

ನವದೆಹಲಿ: ವಂದೇ ಭಾರತ ಯೋಜನೆಯ 4ನೇ ಹಂತದ ಭಾಗವಾಗಿ ಭಾರತದಿಂದ ಅಮೆರಿಕಕ್ಕೆ ಅಂತಾರಾಷ್ಟ್ರೀಯ ವೈಮಾನಿಕ ಸೇವೆ ಒದಗಿಸಲು ಏರ್ ಇಂಡಿಯಾ ಸಜ್ಜಾಗಿದೆ. ಈ ಸೇವೆಗಾಗಿ ಬುಕ್ಕಿಂಗ್ ಈಗಾಗಲೆ ಆರಂಭವಾಗಿದ್ದು, ಜು.22ರಿಂದ ವಿಮಾನ ಸಂಚಾರ ಆರಂಭವಾಗಲಿದೆ ಎಂದು ಸಂಸ್ಥೆ ಘೋಷಿಸಿದೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಹೇಳಿಕೆ ನೀಡಿರುವ ಏರ್ ಇಂಡಿಯಾ, ಜು.22ರಿಂದ ಆರಂಭವಾಗಿ ಆಗಸ್ಟ್ 31ರವರೆಗೆ ಅಮೆರಿಕಕ್ಕೆ 180 ವಿಮಾನಗಳ ಸಂಚಾರ ಏರ್ಪಡಿಸಲಾಗುವುದು. ಹೈದರಾಬಾದ್, ಚೆನ್ನೈ, ಬೆಂಗಳೂರು, ಕೊಚ್ಚಿ, ಮುಂಬೈ ಮತ್ತು ಅಹಮದಾಬಾದ್ನಿಂದ ಅಮೆರಿಕಕ್ಕೆ ಹೋಗಲು ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದು ಹೇಳಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್ ಮುಂದೂಡಿದ ಐಸಿಸಿ; ಐಪಿಎಲ್ ಹಾದಿ ಸುಗಮ…
ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ಸಚಿವಾಲಯ, ವಿದೇಶದಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಭಾರತ ಸರ್ಕಾರ ಏರ್ಪಡಿಸಿರುವ ವಂದೇ ಭಾರತ ಯೋಜನೆಯ ರೀತಿಯಲ್ಲಿ ತಮ್ಮ ವಿಮಾನಗಳನ್ನು ಭಾರತಕ್ಕೆ ಕಳುಹಿಸಲು ಅವಕಾಶ ನೀಡುವಂತೆ ಅಮೆರಿಕ, ಫ್ರಾನ್ಸ್ ಮತ್ತು ಜರ್ಮನಿಗಳಿಂದ ಬೇಡಿಕೆ ಬಂದಿದೆ. ಸದ್ಯಕ್ಕೆ ಈ ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ.
ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಭಾರತಕ್ಕೆ ಕರೆತರಲು ನಾಲ್ಕನೇ ಹಂತದ ವಂದೇ ಭಾರತ್ ಯೋಜನೆ ಜು.3ರಿಂದ ಜಾರಿಯಲ್ಲಿದೆ. ಈ ಸೌಲಭ್ಯವನ್ನು ಬಳಸಿಕೊಳ್ಳಲು ಜನರು ಪೂರ್ವನಿಗಿದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ.