More

    ಬೆಟ್ಟದಿಂದ ಕೆಳಗೆ ಉರುಳಿದ ಕಾರು: ಸಾವಿನ ದವಡೆಯಲ್ಲಿದ್ದ ವ್ಯಕ್ತಿಯ ಜೀವ ಉಳಿಸಿದ ಶಮಿ!

    ಡೆಹ್ರಾಡೂನ್​: ಕಾರು ಅಪಘಾತದ ಬಳಿಕ ಸಾವಿನ ದವಡೆಗೆ ಸಿಲುಕಿದ್ದ ವ್ಯಕ್ತಿಯೊಬ್ಬರನ್ನು ಟೀಮ್​ ಇಂಡಿಯಾದ ವೇಗಿ ಮೊಹಮ್ಮದ್​ ಶಮಿ ಅವರು ರಕ್ಷಣೆ ಮಾಡಿದ ಘಟನೆ ಉತ್ತರಾಖಂಡದ ನೈನಿತಾಲ್​ನಲ್ಲಿ ನಿನ್ನೆ (ನ.25) ನಡೆದಿದೆ.

    ಬೆಟ್ಟದಿಂದ ಕೆಳಗೆ ಉರುಳಿದ ಕಾರಿನಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಕೆಲವು ವ್ಯಕ್ತಿಗಳೊಂದಿಗೆ ಸೇರಿ ಸಕಾಲಕ್ಕೆ ಹೊರಕ್ಕೆ ತೆಗೆದೆವು ಎಂದು ಸ್ವತಃ ಶಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಘಟನೆಗೆ ಸಂಬಂಧಿಸಿದ ವಿಡಿಯೋ ಶೇರ್​ ಮಾಡಿಕೊಂಡಿರುವ ಶಮಿ, ಈತ ನಿಜಕ್ಕೂ ಅದೃಷ್ಟವಂತ. ದೇವರು ಈತನಿಗೆ ಜೀವನದಲ್ಲಿ ಎರಡನೇ ಅವಕಾಶ ನೀಡಿದ್ದಾನೆ. ನನ್ನ ಕಾರಿನ ಮುಂದೆಯೇ ಈತನ ಕಾರು ನೈನಿತಾಲ್​ ಬಳಿ ಇರುವ ಬೆಟ್ಟದ ರಸ್ತೆಯಲ್ಲಿ ಕೆಳಕ್ಕೆ ಉರುಳಿತು. ತಕ್ಷಣವೇ ತುಂಬಾ ಸುರಕ್ಷಿತವಾಗಿ ಹೊರಗಡೆ ಕರೆತಂದೆವು ಎಂದು ಬರೆದುಕೊಂಡಿದ್ದಾರೆ.

    ಅಂದಹಾಗೆ ಶಮಿ ಸೌಮ್ಯ ಸ್ವಭಾವದ ವ್ಯಕ್ತಿ ಮತ್ತು ವಿನಮ್ರ ಹಿನ್ನೆಲೆಯಿಂದ ಬಂದ ಕ್ರಿಕೆಟಿಗ. ಅವರು ಬೈಕ್, ಕಾರು, ಟ್ರ್ಯಾಕ್ಟರ್, ಬಸ್ ಮತ್ತು ಟ್ರಕ್‌ಗಳನ್ನು ಓಡಿಸಿರುವುದಾಗಿ ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ನನಗೆ ಪ್ರಯಾಣ, ಮೀನುಗಾರಿಕೆ ಮತ್ತು ಡ್ರೈವಿಂಗ್​ ಅಂದರೆ ತುಂಬಾ ಇಷ್ಟ. ನನಗೆ ಬೈಕ್ ಮತ್ತು ಕಾರು ಓಡಿಸುವುದು ಅಂದರೆ ಇಷ್ಟ. ಆದರೆ ಭಾರತಕ್ಕಾಗಿ ಆಡಿದ ನಂತರ ನಾನು ಬೈಕ್ ಓಡಿಸುವುದನ್ನು ನಿಲ್ಲಿಸಿದೆ. ಏಕೆಂದರೆ, ನಾನೇನಾದರೂ ಗಾಯಗೊಂಡರೆ ಏನು ಮಾಡುವುದು? ನಾನು ಹೆದ್ದಾರಿಗಳಲ್ಲಿ ಬೈಕ್ ಓಡಿಸುತ್ತೇನೆ, ಕೆಲವೊಮ್ಮೆ ಹಳ್ಳಿಯಲ್ಲಿ ನನ್ನ ತಾಯಿಯನ್ನು ಭೇಟಿ ಮಾಡಲು ಹೋದಾಗಲೂ ಬೈಕ್​ ಓಡಿಸುತ್ತೇನೆ ಎಂದು PUMA ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

    ನಾನು ಟ್ರ್ಯಾಕ್ಟರ್, ಬಸ್, ಟ್ರಕ್​​ಗಳನ್ನು ಓಡಿಸಿದ್ದೇನೆ. ನನ್ನ ಶಾಲೆಯ ಸ್ನೇಹಿತರೊಬ್ಬರ ಮನೆಯಲ್ಲಿ ಟ್ರಕ್ ಇತ್ತು. ಅವರು ನನಗೆ ಓಡಿಸಲು ಹೇಳಿದರು. ನಾನು ಚಿಕ್ಕವನಾಗಿದ್ದಾಗ ಒಮ್ಮೆ ಟ್ರ್ಯಾಕ್ಟರ್ ಅನ್ನು ಕೊಳಕ್ಕೆ ಓಡಿಸಿದ್ದೆ ಈ ವೇಳೆ ನನ್ನ ತಂದೆ ನನ್ನನ್ನು ಗದರಿಸಿದ್ದರು ಎಂದು ಶಮಿ ಹಳೆಯ ಘಟನೆಯನ್ನು ಮೆಲಕು ಹಾಕಿದರು.

    ಅಂದಹಾಗೆ ಶಮಿ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಶ್ವಕಪ್ ಟೂರ್ನಿಯಲ್ಲಿ ಕೇವಲ 7 ಪಂದ್ಯಗಳಲ್ಲಿ 24 ವಿಕೆಟ್​ ಪಡೆಯುವುದರೊಂದಿಗೆ ಹೆಚ್ಚು ವಿಕೆಟ್​ ಪಡೆದ ಬೌಲರ್​ ಎಂಬ ಪ್ರಶಸ್ತಿಗೆ ಭಾಜನರಾದರು. ಟೂರ್ನಿಯಲ್ಲಿ ಮೂರು ಬಾರಿ 5 ವಿಕೆಟ್ ಮತ್ತು ಒಂದು 4 ವಿಕೆಟ್ ಪಡೆದರು. (ಏಜೆನ್ಸೀಸ್​)

    ವಿಶ್ವಕಪ್​ ಟ್ರೋಫಿಯ ಮೇಲೆ ಕಾಲಿಟ್ಟ ಮಿಚೆಲ್​ ಮಾರ್ಷ್​ ವಿರುದ್ಧ ಗುಡುಗಿದ ಮೊಹಮ್ಮದ್​ ಶಮಿ!

    ಮೊಹಮ್ಮದ್​ ಶಮಿಯ 2ನೇ ಹೆಂಡ್ತಿಯಾಗಲು ನಾನು ರೆಡಿ ಆದ್ರೆ ಒಂದು ಷರತ್ತು ಎಂದು ಖ್ಯಾತ ನಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts