More

    IPL 2024| ಗುಜರಾತ್​ನಲ್ಲೇ​ ಉಳಿದ ಹಾರ್ದಿಕ್​: ಇಲ್ಲಿದೆ ರಿಟೇನ್​, ರಿಲೀಸ್​ ಆಟಗಾರರ ಸಂಪೂರ್ಣ ಪಟ್ಟಿ…

    ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​)ನ ಎಲ್ಲ 10 ಫ್ರಾಂಚೈಸಿಗಳು ಡಿಸೆಂಬರ್​ 19ರಂದು ದುಬೈನಲ್ಲಿ ನಡೆಯಲಿರುವ 2024ನೇ ಸಾಲಿನ ಹಾಗೂ 17ನೇ ಆವೃತ್ತಿಯ ಐಪಿಎಲ್​ ಹರಾಜಿಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದರ ನಡುವೆ ಯಾವ ತಂಡ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ ಮತ್ತು ಯಾರನ್ನು ಬಿಡುಗಡೆ ಮಾಡಲಿದೆ ಎಂಬ ಕುತೂಹಲ ಕ್ರೀಡಾ ವಲಯದಲ್ಲಿ ತುಂಬಿತ್ತು. ಅಲ್ಲದೆ, ನಾಯಕ ಹಾರ್ದಿಕ್​ ಪಾಂಡ್ಯ ಗುಜರಾತ್​ ಟೈಟಾನ್ಸ್​ ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಲಿದ್ದಾರೆ ಎಂದು ಸಾಕಷ್ಟು ಸುದ್ದಿಯಾಗಿತ್ತು. ಆ ಎಲ್ಲ ಕುತೂಹಲಗಳಿಗೆ ಇದೀಗ ಉತ್ತರ ಸಿಕ್ಕಿದೆ.

    ಹಾರ್ದಿಕ್​ ವಿಚಾರದಲ್ಲಿ ಇದುವರೆಗೂ ಹರಿದಾಡಿದ ಸುದ್ದಿಗಳೆಲ್ಲ ಕೇವಲ ಉಹಾಪೋಹವಾಗಿದೆ. ಏಕೆಂದರೆ, ಗುಜರಾತ್​ ಫ್ರಾಂಚೈಸಿ ಹಾರ್ದಿಕ್​ರನ್ನು ರಿಟೇನ್ ಮಾಡಿಕೊಂಡಿದೆ.​ ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್​ರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಅವರನ್ನು ಉಳಿಸಿಕೊಂಡಿದೆ. ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಇದೀಗ ಚೇತರಿಸಿಕೊಂಡಿರುವ ಪಂತ್​, ಮೈದಾನಕ್ಕೆ ಮರಳುತ್ತಾರೋ ಅಥವಾ ಇಲ್ಲವೋ? ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ ಅವರನ್ನು ಉಳಿಸಿಕೊಳ್ಳಲು ಡೆಲ್ಲಿ ತಂಡ ನಿರ್ಧರಿಸಿದೆ. 2022ರ ಡಿಸೆಂಬರ್​ ತಿಂಗಳಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಗಾಯಗೊಂಡ ಪಂತ್, 2023ನೇ ಸಾಲಿನ ಐಪಿಎಲ್​ನಿಂದ ಹೊರಗುಳಿದರು. ಇದೀಗ ಮತ್ತೆ ತಂಡವನ್ನು ಸೇರಿಕೊಳ್ಳುವ ತವಕದಲ್ಲಿದ್ದಾರೆ.

    ಯಾವ ಯಾವ ತಂಡ ಯಾರೆಲ್ಲ ಆಟಗಾರರನ್ನು ಉಳಿಸಿಕೊಂಡಿದೆ ಮತ್ತು ಯಾರನ್ನು ಬಿಡುಗಡೆ ಮಾಡಿದೆ ಎಂಬುದರ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ.

    ಡೆಲ್ಲಿ ಕ್ಯಾಪಿಟಲ್ಸ್​
    ರಿಟೇನ್​ ಆಟಗಾರರು: ರಿಷಬ್ ಪಂತ್, ಪ್ರವೀಣ್ ದುಬೆ, ಡೇವಿಡ್ ವಾರ್ನರ್, ವಿಕ್ಕಿ ಓಸ್ತ್ವಾಲ್, ಪೃಥ್ವಿ ಶಾ, ಅನ್ರಿಚ್ ನಾರ್ಟ್ಜೆ, ಅಭಿಷೇಕ್ ಪೊರೆಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಲುಂಗಿ ಎನ್‌ಜಿಡಿ, ಲಲಿತ್ ಯಾದವ್, ಖಲೀಲ್ ಅಹ್ಮದ್, ಮಿಚೆಲ್ ಮಾರ್ಷ್​, ಇಶಾಂತ್ ಶರ್ಮಾ, ಯಶ್ ಧುಲ್ ಮತ್ತು ಮುಕೇಶ್ ಕುಮಾರ್.

    ಬಿಡುಗಡೆ ಮಾಡಿದ ಆಟಗಾರರು: ರಿಲೀ ರೊಸೊವ್, ಚೇತನ್ ಸಕರಿಯಾ, ರೋವ್‌ಮನ್ ಪೊವೆಲ್, ಮನೀಶ್ ಪಾಂಡೆ, ಫಿಲ್ ಸಾಲ್ಟ್, ಮುಸ್ತಾಫಿಜುರ್ ರೆಹಮಾನ್, ಕಮಲೇಶ್ ನಾಗರಕೋಟಿ, ರಿಪಾಲ್ ಪಟೇಲ್, ಸರ್ಫರಾಜ್ ಖಾನ್, ಅಮನ್ ಖಾನ್​ ಮತ್ತು ಪ್ರಿಯಮ್ ಗಾರ್ಗ್.

    ರಾಜಸ್ಥಾನ ರಾಯಲ್ಸ್​:
    ರಿಟೇನ್​ ಆಟಗಾರರು: ಸಂಜು ಸ್ಯಾಮ್ಸನ್ (ನಾಯಕ), ಜಾಸ್ ಬಟ್ಲರ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ರಿಯಾನ್ ಪರಾಗ್, ಡೊನೊವನ್ ಫೆರೇರಾ, ಕುನಾಲ್ ರಾಥೋಡ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಸೇನ್, ನವದೀಪ್ ಸೈನಿ, ಪ್ರಸಿದ್ಧ್ ಕೃಷ್ಣ, ಸಂದೀಪ್ ಶರ್ಮಾ, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್ ಮತ್ತು ಆಡಮ್ ಜಂಪಾ.

    ಬಿಡುಗಡೆ ಆಟಗಾರರು: ಜೋ ರೂಟ್, ಅಬ್ದುಲ್ ಬಸಿತ್, ಜೇಸನ್ ಹೋಲ್ಡರ್, ಆಕಾಶ್ ವಶಿಷ್ಟ್, ಕುಲದೀಪ್ ಯಾದವ್, ಓಬೇದ್ ಮೆಕಾಯ್, ಮುರುಗನ್ ಅಶ್ವಿನ್, ಕೆಸಿ ಕಾರಿಯಪ್ಪ, ಕೆಎಂ ಆಸಿಫ್.

    ವರ್ಗಾವಣೆ​: ಅವೇಶ್​ ಖಾನ್​

    ಪಂಜಾಬ್​ ಕಿಂಗ್ಸ್​:
    ರಿಟೇನ್​ ಆಟಗಾರರು: ಶಿಖರ್ ಧವನ್ (ನಾಯಕ), ಮ್ಯಾಥ್ಯೂ ಶಾರ್ಟ್, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್​ ಕೀಪರ್​), ಜಿತೇಶ್ ಶರ್ಮಾ (ವಿಕೆಟ್​ ಕೀಪರ್​), ಸಿಕಂದರ್ ರಜಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಟೈಡೆ, ಅರ್ಷ್‌ದೀಪ್ ಸಿಂಗ್, ನಾಥನ್ ಎಲ್ಲಿಸ್, ಸ್ಯಾಮ್ ಕರ್ರಾನ್, ಕಾಗಿಸೊ ರಬಾಡ, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್ , ಹರ್‌ಪ್ರೀತ್ ಭಾಟಿಯಾ, ವಿದ್ವತ್ ಕಾವೇರಪ್ಪ ಮತ್ತು ಶಿವಂ ಸಿಂಗ್.

    ಬಿಡುಗಡೆ ಆಟಗಾರರು: ಮೋಹಿತ್ ರಾಥೀ, ರಾಜ್ ಬಾವಾ, ಶಾರುಖ್ ಖಾನ್, ಭಾನುಕಾ ರಾಜಪಕ್ಸೆ ಮತ್ತು ಬಲ್ತೇಜ್ ಸಿಂಗ್.

    ಚೆನ್ನೈ ಸೂಪರ್​ ಕಿಂಗ್ಸ್​
    ರಿಟೇನ್​ ಆಟಗಾರರು: ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್​ ಕೀಪರ್​), ಮೊಯಿನ್ ಅಲಿ, ದೀಪಕ್ ಚಾಹರ್, ಡೆವೊನ್ ಕಾನ್ವೇ (ವಿಕೆಟ್​ ಕೀಪರ್​), ತುಷಾರ್ ದೇಶಪಾಂಡೆ, ಶಿವಂ ದುಬೆ, ರುತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಖೇಶ್ ಚೌಧರಿ, ಮತೀಶ ಪತಿರಣ, ಅಜಿನ್ ಶೇಕ್ ರಶೀದ್, ಮಿಚೆಲ್ ಸ್ಯಾಂಟ್ನರ್, ಸಿಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ ಮತ್ತು ಮಹೇಶ್ ತೀಕ್ಷಣ.

    ಬಿಡುಗಡೆ ಆಟಗಾರರು: ಬೆನ್ ಸ್ಟೋಕ್ಸ್, ಡ್ವೈನ್ ಪ್ರಿಟೋರಿಯಸ್, ಭಗತ್ ವರ್ಮಾ, ಸುಭ್ರಾಂಶು ಸೇನಾಪತಿ, ಅಂಬಾಟಿ ರಾಯುಡು, ಕೈಲ್ ಜೇಮಿಸನ್, ಆಕಾಶ್ ಸಿಂಗ್, ಸಿಸಂದಾ ಮಗಲಾ.

    ಕೋಲ್ಕತ ನೈಟ್​ ರೈಡರ್ಸ್​
    ರಿಟೇನ್​ ಆಟಗಾರರು: ನಿತೀಶ್ ರಾಣಾ, ರಿಂಕು ಸಿಂಗ್, ರಹಮಾನುಲ್ಲಾ ಗುರ್ಬಾಜ್, ಶ್ರೇಯಸ್ ಅಯ್ಯರ್, ಜೇಸನ್ ರಾಯ್, ಸುನಿಲ್ ನರೈನ್, ಸುಯಶ್ ಶರ್ಮಾ, ಅನುಕೂಲ್ ರಾಯ್, ಆ್ಯಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಹರ್ಷಿತ್ ರಾಣಾ, ವೈಭವ್ ಅರೋರಾ ಮತ್ತು ವರುಣ್ ಚಕ್ರವರ್ತಿ.

    ಬಿಡುಗಡೆ ಆಟಗಾರರು: ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್, ಆರ್ಯ ದೇಸಾಯಿ, ಡೇವಿಡ್ ವೈಸ್, ನಾರಾಯಣ್ ಜಗದೀಶನ್, ಮಂದೀಪ್​ ಸಿಂಗ್, ಕುಲ್ವಂತ್ ಖೆಜ್ರೋಲಿಯಾ, ಶಾರ್ದೂಲ್ ಠಾಕೂರ್, ಲುಕಿ ಫರ್ಗುಸನ್, ಉಮೇಶ್ ಯಾದವ್, ಟಿಮ್ ಸೌಥಿ ಮತ್ತು ಜಾನ್ಸನ್ ಚಾರ್ಲ್ಸ್.

    ಸನ್​ರೈಸರ್ಸ್​ ಹೈದರಾಬಾದ್​
    ರಿಟೇನ್​ ಆಟಗಾರರು: ಅಬ್ದುಲ್ ಸಮದ್, ಐಡೆನ್ ಮಾರ್ಕ್ರಾಮ್ (ನಾಯಕ), ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಹೆನ್ರಿಚ್ ಕ್ಲಾಸೆನ್, ಮಯಾಂಕ್ ಅಗರ್ವಾಲ್, ಅನ್ಮೋಲ್ಪ್ರೀತ್ ಸಿಂಗ್, ಉಪೇಂದ್ರ ಸಿಂಗ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಶರ್ಮಾ, ಮಾರ್ಕೊ ಜಾನ್ಸನ್, ವಾಷಿಂಗ್ಟನ್ ಸುಂದರ್, ಸನ್ವಿರ್ ಸಿಂಗ್, ಭುವನೇಶ್ವರ್ ಕುಮಾರ್, ಟಿ. ನಟರಾಜನ್ ಮಯಾಂಕ್ ಮಾರ್ಕಂಡೆ, ಉಮ್ರಾನ್ ಮಲಿಕ್ ಮತ್ತು ಫಜಲ್ಹಕ್ ಫಾರೂಕಿ.

    ಬಿಡುಗಡೆ ಆಟಗಾರರು: ಹ್ಯಾರಿ ಬ್ರೂಕ್, ಸಮರ್ಥ ವ್ಯಾಸ್, ಕಾರ್ತಿಕ್ ತ್ಯಾಗಿ, ವಿವ್ರಾಂತ್ ಶರ್ಮಾ, ಅಕೇಲ್ ಹೊಸೈನ್ ಮತ್ತು ಆದಿಲ್ ರಶೀದ್.

    ವರ್ಗಾವಣೆ​: ಶಹಬಾಜ್​ ಅಹ್ಮದ್​ (ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಿಂದ)

    ಲಖನೌ ಸೂಪರ್​ ಗೇಂಟ್ಸ್​:
    ರಿಟೇನ್​ ಆಟಗಾರರು: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ರವಿ ಬಿಷ್ಣೋಯ್, ನವೀನ್ ಉಲ್ ಹಕ್, ಕೃನಾಲ್ ಪಾಂಡ್ಯ, ಯುಧ್ವೀರ್ ಸಿಂಗ್, ಪ್ರೇರಕ್ ಮಂಕಡ್, ಯಶ್ ಠಾಕೂರ್, ಅಮಿತ್ ಮಿಶ್ರಾ, ಮಾರ್ಕ್ ವುಡ್, ಮಯಾಂಕ್ ಯಾದವ್ ಮತ್ತು ಮೊಹ್ಸಿನ್ ಖಾನ್.

    ಬಿಡುಗಡೆ ಆಟಗಾರರು: ಜಯದೇವ್ ಉನದ್ಕತ್, ಡೇನಿಯಲ್ ಸ್ಯಾಮ್ಸ್, ಮನನ್ ವೋಹ್ರಾ, ಸ್ವಪ್ನಿಲ್ ಸಿಂಗ್, ಕರಣ್ ಶರ್ಮ, ಅರ್ಪಿತ್ ಗುಲೇರಿಯಾ, ಸೂರ್ಯಾಂಶ್ ಶೆಡ್ಗೆ ಮತ್ತು ಕರುಣ್ ನಾಯರ್.

    ವರ್ಗಾವಣೆ​: ದೇವದತ್ತ್​ ಪಡಿಕ್ಕಲ್​ (ರಾಜಸ್ಥಾನ ರಾಯಲ್ಸ್​ ತಂಡದಿಂದ)

    ಗುಜರಾತ್​ ಟೈಟಾನ್ಸ್​
    ರಿಟೇನ್​ ಆಟಗಾರರು: ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹ, ಕೇನ್ ವಿಲಿಯಮ್ಸನ್, ಅಭಿನವ್ ಮನೋಹರ್, ಬಿ ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್, ಜಯಂತ್ ಯಾದವ್, ರಾಹುಲ್ ತೆವಾಟಿಯಾ, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಸಾಯ್​ ಕಿಶೋರ್, ರಶೀದ್​ ಖಾನ್, ಜೋಶುವಾ ಲಿಟಲ್ ಮತ್ತು ಮೋಹಿತ್ ಶರ್ಮಾ.

    ಬಿಡುಗಡೆ ಆಟಗಾರರು: ಯಶ್ ದಯಾಳ್, ಕೆಎಸ್ ಭರತ್, ಶಿವಂ ಮಾವಿ, ಉರ್ವಿಲ್ ಪಟೇಲ್, ಪ್ರದೀಪ್ ಸಾಂಗ್ವಾನ್, ಒಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್ ಮತ್ತು ದಸುನ್ ಶನಕ.

    ಮುಂಬೈ ಇಂಡಿಯನ್ಸ್​
    ರಿಟೇನ್​ ಆಟಗಾರರು: ರೋಹಿತ್ ಶರ್ಮ (ನಾಯಕ), ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಎನ್. ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಕ್ಯಾಮೆರಾನ್ ಗ್ರೀನ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಜಸ್​ಪ್ರಿತ್​ ಬಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್ ಮತ್ತು ಜೇಸನ್ ಬೆಹ್ರೆನ್ಡಾರ್ಫ್.

    ಬಿಡುಗಡೆ ಆಟಗಾರರು: ಮೊಹದ್​ ಅರ್ಷದ್ ಖಾನ್, ರಮಣದೀಪ್ ಸಿಂಗ್, ಹೃತಿಕ್ ಶೋಕೀನ್, ರಾಘವ್ ಗೋಯಲ್, ಜೋಫ್ರಾ ಆರ್ಚರ್, ಟ್ರಿಸ್ಟಾನ್ ಸ್ಟಬ್ಸ್, ಡುವಾನ್ ಜಾನ್ಸೆನ್, ಝೈ ರಿಚರ್ಡ್ಸನ್, ರಿಲೆ ಮೆರೆಡಿತ್, ಕ್ರಿಸ್ ಜೋರ್ಡಾನ್ ಮತ್ತು ಸಂದೀಪ್ ವಾರಿಯರ್.

    ವರ್ಗಾವಣೆ: ರೊಮ್ಯಾರಿಯಾ ಶೆಫರ್ಡ್​ (ಲಖನೌ ಸೂಪರ್​ ಗೇಂಟ್ಸ್​ ತಂಡದಿಂದ)

    ರಾಯಲ್ ಚಾಲೆಂಜರ್ಸ್​ ಬೆಂಗಳೂರು
    ರಿಟೇನ್​ ಆಟಗಾರರು: ಫಾಫ್ ಡುಪ್ಲೆಸಿಸ್ (ನಾಯಕ), ಗ್ಲೇನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯ್‌ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸಿ ಟೋಪ್ಲೆ, ಹಿಮಾನ್ಶು ಶರ್ಮಾ ಮತ್ತು ರಾಜನ್ ಕುಮಾರ್.

    ಬಿಡುಗಡೆ ಆಟಗಾರರು: ವನಿಂದು ಹಸರಂಗಾ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ದಾರ್ಥ್ ಕೌಲ್ ಹಾಗೂ ಕೇದಾರ್ ಜಾಧವ್.

    ವರ್ಗಾವಣೆ: ಮಯಾಂಕ್​ ದಗರ್​ (ಸನ್​ ರೈಸರ್ಸ್​ ಹೈದರಾಬಾದ್​ ತಂಡದಿಂದ)

    ಹೊಸ ಆಕರ್ಷಣೆ
    ಐಪಿಎಲ್​ ಹರಾಜಿನಲ್ಲಿ ಈ ಬಾರಿ ಕೆಲ ಹೊಸ ಆಟಗಾರರ ಆಕರ್ಷಣೆಯೂ ಇರಲಿದೆ. ವಿಶ್ವಕಪ್​ ಫೈನಲ್​ ಹೀರೋ ಟ್ರಾವಿಸ್​ ಹೆಡ್​, ಪ್ಯಾಟ್​ ಕಮ್ಮಿನ್ಸ್​, ಮಿಚೆಲ್​ ಸ್ಟಾರ್ಕ್​ ಹರಾಜಿಗೆ ಮರಳುವ ನಿರೀಕ್ಷೆ ಇದ್ದರೆ, ನ್ಯೂಜಿಲೆಂಡ್​ನ ರಚಿನ್​ ರವೀಂದ್ರ ಮತ್ತು ಡೆರಿಲ್​ ಮಿಚೆಲ್​ ಮೊದಲ ಬಾರಿ ಅದೃಷ್ಟ ಪರೀಸಲಿದ್ದಾರೆ.

    ಬೆಟ್ಟದಿಂದ ಕೆಳಗೆ ಉರುಳಿದ ಕಾರು: ಸಾವಿನ ದವಡೆಯಲ್ಲಿದ್ದ ವ್ಯಕ್ತಿಯ ಜೀವ ಉಳಿಸಿದ ಶಮಿ!

    ಬೌನ್ಸರ್​ ಎದುರಿಸುತ್ತೇನೆ, ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತೇನೆ: ತೆಲಂಗಾಣ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸದಲ್ಲಿ ಮೊಹಮ್ಮದ್ ಅಜರುದ್ದೀನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts