ಮ್ಯಾನ್ಮಾರ್​ನಲ್ಲಿ ಆಂತರಿಕ ದಂಗೆ; ಬೆಂಗಾವಲು ಪಡೆ ಮೇಲೆ ಏರ್​ಸ್ಟ್ರೈಕ್: 8 ಮಂದಿ ಸಾವು| Myanmar

Myanmar Air straik
Published on

Myanmar: ಮ್ಯಾನ್ಮರ್​ನಲ್ಲಿ ಆಂತರಿಕ ಸಂಘರ್ಷ ತೀವ್ರ ಗತಿಯಲ್ಲಿ ಏರಿಕೆಯಾಗಿದ್ದು, ದೇಶದ 2ನೇ ಅತಿದೊಡ್ಡ ನಗರವಾದ ಮಂಡಲೆ ಹೊರೆಗೆ ಜುಂಟಾ ಪಡೆಗಳು ಮತ್ತು ದಂಗೆ ವಿರೋಧಿ ಬಂಡುಕೋರರ ನಡುವೆ ಹೋರಾಡುತ್ತಿದ್ದ ನಾಗರಿಕ ಸರಬರಾಜು ಬೆಂಗಾವಲು ಪಡೆಯ ಮೇಲೆ ನಡೆದ ಏರ್​ಸ್ಟ್ರೈಕ್​ನಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

2021ರಿಂದ ಶುರುವಾಗಿರುವ ಆಂತರಿಕ ಸಂಘರ್ಷದಲ್ಲಿ ತಮ್ಮ ಅಸಂಖ್ಯಾತ ವಿರೋಧಿಗಳನ್ನು ಹಿಮ್ಮೆಟ್ಟಿಸಲು ಮ್ಯಾನ್ಮಾರ್‌ನ ಸಂಘರ್ಷಪೀಡಿತ ಸೇನೆಯು ತನ್ನ ವಾಯುಪಡೆಯನ್ನು ಹೆಚ್ಚಾಗಿ ನಿಯೋಜಿಸುತ್ತಿದೆ. ಆದರೆ ನಾಗರಿಕ ಸಾವುನೋವುಗಳು ಸಾಮಾನ್ಯವಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಮಂಡಲೆಯಿಂದ 17 ಕಿಮೀ ದೂರದಲ್ಲಿರುವ ಟೌಂಗ್​ಯಿನ್ ಗ್ರಾಮದಲ್ಲಿ 8 ಮಂದಿ ಮೃತಪಟ್ಟಿದ್ದಾರೆ ಎಂದು ಗ್ರಾಮದ ನಿವಾಸಿಗಳು ಹೇಳಿದ್ದಾರೆ. ಮೃತದೇಹಗಳನ್ನು ಗುರುತಿಸುವಲ್ಲಿ ತೊಂದರೆಗಳಿದ್ದು, ಭದ್ರತಾ ಕಾರಣಗಳಿಗೆ ಬಹಿರಂಗಪಡಿಸಲು ಆಗಲ್ಲ ಎಂದು ಹೇಳಿದ್ದಾರೆ.

3.5 ದಶಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿರುವ ಮತ್ತು ದೇಶದ ಅರ್ಧದಷ್ಟು ಜನರು ಬಡತನದಲ್ಲಿ ವಾಸಿಸುತ್ತಿರುವದೇಶದಲ್ಲಿ ಸಂಘರ್ಷವನ್ನು ಕೊನೆಗೊಳಿಸುವ ಮಾರ್ಗವಾಗಿ ಮ್ಯಾನ್ಮಾರ್ ಸೇನೆ ಡಿಸೆಂಬರ್‌ನಲ್ಲಿ ಚುನಾವಣೆಯನ್ನು ನಡೆಸುವುದಾಗಿ ಘೋಷಿಸಿದೆ.

ಪ್ರಜಾಪ್ರಭುತ್ವ ಪರವಾದ ಗೆರಿಲ್ಲಾ ಗುಂಪುಗಳು ಮತ್ತು ಪ್ರಬಲ ಜನಾಂಗೀಯ ಸಶಸ್ತ್ರ ಸಂಘಟನೆಗಳು ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಹೇಳಿವೆ. ಅಂತಾರಾಷ್ಟ್ರೀಯ ವೀಕ್ಷಕರು ಇದನ್ನು ಮಿಲಿಟರಿ ಆಡಳಿತವನ್ನು ಕಾನೂನುಬದ್ಧಗೊಳಿಸುವ ತಂತ್ರವೆಂದು ಟೀಕಿಸಿದ್ದಾರೆ.

ಪ್ರಜಾಪ್ರಭುತ್ವ ಪರ ಗೆರಿಲ್ಲಾ ಗುಂಪುಗಳು ಮತ್ತು ಪ್ರಬಲ ಜನಾಂಗೀಯ ಸಶಸ್ತ್ರ ಸಂಘಟನೆಗಳು ಮತದಾನವನ್ನು ಬಹಿಷ್ಕರಿಸುವುದಾಗಿ ಪ್ರತಿಜ್ಞೆ ಮಾಡಿದ್ದು, ಅಂತರರಾಷ್ಟ್ರೀಯ ವೀಕ್ಷಕರು ಇದನ್ನು ಮಿಲಿಟರಿ ಆಡಳಿತವನ್ನು ಮುಂದುವರೆಸುವುದನ್ನು ಕಾನೂನುಬದ್ಧಗೊಳಿಸುವ ತಂತ್ರವೆಂದು ಟೀಕಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net