

ಡರ್ಬನ್: ಇಲ್ಲಿನ ಕಿಂಗ್ಸ್ಮೀಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಭಾರತ ತಡಂವು ಆರಂಭಿಕ ಸಂಜು ಸ್ಯಾಮ್ಸನ್ (107 ರನ್, 50 ಎಸೆತ, 7 ಬೌಂಡರಿ, 10 ಸಿಕ್ಸರ್) ಭರ್ಜರಿ ಶತಕದ ಫಲವಾಗಿ 8 ವಿಕೆಟ್ ನಷ್ಟಕ್ಕೆ 202 ರನ್ ಪೇರಿಸಿದ್ದು, ಆತಿಥೇಯರಿಗೆ ಬೃಹತ್ ಗುರಿಯನ್ನ ನೀಡಿದ್ದಾರೆ.
ಪಂದ್ಯ ಆರಂಭಕ್ಕೂ ಮುನ್ನ ನಡೆದ ಘಟನೆಯೊಂದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಈ ಅಜಾಗರೂಕತೆ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. 4 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ವಿವಾದವೊಂದು ಹುಟ್ಟಿಕೊಂಡಿದ್ದು, ದಕ್ಷಿಣಾ ಆಫ್ರಿಕಾ ಕ್ರಿಕೆಟ್ ಮಂಡಳಿ ಭಾರತೀಯರು ಕಿಡಿಕಾರುತ್ತಿದ್ದಾರೆ.
ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಆರಂಭಕ್ಕೂ ಮುನ್ನ ಎರಡು ತಂಡಗಳ ಆಟಗಾರರು ರಾಷ್ಟ್ರಗೀತೆಯನ್ನಾಡಲು ಮೈದಾನಕ್ಕಿಳಿದಿದ್ದರು. ಈ ವೇಳೆ ಮೊದಲು ಭಾರತದ ರಾಷ್ಟ್ರಗೀತೆ ಮೈದಾನದಲ್ಲಿ ಮೊಳಗಿತು. ಆದರೆ ಎಡವಟ್ಟು ಆದದ್ದು ಇಲ್ಲೇ. ತಾಂತ್ರಿಕ ದೋಷದ ಕಾರಣದಿಂದಾಗಿ ಭಾರತದ ರಾಷ್ಟ್ರಗೀತೆಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಆ ಬಳಿಕ ಪುನಃ ಮೊದಲಿನಿಂದ ರಾಷ್ಟ್ರಗೀತೆಯನ್ನು ಆರಂಭಿಸಲಾಯಿತು. ಮತ್ತೆ ಅದೇ ಸಮಸ್ಯೆಯಿಂದ ಎರಡನೇ ಬಾರಿಗೆ ರಾಷ್ಟ್ರಗೀತೆಯನ್ನು ನಿಲ್ಲಿಸಲಾಯಿತು. ಈ ವೇಳೆ ರಾಷ್ಟ್ರಗೀತೆಯನ್ನು ಹಾಡುತ್ತಿದ್ದ ಟೀಮ್ ಇಂಡಿಯಾ ಆಟಗಾರರು ಕೂಡ ಅಚ್ಚರಿಗೊಂಡರು. ಅಂತಿಮವಾಗಿ ಮೂರನೇ ಬಾರಿಗೆ ಭಾರತದ ರಾಷ್ಟ್ರಗೀತೆಯನ್ನು ಪೂರ್ಣವಾಗಿ ಹಾಡಿ ಮುಗಿಸಲಾಯಿತು.
ಈ ವಿಚಾರ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ಮುಂದಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಸರಿಪಡಿಸಿಕೊಳ್ಳುತ್ತದ. ಅಥವಾ ಮಾಡಿರುವ ಪ್ರಮಾದ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.