More

    ವಿಶ್ವಕಪ್​ ಟ್ರೋಫಿಯ ಮೇಲೆ ಕಾಲಿಟ್ಟ ಮಿಚೆಲ್​ ಮಾರ್ಷ್​ ವಿರುದ್ಧ ಗುಡುಗಿದ ಮೊಹಮ್ಮದ್​ ಶಮಿ!

    ನವದೆಹಲಿ: ವಿಶ್ವಕಪ್​ ಫೈನಲ್​ ಮುಗಿದ ಬೆನ್ನಲ್ಲೇ ಟ್ರೋಫಿ ಮೇಲೆ ಆಸ್ಟ್ರೇಲಿಯಾದ ಬ್ಯಾಟರ್​ ಮಿಚೆಲ್​ ಮಾರ್ಷ್​ ಕಾಲಿಟ್ಟು ವಿಶ್ರಾಂತಿ ಪಡೆಯುವ ಮೂಲಕ ಟ್ರೋಫಿಗೆ ಅಗೌರವ ತೋರಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಸಾಕಷ್ಟು ಟೀಕೆಗಳಿಗೆ ಗುರಿಯಾಯಿತು. ಇದೀಗ ಟೀಮ್​ ಇಂಡಿಯಾದ ಸ್ಟಾರ್​ ಬೌಲರ್​ ಮೊಹಮ್ಮದ್​ ಶಮಿ ಪ್ರತಿಕ್ರಿಯೆ ನೀಡಿದ್ದು, ನಿಜಕ್ಕೂ ತುಂಬಾ ನೋವಾಯಿತು ಎಂದಿದ್ದಾರೆ.

    ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಪಡೆದ ಸಾಧನೆ ಮಾಡಿರುವ ಶಮಿ, ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಮಿಚೆಲ್​ ಮಾರ್ಷ್​ ನಡೆಯನ್ನು ಕುಟುವಾಗಿ ಟೀಕಿಸಿದ್ದಾರೆ. ನನಗೆ ತುಂಬಾ ಬೇಸರವಾಯಿತು. ವಿಶ್ವದ ಎಲ್ಲ ತಂಡಗಳು ಹೋರಾಡುವ ಮತ್ತು ತಲೆಯ ಮೇಲೆ ಹೊತ್ತು ಸಂಭ್ರಮಿಸಲು ಬಯಸುವ ಟ್ರೋಫಿಯ ಮೇಲೆ ಕಾಲು ಇಟ್ಟಿದ್ದು, ನನಗೆ ಸಂತೋಷ ನೀಡಲಿಲ್ಲ ಎಂದು ಶಮಿ ಹೇಳಿದರು.

    ಇದೇ ಸಂದರ್ಭದಲ್ಲಿ ಪಿಚ್​ ಬಗ್ಗೆ ಮಾತನಾಡಿದ ಶಮಿ, ಸಾಮಾನ್ಯವಾಗಿ ಬೌಲರ್‌ಗಳು ಮೈದಾನಕ್ಕೆ ಬಂದ ಬಳಿಕ ಪಿಚ್​ ಅನ್ನು ಪರಿಶೀಲಿಸುತ್ತಾರೆ. ನಾನು ಎಂದಿಗೂ ವಿಕೆಟ್ ಬಳಿ ಹೋಗುವುದಿಲ್ಲ ಏಕೆಂದರೆ, ನೀವು ವಿಕೆಟ್​ ಮೇಲೆ ಬೌಲ್ ಮಾಡಿದಾಗ ಮಾತ್ರ ಅದು ಬಗ್ಗೆ ನಿಮಗೆ ತಿಳಿಯುತ್ತದೆ. ಹೀಗಿರುವಾಗ ಏಕೆ ಒತ್ತಡವನ್ನು ತೆಗೆದುಕೊಳ್ಳಬೇಕು? ಹೀಗಾಗಿ ಸರಳವಾಗಿ ಇಟ್ಟುಕೊಳ್ಳುವುದು ಉತ್ತಮ ಮತ್ತು ನಿಮ್ಮನ್ನು ನೀವು ಆರಾಮವಾಗಿ ಇರಿಸಿಕೊಳ್ಳುವುದು ಉತ್ತಮ. ಆಗ ಮಾತ್ರ ನೀವು ಉತ್ತಮ ಪ್ರದರ್ಶನವನ್ನು ನೀಡುತ್ತೀರಿ ಎಂದು ಪುಮಾ ಇಂಡಿಯಾ ಜೊತೆಗಿನ ಚಾಟ್‌ನಲ್ಲಿ ಶಮಿ ತಿಳಿಸಿದರು.

    ವಿಶ್ವಕಪ್ ಅಭಿಯಾನದಲ್ಲಿ ಭಾರತದ ಪ್ಲೇಯಿಂಗ್ XI ನಲ್ಲಿ ಮೊದಲ ನಾಲ್ಕು ಪಂದ್ಯಗಳಲ್ಲಿ ಆಡದಿದ್ದರ ಬಗ್ಗೆಯೂ ಶಮಿ ಮಾತನಾಡಿದರು. ವಾಸ್ತವವಾಗಿ ಶಮಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡ ನಂತರ ತಂಡಕ್ಕೆ ಆಯ್ಕೆಯಾದರು. ತಂಡಕ್ಕೆ ಆಯ್ಕೆಯಾಗಿ ನಾಲ್ಕು ಪಂದ್ಯಗಳಲ್ಲಿ ಸುಮ್ಮನೇ ಕುಳಿತುಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ಮಾನಸಿಕವಾಗಿ ಬಲವಾಗಿರಬೇಕು. ಕೆಲವೊಮ್ಮೆ ನೀವು ಒತ್ತಡದಲ್ಲಿರುತ್ತೀರಿ ಆದರೆ, ತಂಡವು ಉತ್ತಮ ಪ್ರದರ್ಶನ ಮತ್ತು ಉತ್ತಮ ದಿಕ್ಕಿನಲ್ಲಿ ಹೋಗುವುದನ್ನು ನೋಡಿದಾಗ ಅದು ನಿಮಗೆ ತೃಪ್ತಿ ನೀಡುತ್ತದೆ ಎಂದರು.

    ಅಂದಹಾಗೆ ಶಮಿ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಶ್ವಕಪ್ ಟೂರ್ನಿಯಲ್ಲಿ ಕೇವಲ 7 ಪಂದ್ಯಗಳಲ್ಲಿ 24 ವಿಕೆಟ್​ ಪಡೆಯುವುದರೊಂದಿಗೆ ಹೆಚ್ಚು ವಿಕೆಟ್​ ಪಡೆದ ಬೌಲರ್​ ಎಂಬ ಪ್ರಶಸ್ತಿಗೆ ಭಾಜನರಾದರು. ಟೂರ್ನಿಯಲ್ಲಿ ಮೂರು ಬಾರಿ 5 ವಿಕೆಟ್ ಮತ್ತು ಒಂದು 4 ವಿಕೆಟ್ ಪಡೆದರು.

    ಪಂದ್ಯದ ವಿಚಾರಕ್ಕೆ ಬರುವುದಾದರೆ, ನ.19ರಂದು ಅಹಮಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಟೂರ್ನಿಯ ಮಹತ್ವದ ಫೈನಲ್​ ಪಂದ್ಯದಲ್ಲಿ ಭಾರತ ನೀಡಿದ 241 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಆಸಿಸ್ ಕೇವಲ​ 43 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 241 ರನ್​ ಗಳಿಸುವ ಮೂಲಕ ಸುಲಭವಾಗಿ ಗುರಿ ಮುಟ್ಟಿತು. ಕೇವಲ 47 ರನ್​ಗಳಿಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ಆಸಿಸ್​​ಗೆ ಟ್ರಾವಿಸ್​ ಹೆಡ್ ಆಪತ್ಭಾಂದವರಾದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಹೆಡ್ ( 137 ರನ್​ 120 ಎಸೆತ 15 ಬೌಂಡರಿ, 4ಸಿಕ್ಸರ್​) ​, ಆಸಿಸ್​ಗೆ ಸುಲಭ ಗೆಲುವು ತಂದುಕೊಟ್ಟರು. ಹೆಡ್​ ಜತೆಗೆ ಮಾರ್ನಸ್​ ಲಬುಶೇನ್​ ಉತ್ತಮ ಸಾಥ್​ ನೀಡಿದರು. ಈ ಜೋಡಿ ನಿರ್ಣಾಯಕ ಪಂದ್ಯದಲ್ಲಿ 192 ರನ್​ಗಳ ಅಮೋಘ ಜತೆಯಾಟವಾಡಿದರು. ತಾಳ್ಮೆಯ ಆಟವಾಡಿದ ಲಬುಶೇನ್ 110​ ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 58 ರನ್​ಗಳ ಅರ್ಧಶತಕ ಸಿಡಿಸಿ ಮಿಂಚಿದರು. (ಏಜೆನ್ಸೀಸ್​)

    ನೆತ್ತಿಗೇರಿದ ಗೆಲುವಿನ ಅಹಂ: ಆಸೀಸ್​ ನಾಯಕನೇ ಹೀಗಿರುವಾಗ ಸಹ ಆಟಗಾರರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ!

    ಭಾರತದ ಸೋಲು ಕ್ರಿಕೆಟ್​ಗೆ​ ಗೆಲುವು! ಕರ್ಮದ ಫಲ ಎಂದು​ ನಾಲಿಗೆ ಹರಿಬಿಟ್ಟ ಅಬ್ದುಲ್​ ರಜಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts