ಏಕದಿನ ತಂಡದ ಉಪನಾಯಕ ಪಟ್ಟಕ್ಕೇರಿರುವ ಶುಭಮಾನ್ ನಾಯಕನಾಗಲು ಐಪಿಎಲ್ ಯಶಸ್ಸು ನೆರವಾಗಲಿದೆ.
ಸಂಜು ಸ್ಯಾಮ್ಸನ್ (ರಾಜಸ್ಥಾನ ರಾಯಲ್ಸ್)
ಫಿಟ್ನೆಸ್ ಸಮಸ್ಯೆ ಹಾಗೂ ಅಸ್ಥಿರ ನಿರ್ವಹಣೆಯ ನಡುವೆಯೂ ಪಟ್ಟ ಉಳಿಸಿಕೊಂಡಿರುವ ನಾಯಕ ಸ್ಯಾಮ್ಸನ್. ಉದ್ಘಾಟನಾ ಆವೃತ್ತಿಯ ಬಳಿಕ ಮತ್ತೆ ರಾಜಸ್ಥಾನ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಬೇಕಿದೆ. ಹಾಲಿ ನಾಯಕರಲ್ಲಿ ಒಂದೇ ತಂಡವನ್ನು ಮುನ್ನಡೆಸಿರುವ ಹೆಚ್ಚಿನ ಅನುಭವವಿದೆ. ಭವಿಷ್ಯದ ತಂಡ ರಚಿಸುವ ನಿಟ್ಟಿನಲ್ಲಿ ್ರಾಂಚೈಸಿ ಯುವ ಆಟಗಾರರಿಗೆ ಹೆಚ್ಚು ಒತ್ತು ನೀಡಿದ್ದು, ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟ್ರೋಫಿ ಜಯಿಸುವ ನಿರೀೆಯಲ್ಲಿದ್ದಾರೆ.
ಅಕ್ಷರ್ ಪಟೇಲ್ (ಡೆಲ್ಲಿ ಕ್ಯಾಪಿಟಲ್ಸ್)
2019ರಿಂದಲೂ ್ರಾಂಚೈಸಿ ಜತೆಗಿರುವ ಅಕ್ಷರ್, ಹಾಲಿ ಋತುವಿನಲ್ಲಿ ಸಂಪೂರ್ಣವಾಗಿ ಹೊಸ ಲುಕ್ ಪಡೆದಿರುವ ತಂಡವನ್ನು ಮುನ್ನಡೆಸಲಿದ್ದಾರೆ. ಮೊದಲ ಬಾರಿ ನಾಯಕತ್ವದಲ್ಲಿ ಪ್ರಶಸ್ತಿ ಬರ ನೀಗಿಸುವ ಜವಾಬ್ದಾರಿ ಅಕ್ಷರ್ ಪಟೇಲ್ ಮುಂದಿದೆ. ರಿಷಭ್ ಪಂತ್ ಅವರಿಂದ ತೆರವಾಗಿರುವ ಸ್ಥಾನವನ್ನು ಸಂಪೂರ್ಣವಾಗಿ ತುಂಬುವ ಸವಾಲು ಇದೆ.
ಭಾರತೀಯ ಸೀಮಿತ ಓವರ್ಗಳ ತಂಡದಲ್ಲಿ ಇತ್ತೀಚೆಗೆ ಕಾಯಂ ಆಟಗಾರ ಎನಿಸಿದ್ದು, ವೃತ್ತೀಜಿವನದ ಉತ್ತುಂಗದಲ್ಲಿರುವ ಅಕ್ಷರ್ಗೆ ನಾಯಕತ್ವ ಗುಣವನ್ನೂ ಸಾಬೀತುಪಡಿಸಲು ಹಾಲಿ ಆವೃತ್ತಿ ಉತ್ತಮ ಅವಕಾಶ.
ಶ್ರೇಯಸ್ ಅಯ್ಯರ್ (ಪಂಜಾಬ್ ಕಿಂಗ್ಸ್)
12 ವರ್ಷಗಳ ಬಳಿಕ ಕೆಕೆಆರ್ಗೆ ಕಳೆದ ಆವೃತಿಯಲ್ಲಿ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದರೂ ಶ್ರೇಯಸ್ ಅಯ್ಯರ್ಗೆ ಅದರ ಸಂಪೂರ್ಣ ಶ್ರೇಯ ಸಿಗಲೇ ಇಲ್ಲ. ಹೀಗಾಗಿ ಅವರು ತಂಡದಲ್ಲಿ ರಿಟೇನ್ ಆಗಲಿಲ್ಲ. ಈಗ ಅವರು ತನ್ನ ನಾಯಕತ್ವದ ಸಾಮರ್ಥ್ಯವನ್ನು ಮತ್ತೊಮ್ಮೆ ನಿರೂಪಿಸುವ ಮೂಲಕ, ಐಪಿಎಲ್ ಆರಂಭದಿಂದಲೂ ಪ್ರಶಸ್ತಿ ಜಯಿಸದಿರುವ ತಂಡದ ಲಕ್ ಬದಲಾಯಿಸಬೇಕಾದ ಜವಾಬ್ದಾರಿ ಪಡೆದಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಸ್ಥಿರ ಪ್ರದರ್ಶನ ನಡುವೆಯೂ ಐಪಿಎಲ್ನಲ್ಲಿ ತಂಡಗಳ ಬದಲಾವಣೆ ಸಾಮಾನ್ಯ ಎನಿಸಿದೆ. ಡೆಲ್ಲಿ ತಂಡವನ್ನು ೈನಲ್ಗೇರಿಸಿದ್ದಾಗ ಕೋಚ್ ಆಗಿದ್ದ ರಿಕಿ ಪಾಂಟಿಂಗ್ ಜತೆಗೂಡಿಯೇ ಪಂಜಾಬ್ ಪ್ರಶಸ್ತಿ ಬರ ನೀಗಿಸುವ ಸವಾಲು ಹೊಂದಿದ್ದಾರೆ. ಶ್ರೇಯಸ್ಗೆ ಇದು ನಾಯಕನಾಗಿ ಮೂರನೇ ತಂಡ.
ಪ್ಯಾಟ್ ಕಮ್ಮಿನ್ಸ್ (ಸನ್ರೈಸರ್ಸ್ ಹೈದರಾಬಾದ್)
ಈ ಬಾರಿ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಲಿರುವ ಏಕೈಕ ವಿದೇಶಿ ಆಟಗಾರ. ಕಳೆದ ಆವೃತ್ತಿಯಲ್ಲಿ ತಪ್ಪಿದ ಪ್ರಶಸ್ತಿಯನ್ನು ಈ ಬಾರಿ ವಶಪಡಿಸಿಕೊಳ್ಳುವ ಸವಾಲು ಹೊಂದಿದ್ದಾರೆ. ಸ್ವತ@ ಕಮ್ಮಿನ್ಸ್ ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದಿರುವುದು ಪ್ರಮುಖ ಹಿನ್ನಡೆ ಎನಿಸಿದೆ. ಸ್ಫೋಟಕ ಬ್ಯಾಟರ್ಗಳಿಂದ ಕೂಡಿರುವ ತಂಡದಲ್ಲಿ ಹನ್ನೊಂದರ ಬಳಗದ ಆಯ್ಕೆ ಜತೆಗೆ ಆಟಗಾರರ ಸ್ಥಿರ ಪ್ರದರ್ಶನ ಹೊರಹೊಮ್ಮಿಸಬೇಕಿದೆ. ನಾಯಕರಾಗಿ ಐಸಿಸಿ ಟೂರ್ನಿಗಳ ಯಶಸ್ಸನ್ನು ಕಳೆದ ಬಾರಿ ಐಪಿಎಲ್ನಲ್ಲೂ ಮುಂದುವರಿಸಿದ್ದರೂ, ಪ್ರಶಸ್ತಿ ಮಾತ್ರ ಸ್ವಲ್ಪದರಲ್ಲಿ ತಪ್ಪಿಹೋಗಿತ್ತು. ಹೀಗಾಗಿ ಈ ಬಾರಿ ಮತ್ತೊಮ್ಮೆ ಪ್ರಶಸ್ತಿ ಗೆಲುವಿನ ಪ್ರಯತ್ನ ನಡೆಸಬೇಕಿದೆ.
ರಿಷಭ್ ಪಂತ್ (ಲಖನೌ ಸೂಪರ್ ಜೈಂಟ್ಸ್)
ಟೂರ್ನಿಯ ಇತಿಹಾಸದಲ್ಲಿ ದುಬಾರಿ ಆಟಗಾರ ಎನಿಸಿರುವ ರಿಷಭ್ ಪಂತ್ ಭಾರಿ ನಿರೀೆಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಸದ್ಯ ಟೀಮ್ ಇಂಡಿಯಾ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ನಿಕಟ ಪೈಪೋಟಿ ಎದುರಿಸುತ್ತಿದ್ದು, ಭವಿಷ್ಯದ ನಾಯಕ ಎಂಬ ರೇಸ್ನಲ್ಲೂ ಹಿನ್ನಡೆ ಎದುರಿಸಿದ್ದಾರೆ. ಡೆಲ್ಲಿ ತಂಡವನ್ನು ಮುನ್ನಡೆಸಿರುವ ಅನುಭವ ಹೊಂದಿರುವ ಪಂತ್, ಲಖನೌಗೆ ಪ್ರಶಸ್ತಿ ಗೆದ್ದುಕೊಡುವ ಮೂಲಕ ದಿಟ್ಟ ಉತ್ತರ ನೀಡಬೇಕಿದೆ. ಬಹಿರಂಗಗೊಳ್ಳದ ಕೆಲ ಕಾರಣಗಳಿಂದಾಗಿ ಡೆಲ್ಲಿ ತಂಡದಿಂದ ಹೊರಬಂದಿದ್ದ ಪಂತ್, ಲಖನೌ ತಂಡದಲ್ಲಿನ ಯಶಸ್ಸಿನಿಂದ ಹಲವು ಸಂದೇಶಗಳನ್ನು ರವಾನಿಸುವ ಅವಕಾಶ ಹೊಂದಿದ್ದಾರೆ.