More

    ನೆತ್ತಿಗೇರಿದ ಗೆಲುವಿನ ಅಹಂ: ಆಸೀಸ್​ ನಾಯಕನೇ ಹೀಗಿರುವಾಗ ಸಹ ಆಟಗಾರರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ!

    ಅಹಮದಾಬಾದ್​: ವಿಶ್ವಕಪ್​ ಟ್ರೋಫಿ ಅಂದರೆ ಅದು ಕೇವಲ ವಸ್ತುವಲ್ಲ ಅದು ಅನೇಕರ ಕನಸು. ಜೀವನದಲ್ಲಿ ಒಮ್ಮೆಯಾದರೂ ಟ್ರೋಫಿಯನ್ನು ಗೆದ್ದು ಅದಕ್ಕೆ ಮುತ್ತಿಡಬೇಕು ಎಂದು ಬಯಸುತ್ತಾರೆ ಮತ್ತು ತಲೆಯ ಮೇಲೆ ಹೊತ್ತು ಮೆರೆಯುತ್ತಾರೆ. ಇಡೀ ಟೂರ್ನಿಯ ಕೇಂದ್ರ ಬಿಂದುವೇ ವಿಶ್ವಕಪ್​ ಟ್ರೋಫಿ. ಇಂತಹ ಟ್ರೋಫಿಗೆ ಆಸ್ಟ್ರೇಲಿಯಾ ಆಟಗಾರ ಮಿಚೆಲ್​ ಮಾರ್ಷ್​ ಅಗೌರವ ತೋರಿದ್ದಾರೆ. ಸಾಲದ್ದಕ್ಕೆ ತಿದ್ದು ಬುದ್ಧಿ ಹೇಳಬೇಕಾದ ತಂಡದ ನಾಯಕನೇ ತಪ್ಪನ್ನು ಪ್ರೋತ್ಸಾಹಿಸಿರುವುದು ವಿಪರ್ಯಾಸವೇ ಸರಿ.

    ನಿನ್ನೆ (ನ.19) ನಡೆದ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಭಾರತ ನೀಡಿದ್ದ 241 ರನ್​ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಟ್ರಾವಿಸ್​ ಹೆಡ್​ (137 ರನ್​ 120 ಎಸೆತ 15 ಬೌಂಡರಿ, 4ಸಿಕ್ಸರ್​) ಶತಕದ ನೆರವಿನಿಂದ 43 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 241 ರನ್​ ಗಳಿಸುವ ಮೂಲಕ 6 ವಿಕೆಟ್​ಗಳ ಅಂತರದಲ್ಲಿ ಸುಲಭವಾಗಿ ಗುರಿ ಮುಟ್ಟಿತು. ಈ ಮೂಲಕ 6ನೇ ಬಾರಿಗೆ ವಿಶ್ವಕಪ್​ ಟ್ರೋಫಿಯನ್ನು ಎತ್ತಿಹಿಡಿದು ಮತ್ತೊಮ್ಮೆ ಇತಿಹಾಸ ಬರೆಯಿತು.

    ಗೆಲುವಿನ ಅಮಲಿನಲ್ಲಿ ತೇಲುತ್ತಿರುವ ಆಸ್ಟ್ರೇಲಿಯಾ ತಂಡ ಇದುವರೆಗೂ ವಿಶ್ವಕಪ್​ ಇತಿಹಾಸದಲ್ಲಿ ಮಾಡಿರದ ತಪ್ಪೊಂದನ್ನು ಮಾಡಿದೆ. ತಂಡದ ಆಟಗಾರ ಮಿಚೆಲ್​ ಮಾರ್ಷ್​ ವಿಶ್ವಕಪ್​ ಟ್ರೋಫಿ ಮೇಲೆ ತನ್ನ ಎರಡೂ ಕಾಲುಗಳನ್ನು ಇಟ್ಟು ವಿಶ್ರಾಂತಿ ಪಡೆಯುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದೇನಾ ನಿಮ್ಮ ಸಭ್ಯತೆ, ಒಂದು ಟ್ರೋಫಿಗೆ ಕೊಡುವ ಬೆಲೆ ಇದೆನಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಹಿರಿಯರು ಟ್ರೋಫಿಯನ್ನು ಆರಾಧಿಸುತ್ತಿರುವ ಫೋಟೋಗಳನ್ನು ಶೇರ್​ ಮಾಡಿಕೊಂಡು ಪ್ರಸಕ್ತ ಆಸ್ಟ್ರೇಲಿಯಾ ತಂಡದ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಐಸಿಸಿ ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

    ನಾಯಕನಿಂದಲೂ ಅಗೌರವ
    ತಮ್ಮ ತಂಡದ ಆಟಗಾರ ಮಾಡಬಾರದ ಎಡವಟ್ಟೊಂದನ್ನು ಮಾಡಿ ತಮ್ಮ ಗೌರವ ಕಳೆಯುತ್ತಿದ್ದರೂ ನಾಯಕನಾಗಿ ಜವಬ್ದಾರಿಯುತ ಸ್ಥಾನದಲ್ಲಿರು ಪ್ಯಾಟ್​ ಕಮಿನ್ಸ್​ ತಿದ್ದು ಬುದ್ಧಿ ಹೇಳುವುದನ್ನು ಬಿಟ್ಟು, ಮಾರ್ಷ್​ ಟ್ರೋಫಿ ಮೇಲೆ ಕಾಲಿಟ್ಟಿರುವ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್​ ಮಾಡಿಕೊಳ್ಳುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದಾರೆ. ಗೆಲುವಿನ ಅಹಂ ಒಳ್ಳೆಯದಲ್ಲ. ಗೆಲುವು ಶಾಶ್ವತವಲ್ಲ ಎಂಬುದನ್ನು ಕಮಿನ್ಸ್​ ಮರೆತಂತೆ ಕಾಣುತ್ತಿದೆ. ನಾಯಕನೇ ಈ ರೀತಿಯ ವರ್ತನೆ ತೋರಿದಾಗ ಸಹ ಆಟಗಾರರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ ಮತ್ತು ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ.

    ಪಂದ್ಯದ ಫಲಿತಾಂಶ
    ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ಅಹಮಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಟೂರ್ನಿಯ ಮಹತ್ವದ ಫೈನಲ್​ ಪಂದ್ಯದಲ್ಲಿ ಭಾರತ ನೀಡಿದ 241 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಆಸಿಸ್ ಕೇವಲ​ 43 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 241 ರನ್​ ಗಳಿಸುವ ಮೂಲಕ ಸುಲಭವಾಗಿ ಗುರಿ ಮುಟ್ಟಿತು. ಕೇವಲ 47 ರನ್​ಗಳಿಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ಆಸಿಸ್​​ಗೆ ಟ್ರಾವಿಸ್​ ಹೆಡ್ ಆಪತ್ಭಾಂದವರಾದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಹೆಡ್ ( 137 ರನ್​ 120 ಎಸೆತ 15 ಬೌಂಡರಿ, 4ಸಿಕ್ಸರ್​) ​, ಆಸಿಸ್​ಗೆ ಸುಲಭ ಗೆಲುವು ತಂದುಕೊಟ್ಟರು. ಹೆಡ್​ ಜತೆಗೆ ಮಾರ್ನಸ್​ ಲಬುಶೇನ್​ ಉತ್ತಮ ಸಾಥ್​ ನೀಡಿದರು. ಈ ಜೋಡಿ ನಿರ್ಣಾಯಕ ಪಂದ್ಯದಲ್ಲಿ 192 ರನ್​ಗಳ ಅಮೋಘ ಜತೆಯಾಟವಾಡಿದರು. ತಾಳ್ಮೆಯ ಆಟವಾಡಿದ ಲಬುಶೇನ್ 110​ ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 58 ರನ್​ಗಳ ಅರ್ಧಶತಕ ಸಿಡಿಸಿ ಮಿಂಚಿದರು.

    ಆರನೇ ವಿಶ್ವಕಪ್​ ಗೆಲುವು
    ಏಕದಿನ ವಿಶ್ವಕಪ್‌ ಇತಿಹಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್​ನಲ್ಲಿ ಮುಖಾಮುಖಿಯಾಗಿದ್ದು, ಇದು ಎರಡನೇ ಬಾರಿ. 2003ರ ವಿಶ್ವಕಪ್‌ನಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದವು. ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡ ಸೌರವ್ ಗಂಗೂಲಿ ನಾಯಕತ್ವದ ಭಾರತವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಇದೀಗ ಮತ್ತೊಮ್ಮೆ ಭಾರತದ ವಿರುದ್ಧ ಗೆಲುವು ಸಾಧಿಸುವ ಮೂಲಕ ಆರನೇ ಬಾರಿ ವಿಶ್ವಕಪ್​ ಗೆಲುವು ಸಂಭ್ರಮಿಸುತ್ತಿದೆ. 1987, 1999, 2003, 2007, 2015 ಮತ್ತು ಇದೀಗ 2023 ಅಲ್ಲಿಗೆ ಒಟ್ಟು ಆರು ಬಾರಿ ಆಸ್ಟ್ರೇಲಿಯಾ ವಿಶ್ವಕಪ್​ ಗೆದ್ದಂತಾಯಿತು. (ಏಜೆನ್ಸೀಸ್​)

    ಇದೊಂದು ಇದ್ದಿದ್ದರೆ ಭಾರತ ವಿಶ್ವಕಪ್​ ಫೈನಲ್​ ಸೋಲುತ್ತಿರಲಿಲ್ಲ: ಕ್ರಿಕೆಟಿಗರ ವಿರುದ್ಧ ನಟ ಚೇತನ್ ಆಕ್ರೋಶ

    ಪ್ರಭಾಸ್ ಹೀರೋಯಿನ್ ಜತೆ ಕಟ್ಟಪ್ಪ ಪ್ರೇಮ… ಮತ್ತೊಬ್ಬ ನಾಯಕನ ಎಂಟ್ರಿಯೊಂದಿಗೆ ಸೀನ್ ರಿವರ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts