More

    ಮೊಹಮ್ಮದ್​ ಶಮಿಯ 2ನೇ ಹೆಂಡ್ತಿಯಾಗಲು ನಾನು ರೆಡಿ ಆದ್ರೆ ಒಂದು ಷರತ್ತು ಎಂದು ಖ್ಯಾತ ನಟಿ!

    ನವದೆಹಲಿ: ಪ್ರಸಕ್ತ ಏಕದಿನ ವಿಶ್ವಕಪ್​ ಟೂರ್ನಿಯ ಮೊದಲ 4 ಪಂದ್ಯಗಳಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದ ವೇಗಿ ಮೊಹಮ್ಮದ್​ ಶಮಿ, ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ಗಾಯಗೊಂಡ ಬಳಿಕ ಆಡುವ ಹನ್ನೊಂದರ ಬಳಗ ಸೇರಿಕೊಂಡರು. ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬೌಲಿಂಗ್​ನಲ್ಲಿ​ ಮಿಂಚಿರುವ ಶಮಿ ಇದೀಗ ತಂಡದ ನಿರ್ಣಾಯಕ ಬೌಲರ್​ ಎನಿಸಿಕೊಂಡಿದ್ದಾರೆ. ಕೇವಲ 4 ಪಂದ್ಯಗಳಲ್ಲಿ 14 ವಿಕೆಟ್​ ಪಡೆದು ಎಲ್ಲರ ಗಮನ ಸೆಳೆದಿರುವ ಶಮಿ, 4ರಲ್ಲಿ ಒಂದು ಪಂದ್ಯದಲ್ಲಿ 5 ವಿಕೆಟ್​ ಉರುಳಿಸಿ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಶಮಿ ಅವರ ಬೌಲಿಂಗ್​ ವೈಖರಿಗೆ ಎಲ್ಲರು ಫಿದಾ ಆಗಿದ್ದಾರೆ. ಇದರ ನಡುವೆ ನಟಿಯೊಬ್ಬಳು ಶಮಿಗೆ ಮದುವೆ ಆಫರ್​ ನೀಡಿದ್ದಾರೆ.

    ವಿಶ್ವಕಪ್​ನಲ್ಲಿ ಶಮಿಯ ಗಮನಾರ್ಹ ಸಾಧನೆಯಿಂದ ಪ್ರಭಾವಿತಳಾಗಿರುವ ಬಾಲಿವುಡ್​ ನಟಿ ಪಾಯಲ್​ ಘೋಷ್​, ಮೊಹಮ್ಮದ್​ ಶಮಿಗೆ ಮದುವೆ ಆಫರ್​ ನೀಡಿದ್ದಾರೆ. ಆದರೆ, ಒಂದು ಷರತ್ತನ್ನು ಹಾಕಿದ್ದಾರೆ. ಅಂದಹಾಗೆ ಪಾಯಲ್​ ಘೋಷ್​ ಅವರು 2009ರಲ್ಲಿ ತೆರೆಕಂಡ ಮಂಚು ಮನೋಜ್​ ಅಭಿನಯದ ಪ್ರಣಯಂ ಸಿನಿಮಾದಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದರು. ಜೂ. ಎನ್​ಟಿಆರ್​ ಅಭಿನಯದ ಊಸರವಳ್ಳಿ ಸಿನಿಮಾದಲ್ಲೂ ನಟನೆ ಮಾಡಿದ್ದಾರೆ.

    ನಾನು ಶಮಿ ಅವರನ್ನು ಎರಡನೇ ವಿವಾಹವಾಗಲು ರೆಡಿಯಾಗಿದ್ದೇನೆ. ಆದರೆ, ಒಂದು ಷರತ್ತು. ಅದೇನೆಂದರೆ, ಶಮಿ ಅವರು ತಮ್ಮ ಇಂಗ್ಲಿಷ್​ ಮಾತನಾಡುವ ಕೌಶಲ್ಯವನ್ನು ಸುಧಾರಿಸಿಕೊಳ್ಳಬೇಕು. ಇದಕ್ಕೆ ಓಕೆ ಅಂದರೆ, ನನಗೂ ಓಕೆ ಎಂದು ಎಕ್ಸ್​ (ಈ ಹಿಂದೆ ಟ್ವಿಟರ್​) ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

    ಪಾಯಲ್​ ಘೋಷ್​ ಮಾಡಿರುವ ಪೋಸ್ಟ್​ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, 93 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದು, 500ಕ್ಕೂ ಅಧಿಕ ಮಂದಿ ಕಾಮೆಂಟ್​ಗಳನ್ನು ಮಾಡಿದ್ದಾರೆ.

    ಪತ್ನಿಯಿಂದ ಬೇರೆ
    ಮೊಹಮ್ಮದ್​ ಶಮಿ ಈಗಾಗಲೇ ಹಸಿನಾ ಜಹಾನ್​ ಎಂಬುವರನ್ನು ಮದುವೆ ಆಗಿರುವುದು ಎಲ್ಲರಿಗೂ ತಿಳಿದೇ ಇದೆ. ಆದರೆ, ಕೌಟುಂಬಿಕ ಕಲಹಗಳಿಂದಾಗಿ ಶಮಿ ಮತ್ತು ಜಹಾನ್​ ಬೇರೆ ಬೇರೆ ವಾಸಿಸುತ್ತಿದ್ದಾರೆ. ಜಹಾನ್​ ಅವರು ಕೆಲವು ವರ್ಷಗಳ ಹಿಂದೆ ಶಮಿ ವಿರುದ್ಧ ವ್ಯಭಿಚಾರ, ಮ್ಯಾಚ್ ಫಿಕ್ಸಿಂಗ್ ಮತ್ತು ಕೌಟುಂಬಿಕ ದೌರ್ಜನ್ಯ ಸೇರಿದಂತೆ ಸರಣಿ ಆರೋಪಗಳನ್ನು ಮಾಡಿದ್ದರು. ಆರೋಪ ಕೇಳಿಬಂದ ಬೆನ್ನಲ್ಲೇ ಬಿಸಿಸಿಐ ಶಮಿ ಒಪ್ಪಂದವನ್ನು ತಡೆಹಿಡಿದಿತ್ತು. ಆದಾಗ್ಯೂ, ತನಿಖೆಯ ನಂತರ ಬಿಸಿಸಿಐ ಶಮಿ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಆರೋಪ ಸುಳ್ಳು ಎಂದು ಹೇಳಿ, ಸ್ವತಃ ಒಪ್ಪಂದಕ್ಕೆ ಮರಳಿತು. ಅನೇಕ ವರ್ಷಗಳಿಂದ ಇಬ್ಬರ ವೈವಾಹಿಕ ಜೀವನದ ಸಂಘರ್ಷ ಮುಂದುವರಿದುಕೊಂಡು ಬರುತ್ತಿದೆ. ಆದರೆ, ಈವರೆಗೂ ಇಬ್ಬರು ಡಿವೋರ್ಸ್​ ತೆಗೆದುಕೊಂಡಿಲ್ಲ ಎಂಬುದು ವಿಶೇಷ.

    ಶಮಿ ವಿರುದ್ಧ ಜಹಾನ್​, ಜಾಧವಪುರ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಮಿ, ಅನೇಕ ಮಹಿಳೆಯ ಜತೆ ಚಾಟಿಂಗ್​ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಜಹಾನ್​, ಮಾಜಿ ಪತಿಯ ಕಾಲ್​ ರೆಕಾರ್ಡಿಂಗ್ಸ್​ ಸಹ ಶೇರ್​ ಮಾಡಿದ್ದಾರೆ. 2018ರಿಂದ ಶಮಿ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, 2020ರವರೆಗೂ ತುಂಬಾ ಚರ್ಚೆಯಾಯಿತು. ಈ ನಡುವೆ ಶಮಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಎಲ್ಲೂ ಕುಗ್ಗದ ಶಮಿ ತಮ್ಮ ಪ್ರಯತ್ನದಿಂದ ಕ್ರಿಕೆಟ್​ನಲ್ಲಿ ಮತ್ತೆ ಪುಟಿದೆದ್ದಿದ್ದು, ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ಸ್ಟಾರ್​ ಬೌಲರ್​ ಎನಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ಶಮಿ ಯಶಸ್ಸೇ ನನಗೆ ಬಂಡವಾಳ! ಭಾರತಕ್ಕೆ ಒಳ್ಳೆಯದಾಗಲಿ ಆತನಿಗಲ್ಲ, ಮಾಜಿ ಪತ್ನಿಯ ಸ್ಫೋಟಕ ಹೇಳಿಕೆ

    ಈ ವಿಶ್ವಕಪ್​ನಲ್ಲಿ ಬ್ಯಾಟರ್​ಗಳಿಗೆ ಶಮಿಯೇ ಬೆದರಿಕೆ! ಕಾರಣ ತಿಳಿಸಿದ ಪಾಕ್​ ಮಾಜಿ ವೇಗಿ ವಾಸಿಂ ಅಕ್ರಮ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts