

ನವದೆಹಲಿ: ಮಾರ್ಚ್ 22ರಿಂದ ಆರಂಭವಾಗಿರುವ ಮೆಗಾ ಐಪಿಎಲ್-2024 ಟೂರ್ನಿಯ ಎರಡನೇ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಸೋಮವಾರ (ಮಾರ್ಚ್ 25) ಪ್ರಕಟಿಸಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಫೈನಲ್ ಸೇರಿದಂತೆ ಕೆಲವು ಪಂದ್ಯಗಳು ವಿದೇಶಕ್ಕೆ ಸ್ಥಳಾಂತರವಾಗಲಿವೆ ಎಂದು ಹೇಳಲಾಗಿತ್ತು. ಆದರೆ, ಇಡೀ ಟೂರ್ನಿಯ ಭಾರತದಲ್ಲೇ ನಡೆಯಲಿದೆ ಎಂದು ಬಿಸಿಸಿಐ ಇಂದು ಖಚಿತಪಡಿಸಿದೆ.
ಕ್ವಾಲಿಫೈಯರ್-1 ಮತ್ತು ಎಲಿಮಿನೇಟರ್ ಪಂದ್ಯಗಳು ಮೇ 21 ಮತ್ತು 22 ರಂದು ಗುಜರಾತಿನ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಕ್ವಾಲಿಫೈಯರ್-2 ಮತ್ತು ಫೈನಲ್ ಪಂದ್ಯವು ಚೆನ್ನೈನ ಐಕಾನಿಕ್ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿವೆ. ಕ್ವಾಲಿಫೈಯರ್-2 ಪಂದ್ಯದ ಮೇ 24ರಂದು ನಡೆದರೆ, ಫೈನಲ್ ಪಂದ್ಯ ಮೇ 26ಕ್ಕೆ ನಡೆಯಲಿದೆ.
ಮೊದಲ ಹಂತದ ಕೊನೆಯ ಪಂದ್ಯ ಏಪ್ರಿಲ್ 7ರಂದು ಲಖನೌ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿದೆ. ಎರಡನೇ ಹಂತದ ಪಂದ್ಯ ಏಪ್ರಿಲ್ 8ರಿಂದ ಆರಂಭವಾಗಲಿದ್ದು, ಅಂದು ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸಂಪೂರ್ಣ ವೇಳಾಪಟ್ಟಿ