More

    ಬ್ಯೂಟಿಫುಲ್​​ ಪತ್ನಿಯನ್ನು ಈ ರೀತಿ ನೋಡಲು ಇಚ್ಛಿಸದ ಗಂಡ… ನಡದೇ ಹೋಯಿತು ಘನ ಘೋರ ದುರಂತ

    ಜೈಪುರ: ಸಾಮಾಜಿಕ ಜಾಲತಾಣ ಅನೇಕ ಮಂದಿಗೆ ಆದಾಯದ ಮೂಲವಾಗಿದೆ. ಅದರಲ್ಲೂ ಕೆಲವು ಮಂದಿ ಪ್ರಖ್ಯಾತಿ ಪಡೆಯುವ ಮೂಲಕ ಸೆಲೆಬ್ರಿಟಿಗಳಾಗಿಬಿಡುತ್ತಾರೆ. ಒಳ್ಳೆಯ ಹೆಸರು ಮತ್ತು ಖ್ಯಾತಿಯೊಂದಿಗೆ ಹಣವನ್ನೂ ಸಂಪಾದಿಸುತ್ತಾರೆ. ಇನ್ನು ಕೆಲವರು ಹಣಕ್ಕಾಗಿಯೇ ಅಶ್ಲೀಲತೆ ಪ್ರದರ್ಶನಕ್ಕೂ ಇಳಿಯುತ್ತಾರೆ. ಇಂಥವರು ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದೂ ಉಂಟು. ಯೂಟ್ಯೂಬ್​, ಇನ್​ಸ್ಟಾಗ್ರಾಂ, ಫೇಸ್​ಬುಕ್​, ಸ್ನ್ಯಾಪ್​ಚಾಟ್​ ಸೇರಿದಂತೆ ಮುಂತಾದ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ರೀಲ್ಸ್​ ಮಾಡುವ ಮೂಲಕ ಸಾಕಷ್ಟು ಮಂದಿ ಲಕ್ಷಾಂತರ ಹಣ ಸಂಪಾದನೆ ಮಾಡುತ್ತಾರೆ. ಆದರೆ, ರೀಲ್ಸ್​ ಮಾಡುವುದು ಕುಟುಂಬದ ಕೆಲ ಸದ್ಯರಿಗೆ ಇಷ್ಟವಾಗುವುದಿಲ್ಲ. ಅಷ್ಟೇ ಯಾಕೆ ಪತ್ನಿ ರೀಲ್ಸ್​ ಮಾಡುತ್ತಿದ್ದರೆ, ಕೆಲ ಗಂಡಂದರಿಗೂ ಇಷ್ಟವಾಗುವುದಿಲ್ಲ. ಇದೇ ವಿಚಾರ ಕೌಟುಂಬಿಕ ಕಲಹಕ್ಕೂ ಕಾರಣವಾಗುತ್ತದೆ. ಕೆಲವೊಮ್ಮೆ ಕೊಲೆಯಂತಹ ಭೀಕರ ಘಟನೆ ನಡೆದಿದ್ದುಂಟು, ಇದೀಗ ಅಂಥದ್ದೇ ಮತ್ತೊಂದು ಘಟನೆ ನಡೆದಿದೆ.

    ಸೌಂದರ್ಯವತಿಯಾಗಿದ್ದ ಪತ್ನಿ, ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್​ ಮಾಡಿಕೊಂಡೇ ಕೈತುಂಬಾ ಹಣ ಸಂಪಾದನೆ ಮಾಡುವುದು ಗಂಡನಿಗೆ ಕೊಂಚವೂ ಇಷ್ಟವಾಗಲಿಲ್ಲ. ಪತ್ನಿಯ ರೀಲ್ಸ್​ ಗೀಳಿನಿಂದ ಬೇಸತ್ತ ಗಂಡ, ಪತ್ನಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ಫಲೋಡಿ ಜಿಲ್ಲೆಯಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೃತಳನ್ನು ಅನಾಮಿಕಾ ಬಿಷ್ಣೋಯಿ ಎಂದು ಗುರುತಿಸಲಾಗಿದೆ. ಆಕೆಯ ಗಂಡ ಮಹಿರಾಮ್​ ಬಿಷ್ಣೋಯಿನನ್ನು ಬಂಧಿಸಲಾಗಿದೆ.

    ಯಾರು ಈ ಅನಾಮಿಕಾ ಬಿಷ್ಣೋಯಿ?
    ಅನಾಮಿಕಾ ಬಿಷ್ಣೋಯಿ (33) ಓರ್ವ ಇನ್​ಸ್ಟಾಗ್ರಾಂ ಇನ್ಫ್ಲುಯೆನ್ಸರ್​. ತನ್ನ ಇನ್​ಸ್ಟಾಗ್ರಾಂನಲ್ಲಿ 1 ಲಕ್ಷ ಫಾಲೋವರ್ಸ್​ ಹೊಂದಿದ್ದರು. ಆಕೆಯ ರೀಲ್ಸ್​ನಿಂದಲೇ ಅಷ್ಟೊಂದು ಫಾಲೋವರ್ಸ್​ ಸಂಪಾದಿಸಿದ್ದಳು. ಡಾನ್ಸ್​ ವಿಡಿಯೋ ಮಾತ್ರವಲ್ಲದೆ, ಟ್ರಾವೆಲ್​ ಹಾಗೂ ತನ್ನ ದಿನನಿತ್ಯದ ಜೀವನದ ಬಗ್ಗೆ ವಿಡಿಯೋ ಮಾಡಿ ಇನ್​ಸ್ಟಾಗ್ರಾಂನಲ್ಲಿ ಹರಿಬಿಡುತ್ತಿದ್ದಳು. ಅನಾಮಿಕಾಗೆ ಓರ್ವ ಮಗ ಸಹ ಇದ್ದಾನೆ. ಸಾಂದರ್ಭಿಕವಾಗಿ ಮಗನನ್ನೂ ಕೂಡ ವಿಡಿಯೋದಲ್ಲಿ ಅನಾಮಿಕಾ ಪ್ರದರ್ಶಿಸುತ್ತಿದ್ದಳು. ಈಕೆ ನಾರಿ ಕಲೆಕ್ಷನ್​ ಸೆಂಟರ್​ ನಡೆಸುತ್ತಿದ್ದಳು. ಈ ಶಾಪ್ ಫಲೋಡಿಯ​ ನಾಗ್ಪುರ ರಸ್ತೆಯ ಬಳಿ ಇತ್ತು. ಗಂಡನಿಂದ ಬೇರೆಯಾಗಿ ಕಳೆದ ಎರಡು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎಂದು ತಿಳಿದುಬಂದಿದೆ. ಪತ್ನಿಯ ರೀಲ್ಸ್​ ಹುಚ್ಚಿನಿಂದ ಗಂಡ ಬೇಸತ್ತಿದ್ದ ಮತ್ತು ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

    ಸೋಮವಾರ ಎಂದಿನಂತೆ ಅನಾಮಿಕಾ, ತನ್ನ ಶಾಪ್​ಗೆ ಹೋಗಿದ್ದಾಳೆ. ಗಂಡನು ಸಹ ಅಲ್ಲಿಗೆ ಬಂದಿದ್ದಾನೆ. ಅನಾಮಿಕಾ, ಕ್ಯಾಶ್​ ಕೌಂಟರ್​ನಲ್ಲಿ ಕುಳಿತ್ತಿದ್ದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಪತ್ನಿ ಮಾತನಾಡುತ್ತಿರುವಾಗಲೇ ರಿವಾಲ್ವರ್​ ಹೊರತೆಗೆದು ಪತ್ನಿಯ ತಲೆಗೆ ಶೂಟ್​ ಮಾಡಿ, ಮಹಿರಾಮ್​ ಅಲ್ಲಿಂದ ಪರಾರಿಯಾಗಿದ್ದಾನೆ. ಕುರ್ಚಿಯಲ್ಲಿ ಕುಳಿತಿದ್ದ ಅನಾಮಿಕಾ ಕೆಳಗೆ ಕುಸಿದುಬೀಳಲು, ಅಲ್ಲಿಯೇ ಇದ್ದ ಇತರರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು.

    ಪ್ರರಕಣ ದಾಖಲಿಸಿಕೊಂಡ ಫಲೋಡಿ ಠಾಣಾ ಪೊಲೀಸರು ಆರೋಪಿ ಮಹಿರಾಮ್​ ಬಿಷ್ಣೋಯಿಯನ್ನು ಬಂಧಿಸಿದ್ದಾರೆ. ಮತ್ತಷ್ಟು ತನಿಖೆ ಮುಂದುವರಿದಿದೆ. ವಿರೋಧದ ನಡುವೆಯೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡುತ್ತಿದ್ದ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. (ಏಜೆನ್ಸೀಸ್​)

    ಪ್ಲೀಸ್​ ನಾನದನ್ನು ನೋಡಲೇಬೇಕು…ಪರಿ ಪರಿಯಾಗಿ ಬೇಡಿಕೊಂಡ ಅಭಿಮಾನಿ, ಆಸೆ ಈಡೇರಿಸಿದ ಪ್ರಿಯಾಂಕಾ!

    ನನ್ನ ಕಣ್ಣೆದುರಲ್ಲೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ! ಕಹಿ ಘಟನೆ ಬಿಚ್ಚಿಟ್ಟ ನಟಿ ವಿದ್ಯಾ ಬಾಲನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts