More

  ಐಪಿಎಲ್​ ಆರಂಭಕ್ಕೂ ಮುನ್ನವೇ ಮನೀಶ್ ಪಾಂಡೆ ವಿರುದ್ಧ ರಸೆಲ್‍ ಶಾಕಿಂಗ್​ ಕಾಮೆಂಟ್​: ಕಾರಣ ಹೀಗಿದೆ!

  ಕೋಲ್ಕತ್ತಾ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಕ್ಕೆ ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿ ಇವೆ. ಕೋಲ್ಕತ್ತಾ ನೈಟ್​ ರೈಡರ್ಸ್ ತಂಡ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಭರ್ಜರಿ ಸಮರಾಭ್ಯಾಸ ಕೈಗೊಂಡಿದೆ. ಪ್ಯಾಟ್​ ಕಮಿನ್ಸ್​ ಸಾರಥ್ಯದ ಕೆಕೆಆರ್​ ತಂಡ ಟ್ರೋಫಿ ಗೆಲ್ಲಲು ಕಠಿಣ ತಾಲೀಮು ನಡೆಸುತ್ತಿದೆ. ಹೀಗಾಗಿ ಈ ಬಾರಿ ಅದಕ್ಕಿಂತಲೂ ಉತ್ತಮ ಪ್ರದರ್ಶನ ಹೊರತಂದು ಟ್ರೋಫಿ ಗೆಲುವನ್ನು ಎದುರು ನೋಡುತ್ತಿದೆ.

  ಇದನ್ನೂ ಓದಿ:  ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಶಾರುಖ್-ಸಲ್ಮಾನ್ ಕಿತ್ತಾಟ: ಅಮೀರ್ ಖಾನ್ ಬಿಚ್ಚಿಟ್ಟ ರಹಸ್ಯ

  ಕೆಕೆಆರ್ ತಂಡ ಎರಡು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದ್ದಾಗ ನಾಯಕತ್ವ ವಹಿಸಿಕೊಂಡಿದ್ದ ಗೌತಮ್ ಗಂಭೀರ್ ತಂಡದ ಮೆಂಟರ್ ಆಗಿ ವಾಪಸಾಗಿದ್ದಾರೆ. ಎರಡು ವರ್ಷ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದ ಅವರು, ಮತ್ತೆ ಕೆಕೆಆರ್ ತಂಡದ ಮಾರ್ಗದರ್ಶಕರಾಗಿದ್ದಾರೆ.

  ಮಾರ್ಚ್ 17, ಭಾನುವಾರ ನಡೆದ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಎರಡು ತಂಡಗಳಾಗಿ ಅಭ್ಯಾಸ ಪಂದ್ಯ ಆಯೋಜಿಸಲಾಗಿತ್ತು. ಈ ಮ್ಯಾಚ್​ನಲ್ಲಿ ಭರವಸೆಯ ಆಟಗಾರ ಮನೀಶ್ ಪಾಂಡೆ ಅವರು ಕೆಕೆಆರ್​ ತಂಡದ ಸ್ಟಾರ್ ಆಲ್‌ರೌಂಡರ್ ಆಂಡ್ರೆ ರಸೆಲ್​ಗೆ ಲಾಂಗ್-ಆನ್​ನಲ್ಲಿ ಬೌಂಡರಿ ಭಾರಿಸಿದ್ದಾರೆ. ಮನೀಶ್​ ಪಾಂಡೆ ರಸೆಲ್​ಗೆ ಲಾಂಗ್-ಆನ್ ಬೌಂಡರಿ ಸಿಡಿಸಿದ ವಿಡಿಯೋವೊಂದನ್ನು ಕೆಕೆಆರ್ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಪಾಂಡೆ ಜಿ ಕ್ರಿಕೆಟ್ ಆಡಲು ಸಜ್ಜಾಗುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

  ಈ ಪೋಸ್ಟ್​ ಪ್ರತಿಕ್ರಿಯಿಸಿರುವ ಆಲ್‌ರೌಂಡರ್ ಆಂಡ್ರೆ ರಸೆಲ್​ “ನನಗೆ ಇದು ಇಷ್ಟವಿಲ್ಲ. ಬಾಯ್ಸ್​ ಇಲ್ಲ ಇಲ್ಲ ಇಲ್ಲ!!! ಎಂದು ಕಮೆಂಟ್​ ಮಾಡಿದ್ದಾರೆ.
  ಭಾನುವಾರ ನಡೆದ ಅಭ್ಯಾಸ ಪಂದ್ಯದಲ್ಲಿ 14 ಎಸೆತಗಳಲ್ಲಿ 35 ರನ್ ಗಳಿಸಿದ ನಂತರ ರಸೆಲ್ ಔಟಾಗಿದ್ದಾರೆ. ಕೆಕೆಆರ್​ ಫ್ರಾಂಚೈಸಿಗೆ ಮರಳಿದ ಪಾಂಡೆ ಭರ್ಜರಿ ಆಟವಾಡಿ 24 ಬಾಲ್​ಗಳಲ್ಲಿ 51 ರನ್ ಸಿಡಿಸಿದ್ದಾರೆ.

  ಮನೀಶ್​ ಪಾಂಡೆ ಹೊರತಾಗಿ ಫಿಲ್ ಸಾಲ್ಟ್ ಮತ್ತು ನಿತೀಶ್ ರಾಣಾ ಕೂಡ ಅರ್ಧಶತಕ ಬಾರಿಸಿದರು. ಜೇಸನ್ ರಾಯ್ ಬದಲಿಗೆ ಬಂದ ಸಾಲ್ಟ್ 41 ಎಸೆತಗಳಲ್ಲಿ 78 ರನ್ ಗಳಿಸಿದರು.

  ಭರ್ಜರಿ ತಾಲೀಮು ನಡೆಸುತ್ತಿರುವ ಕೆಕೆಆರ್: ಕೆಕೆಆರ್ ತಂಡ ಎರಡು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದ್ದಾಗ ನಾಯಕತ್ವ ವಹಿಸಿಕೊಂಡಿದ್ದ ಗೌತಮ್ ಗಂಭೀರ್ ತಂಡದ ಮೆಂಟರ್ ಆಗಿ ವಾಪಸಾಗಿದ್ದು ಕೆಕೆಆರ್​ಗೆ ಆನೆಬಲ ಬಂದಂತಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ಆಂಡ್ರೆ ರಸೆಲ್ ಈಡನ್ ಗಾರ್ಡನ್ಸ್‌ನಲ್ಲಿ ಅಭ್ಯಾಸದ ಅವಧಿಯಲ್ಲ ಕಾಣಿಸಿಕೊಂಡರು. ಕಳೆದ ಬಾರಿ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು ಈ ಬಾರಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

  ಕೆಕೆಆರ್ ತಂಡದ ಸ್ಟಾರ್ ಬೌಲರ್ ಸುನಿಲ್ ನರೇನ್ ಅವರೊಂದಿಗೆ ಬ್ಯಾಟಿಂಗ್ ಅಭ್ಯಾಸದಲ್ಲಿ ಪಾಲ್ಗೊಂಡ ಬ್ಯಾಟರ್ ರಿಂಕು ಸಿಂಗ್. ಕಳೆದ ವರ್ಷ ಐಪಿಎಲ್‌ನಲ್ಲಿ 5 ಎಸೆತಗಳಲ್ಲಿ 5 ಸಿಕ್ಸರ್ ಬಾರಿಸಿದ್ದ ರಿಂಕು ಸಿಂಗ್ ಸ್ಟಾರ್ ಫಿನಿಷರ್ ಎನಿಸಿಕೊಂಡಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ತರಬೇತಿ ಅವಧಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಆಟಗಾರರಾದ ಸುನಿಲ್ ನರೈನ್ ತಂಡದ ಮಾರ್ಗದರ್ಶಕ ಗೌತಮ್ ಗಂಭೀರ್ ಅವರೊಂದಿಗೆ ಕಾಣಿಸಿಕೊಂಡರು.

  ಬಾಯ್‌ಫ್ರೆಂಡ್‌ಗಿಂತ ಶ್ರೀಮಂತೆ ಸ್ಮೃತಿ ಮಂದಾನ: ಇವ್ರಿಗೆ ‘ಬಾಯ್ ಫ್ರೆಂಡ್’ ಇದಾನಾ ಎಂದ್ರು ಆರ್‌ಸಿಬಿ ಫ್ಯಾನ್ಸ್!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts