More

    ಈ ವಿಶ್ವಕಪ್​ನಲ್ಲಿ ಬ್ಯಾಟರ್​ಗಳಿಗೆ ಶಮಿಯೇ ಬೆದರಿಕೆ! ಕಾರಣ ತಿಳಿಸಿದ ಪಾಕ್​ ಮಾಜಿ ವೇಗಿ ವಾಸಿಂ ಅಕ್ರಮ್​

    ನವದೆಹಲಿ: ಪ್ರಸಕ್ತ ಏಕದಿನ ವಿಶ್ವಕಪ್​ ಟೂರ್ನಿಯ ಮೊದಲ 4 ಪಂದ್ಯಗಳಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದ ವೇಗಿ ಮೊಹಮ್ಮದ್​ ಶಮಿ, ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ಗಾಯಗೊಂಡ ಬಳಿಕ ಆಡುವ ಹನ್ನೊಂದರ ಬಳಗ ಸೇರಿಕೊಂಡರು. ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬೌಲಿಂಗ್​ನಲ್ಲಿ​ ಮಿಂಚಿರುವ ಶಮಿ ಇದೀಗ ತಂಡದ ನಿರ್ಣಾಯಕ ಬೌಲರ್​ ಎನಿಸಿಕೊಂಡಿದ್ದಾರೆ. ಕೇವಲ 4 ಪಂದ್ಯಗಳಲ್ಲಿ 14 ವಿಕೆಟ್​ ಪಡೆದು ಎಲ್ಲರ ಗಮನ ಸೆಳೆದಿರುವ ಶಮಿ, 4ರಲ್ಲಿ ಒಂದು ಪಂದ್ಯದಲ್ಲಿ 5 ವಿಕೆಟ್​ ಉರುಳಿಸಿ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಶಮಿ ಅವರ ಬೌಲಿಂಗ್​ ವೈಖರಿಗೆ ಪಾಕಿಸ್ತಾನದ ಲೆಜೆಂಡರಿ ಬೌಲರ್​ ವಾಸಿಂ ಅಕ್ರಂ ಸಹ ಪ್ರಭಾವಿತರಾಗಿದ್ದಾರೆ.

    ಆರಂಭದಲ್ಲಿ ಶಮಿ ಅವರನ್ನು ತಂಡದಲ್ಲಿ ಆಡಿಸದಿದ್ದಕ್ಕೆ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮ ಅವರನ್ನು ಕ್ರೀಡಾ ಜಗತ್ತು ಟೀಕಿಸಿತು. ಆದರೆ, ಅದಕ್ಕೆ ಮ್ಯಾನೇಜ್‌ಮೆಂಟ್ ಕಾರಣವಾಗಿತ್ತು. ಯಾವಾಗ ಹಾರ್ದಿಕ್​ ಪಾಂಡ್ಯ ಗಾಯಗೊಂಡು ಹೊರಗುಳಿದರೋ ಆಗ ಶಮಿ ತಂಡವನ್ನು ಸೇರಿಕೊಂಡರು. ಅವಕಾಶಕ್ಕಾಗಿ ಮೊದಲೇ ಹಸಿದಿದ್ದ ಶಮಿ ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡರು. ಕೇವಲ 4 ಪಂದ್ಯಗಳಲ್ಲೇ ಶಮಿ 16 ವಿಕೆಟ್​ ಪಡೆದಿದ್ದಾರೆ. ಅದರಲ್ಲಿ ಪಂದ್ಯವೊಂದರಲ್ಲಿ ಪಡೆದ ಗರಿಷ್ಠ 5 ವಿಕೆಟ್​ ಸಹ ಸೇರಿದೆ.

    ಇನ್ನು ಈ ವಿಶ್ವಕಪ್​ ಕುರಿತು ಸಾಕಷ್ಟು ಪಿತೂರಿ ಸಿದ್ಧಾಂತಗಳು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿವೆ. ವಿಶೇಷವಾಗಿ ಭಾರತಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಭಾರಿ ಒಲವು ತೋರುತ್ತಿದೆ ಎಂದು ಎಂದು ಪಾಕಿಸ್ತಾನ ಆರೋಪ ಮಾಡಿದೆ. ಅಲ್ಲದೆ, ಪಾಕಿಸ್ತಾನದ ಮಾಜಿ ಬ್ಯಾಟರ್ ಹಸನ್ ರಝಾ ಅವರು ಭಾರತಕ್ಕೆ ಬೌಲಿಂಗ್ ಮಾಡಲು ಐಸಿಸಿ ವಿಭಿನ್ನ ಚೆಂಡನ್ನು ನೀಡುತ್ತಿದೆ, ಹೀಗಾಗಿ ವಿಕೆಟ್​​ಗಳನ್ನು ಪಡೆಯಲು ಅವರಿಗೆ ನೆರವಾಗುತ್ತಿದೆ ಎಂದು ಹೇಳುವ ಮಟ್ಟಕ್ಕೆ ಪಾಕ್​ ಹೋಗಿದೆ.

    ಆದರೆ, ವಾಸಿಂ ಅಕ್ರಮ್​ ಇಂತಹ ಪಿತೂರಿಗಳನ್ನು ತಳ್ಳಿ ಹಾಕಿದ್ದು, ಈ ರೀತಿಯ ಆರೋಪಗಳು ನಮ್ಮ ರಾಷ್ಟ್ರವನ್ನು ಮುಜುಗರಕ್ಕೆ ದೂಡುತ್ತದೆ ಎಂದಿದ್ದಾರೆ. ಅಲ್ಲದೆ, ಯುವ ಪೀಳಿಗೆ ಶ್ರೇಷ್ಠತೆಯನ್ನು ಮೆಚ್ಚಬೇಕು ಮತ್ತು ಅವರಿಂದ ಕಲಿಯಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದರೊಂದಿಗೆ ಪ್ರಸಕ್ತ ವಿಶ್ವಕಪ್‌ನಲ್ಲಿ ಶಮಿ ತಮ್ಮ ಬೌಲಿಂಗ್​ನಲ್ಲಿ ಏಕೆ ಹೆಚ್ಚು ಮಿಂಚಿದ್ದಾರೆ ಎಂದು ಅಕ್ರಮ್ ವಿವರಿಸಿದ್ದಾರೆ.

    ಶಮಿ ಬಗ್ಗೆ ಮಾತನಾಡಿದ ಅಕ್ರಮ್​, ಆತ ತುಂಬಾ ಸರಳವಾಗಿ ಚೆಂಡನ್ನು ಎಸೆಯುತ್ತಿದ್ದಾರೆ ಮತ್ತು ನೇರವಾಗಿ ವಿಕೆಟ್​ ಗುರಿಯಾಗಿಸಿಕೊಂಡು ಬೌಲ್​ ಮಾಡುತ್ತಿದ್ದಾರೆ ಎಂದಿದ್ದಾರೆ. ಬೌಲಿಂಗ್​ ಮಾಡುವಾಗ ನಿಮಗೆ ದೃಢಸಂಕಲ್ಪದ ಅವಶ್ಯಕತೆ ಇದೆ. ನಿಮ್ಮ ಬೌಲಿಂಗ್​ನಲ್ಲಿ ನೀವು ಹೆಚ್ಚ ಶ್ರಮ ವಹಿಸಬೇಕಾಗುತ್ತದೆ. ಶಮಿ, ಅಪ್​ರೈಟ್​ ಸೀಮ್​ನೊಂದಿಗೆ ಚೆಂಡನ್ನು ಎಸೆಯುತ್ತಾರೆ. ಶಮಿ ಎಸೆದ ಚೆಂಡು ನೇರ ಸೀಮ್‌ನಲ್ಲಿ ಡೆಕ್‌ಗೆ ಬಡಿಯುತ್ತದೆ. ಅಸ್ಥಿರವಾದ ಸೀಮ್​ನಲ್ಲಿ ಶಮಿ ಚೆಂಡನ್ನು ಎಸೆಯುತ್ತಿಲ್ಲ. ವಿಕೆಟ್​ ಟು ವಿಕೆಟ್​ ನೇರ ಎಸೆತಗಳನ್ನು ಮಾಡುತ್ತಿದ್ದಾರೆ ಎಂದು ಅಕ್ರಮ್​, ಶಮಿಯನ್ನು ಕೊಂಡಾಡಿದ್ದಾರೆ.

    ಎ ಸ್ಪೋರ್ಟ್ಸ್‌ನ ಪ್ಯಾನೆಲ್‌ನಲ್ಲಿ ಪರಿಣಿತರಾಗಿರುವ ಮಾಜಿ ಪಾಕ್​ ಆಟಗಾರ ಮಿಸ್ಬಾ-ಉಲ್-ಹಕ್ ಸಹ ಶಮಿ ಅವರನ್ನು ಕೊಂಡಾಡಿದ್ದಾರೆ. ಶಮಿ ಬೌಲಿಂಗ್ ಮಾಡುವಾಗ ಮಣಿಕಟ್ಟು ಮುರಿಯಬಾರದು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

    ಶಮಿ, ಇಂಗ್ಲೆಂಡ್​ನ ಬೆನ್​ ಸ್ಟೋಕ್ಸ್​ಗೆ ಬೌಲ್ ಮಾಡಿದ ಓವರ್‌ನ ಉದಾಹರಣೆಯನ್ನು ನೀಡಿದ ಅಕ್ರಮ್​, ಶಮಿ ಎಸೆತದ ಲೆಂಥ್​ ಒಂದೇ ಆಗಿರುತ್ತದೆ. ಆದರೆ, ಸ್ಟೋಕ್ಸ್‌ ಅದನ್ನು ಗಮನಿಸುವ ಮುನ್ನವೇ ಚೆಂಡು ಆತನನ್ನು ಬಿಟ್ಟು ಹೊಗಿರುತ್ತದೆ. ಶಮಿಯ ಲೆಂಥ್​ ಮತ್ತು ಸೀಮ್ ಕೊಂಚವೂ ಬದಲಾಗವುದಿಲ್ಲ. ಅದಕ್ಕಾಗಿಯೇ ಶಮಿ ಅವರ ಓವರ್​ ತುಂಬಾ ಕಷ್ಟ ಎಂದಿದ್ದಾರೆ. ಅಲ್ಲದೆ, ಬುಮ್ರಾ ಅವರು ಕೂಡ ತಮ್ಮ ಮಣಿಕಟ್ಟನ್ನು ಚಲನೆಯನ್ನು ಮಾಡಲು ಬಳಸಿದರೆ, ಶಮಿ ಸರಿಯಾದ ಸೀಮ್ ಸ್ಥಾನವನ್ನು ಬಳಸುತ್ತಾರೆ ಎಂದು ಹೇಳುವ ಮೂಲಕ ಮಾತನ್ನು ಮುಕ್ತಾಯಗೊಳಿಸಿದರು. (ಏಜೆನ್ಸೀಸ್​)

    ಶಮಿ ಯಶಸ್ಸೇ ನನಗೆ ಬಂಡವಾಳ! ಭಾರತಕ್ಕೆ ಒಳ್ಳೆಯದಾಗಲಿ ಆತನಿಗಲ್ಲ, ಮಾಜಿ ಪತ್ನಿಯ ಸ್ಫೋಟಕ ಹೇಳಿಕೆ

    ಡಿಸೆಂಬರ್ 1ಕ್ಕೆ ‘ಅನಾವರಣ’; ಇಲ್ಲಿದೆ ಸಂಪೂರ್ಣ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts