ನವದೆಹಲಿ: ಕಳೆದ ಆಸ್ಟ್ರೆಲಿಯಾ ಪ್ರವಾಸದ ವೈಲ್ಯದ ಬಳಿಕ ಭಾರತ ತಂಡದ ಆಟಗಾರರ ಕುಟುಂಬದ ಸದಸ್ಯರು ಜತೆಯಲ್ಲೇ ತೆರಳುವುದಕ್ಕೆ ರ್ನಿಬಂಧ ಹೇರಿರುವ ನಿರ್ಧಾರದಿಂದ ಬಿಸಿಸಿಐ ಯು&ರ್ಟನ್ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಕಳೆದ ಆಸೀಸ್ ಪ್ರವಾಸದ ಟೆಸ್ಟ್ ಸರಣಿ ಸೋಲಿನ ಬಳಿಕ ಟೀಮ್ ಇಂಡಿಯಾ ಆಟಗಾರರಿಗೆ ಹೊಸ ಮಾರ್ಗಸೂಚಿ ಜಾರಿಗೊಳಿಸಿರುವ ಬಿಸಿಸಿಐ, ತನ್ನ ಹೊಸ ನಿಯಮಗಳಲ್ಲಿ ಕೆಲ ಬದಲಾವಣೆ ಮಾಡಲು ಮುಂದಾಗಿದೆ. ಪ್ರವಾಸದ ವೇಳೆ ಆಟಗಾರರು ತಮ್ಮ ಕುಟುಂಬದ ಸದಸ್ಯರ ವಾಸ್ತವ್ಯವನ್ನು ದೀರ್ಕಾಲದವರೆಗೆ ವಿಸ್ತರಿಸಲು ಬಯಸಿದರೆ, ಅವರು ಮುಂಚಿತವಾಗಿ ಬಿಸಿಸಿಐಗೆ ಮಾಹಿತಿ ನೀಡಬೇಕು. ನಂತರ ಬಿಸಿಸಿಐ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗಿದೆ.
45 ದಿನಗಳ ಪ್ರವಾಸದ ವೇಳೆ ಗರಿಷ್ಠ 14 ದಿನಗಳ ಕಾಲ ಕುಟುಂಬದ ಸದಸ್ಯರು ಆಟಗಾರರ ಜತೆಗಿರಬಹುದು.ಆಟಗಾರರ ಪತ್ನಿ, ಮಕ್ಕಳು ಅಥವಾ ಗೆಳತಿಯರು ಯಾವುದೇ ಕಿರು ಪ್ರವಾಸದಲ್ಲೂ ಗರಿಷ್ಠ ಒಂದು ವಾರಕ್ಕಿಂತ ಹೆಚ್ಚು ಸಮಯ ಜತೆಗಿರಲು ಬಿಸಿಸಿಐ ಅನುಮತಿ ನೀಡದಿರುವುದನ್ನು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇತ್ತೀಚೆಗೆ ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆ ಮಾಜಿ ನಾಯಕ ಕಪಿಲ್ ದೇವ್ ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ.
ಎಲ್ಲ 13 ತಾಣಗಳಲ್ಲಿ ಸಾಂಸತಿಕ ಕಾರ್ಯಕ್ರಮ
ವಿಶ್ವ ಶ್ರೀಮಂತ ಟಿ20 ಕ್ರಿಕೆಟ್ ಟೂರ್ನಿ ಐಪಿಎಲ್ ಟೂರ್ನಿ 18ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನಲೆ ಈ ಬಾರಿ ಐಪಿಎಲ್ ಪಂದ್ಯಗಳು ನಡೆಯಲಿರುವ ಎಲ್ಲ 13 ತಾಣಗಳಲ್ಲಿ ವಿಶೇಷ ಸಾಂಸತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಬಿಸಿಸಿಐ ತಯಾರಿ ಆರಂಭಿಸಿದೆ ಎನ್ನಲಾಗಿದೆ. ಪ್ರತಿಯೊಂದು ಸ್ಥಳದ ಪ್ರೇಕ್ಷಕರಿಗೆ ಉದ್ಘಾಟನಾ ಸಮಾರಂಭದ ರುಚಿಯನ್ನು ನೀಡುವ ಮೂಲಕ ಟೂರ್ನಿಗೆ ಹೆಚ್ಚಿನ ಮೆರುಗು ನೀಡುವುದು ಇದರ ಉದ್ದೇಶವಾಗಿದೆ.
ಮಾ.22ರಂದು ನಡೆಯಲಿರುವ ಅದ್ದೂರಿ ಉದ್ಘಾಟನಾ ಸಮಾರಂಭ ಹೊರತುಪಡಿಸಿ ಇತರ 12 ತಾಣಗಳಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೆಲವು ಪ್ರಸಿದ್ಧ ಕಲಾವಿದರೂ ಇನಿಂಗ್ಸ್ ವಿರಾಮದ ನಡುವೆ ಪ್ರದರ್ಶನ ನೀಡಲಿದ್ದು, ಕಲಾವಿದರು ಹಾಗೂ ಸೆಲೆಬ್ರಿಟಿಗಳ ಪಟ್ಟಿಯನ್ನು ಬುಧವಾರ ಅಂತಿಮಗೊಳ್ಳುವ ನಿರೀೆ ಇದೆ. ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಸುವುದರಿಂದ ಪಂದ್ಯಗಳಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಸುಗಮವಾಗಿ ಕಾರ್ಯಕ್ರಮ ಆಯೋಜಿಸಲಿ ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಾಗಿದೆ.