More

    ಕರ್ನಾಟಕ ಖೋ-ಖೋ ತಂಡಕ್ಕೆ ಪ್ರಶಸ್ತಿ

    ತೀರ್ಥಹಳ್ಳಿ: ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾವಳಿ ಭಾನುವಾರ ಮುಕ್ತಾಯಗೊಂಡಿದ್ದು, ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ತಂಡ ಪ್ರಥಮ ಸ್ಥಾನ ಗಳಿಸಿತು. ರೋಮಾಂಚಕಾರಿ ಫೈನಲ್ ಪಂದ್ಯಾವಳಿಯಲ್ಲಿ ಒಸ್ಮಾನಾಬಾದ್ ಹೈದರಾಬಾದ್ ತಂಡವನ್ನು ಪರಾಭವಗೊಳಿಸಿದ ಕರ್ನಾಟಕ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಮೂರು ಮತ್ತು ನಾಲ್ಕನೇ ಸ್ಥಾನವನ್ನು ಕ್ರಮವಾಗಿ ಕೋಲ್ಹಾಪುರದ ರಾಜಮಾತಾ ಹಾಗೂ ದೆಹಲಿ ತಂಡಗಳು ಪಡೆದವು. ಪುರುಷರ ವಿಭಾಗದಲ್ಲಿ ಪುಣೆ ತಂಡವು ಖೇಲೋ ಇಂಡಿಯಾ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೇರಳ ಪುರುಷರ ತಂಡ ಮೂರು ಮತ್ತು ವಿಹಾಂಗ್ ಮುಂಬೈ ತಂಡ ನಾಲ್ಕನೇ ಸ್ಥಾನ ಗಳಿಸಿವೆ. ಒಸ್ಮಾನಾಬಾದ್ ಹೈದರಾಬಾದ್ ತಂಡದ ಆಟಗಾರ್ತಿ ಋತುಜಾ(ಬೆಸ್ಟ್ ಅಟ್ಯಾಕರ್), ರಾಜಮಾತಾ ಕೋಲ್ಹಾಪುರ ತಂಡದ ವೈಷ್ಣವಿ(ಬೆಸ್ಟ್ ಡಿಫೆಂಡರ್), ಕರ್ನಾಟಕ ತಂಡದ ಮೊನಿಕಾ(ಆಲ್‌ರೌಂಡರ್) ವೈಯಕ್ತಿಕ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ಪುರುಷರ ವಿಭಾಗದಲ್ಲಿ ವಿಹಾಂಗ್ ಮುಂಬೈ ತಂಡದ ಲಕ್ಷ್ಮಣ್(ಬೆಸ್ಟ್ ಅಟ್ಯಾಕರ್), ಖೇಲೋ ಇಂಡಿಯಾ ತಂಡದ ಶುಭಂ(ಉತ್ತಮ ಡಿಫೆಂಡರ್) ಆಗಿ ಪ್ರಶಸ್ತಿ ಗಳಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts