ಗಿನ್ನೆಸ್​ ದಾಖಲೆಗೆ ಭಾಜನರಾದ ಭಾರತ ಮೂಲದ ಮಹಿಳೆ; ಈಕೆಯ ಬಾಯಲ್ಲಿ ಎಷ್ಟು ಹಲ್ಲುಗಳಿವೆ ಗೊತ್ತಾ?

Kalpana
Published on

ನವದೆಹಲಿ: ಒಬ್ಬ ಮನುಷ್ಯನ ಬಾಯಲ್ಲಿ ನಾವು ಸಾಮಾನ್ಯವಾಗಿ 32 ಹಲ್ಲುಗಳಿರುವುದನ್ನು ನೋಡಿರುತ್ತೇವೆ. ಆದರೆ, ಇಲ್ಲಿ ಮಹಿಳೆಯೊಬ್ಬರು 38 ಹಲ್ಲುಗಳನ್ನು ಹೊಂದಿದ್ದು, ಅತಿ ಹೆಚ್ಚು ಹಲ್ಲುಗಳನ್ನು ಹೊಂದಿರುವವರು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ ಮತ್ತು ಗಿನ್ನಿಸ್​ ದಾಖಲೆಗೂ ಭಾಜನರಾಗಿದ್ದಾರೆ.

ತಮಿಳುನಾಡು ಮೂಲದ ಕಲ್ಪನಾ ಬಾಲನ್​ ಎಂಬುವವರು ಈ ವಿಶೇಷ ದಾಖಲೆಗೆ ಭಾಜನರಾಗಿದ್ದು, ಇವರಿಗೆ 26 ವರ್ಷ ವಯಸ್ಸು ಎಂದು ತಿಳಿದು ಬಂದಿದೆ. ಅತಿ ಹೆಚ್ಚು ಹಲ್ಲುಗಳನ್ನು ಹೊಂದಿರುವವರು ಎಂಬ ಖ್ಯಾತಿಗೆ ಕೆನೆಡಾದ ಇವಾನೊ ಮೆಲ್ಲೋನ್​ ಎಂಬ ವ್ಯಕ್ತಿ ಗಿನ್ನಿಸ್​ ದಾಖಲೆಗೆ ಪಾತ್ರರಾಗಿದ್ದು, ಇವರ ಬಾಯಲ್ಲಿ ಒಟ್ಟು 41 ಹಲ್ಲುಗಳಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ದಂತ ವೈದ್ಯರೊಬ್ಬರು, ಕಲ್ಪನಾ ನಾಲ್ಕು ಹೆಚ್ಚುವರಿ ದವಡೆ (ಕೆಳ) ಹಾಗೂ ಮ್ಯಾಕ್ಸಿಲ್ಲರಿ (ಮೇಲಿನ ದವಡೆ) ಹಲ್ಲುಗಳನ್ನು ಹೊಂದಿದ್ದಾರೆ. ಅವರಿಗೆ ಚಿಕ್ಕ ವಯಸ್ಸಿನಲ್ಲಿ ಹೆಚ್ಚುವರಿ ಹಲ್ಲುಗಳು ಬೆಳೆಯುತ್ತಿರುವುದನ್ನು ಗಮನಿಸಿದ ಅವರು ಅದರ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಿರಲಿಲ್ಲ. ಕ್ರಮೇಣ ಹಲ್ಲುಗಳು ಬೆಳೆದಂತೆ ಅವುಗಳ ನಡುವೆ ಆಹಾರ ಸಿಲುಕಿಕೊಂಡು ಇವರು ಸಮಸ್ಯೆ ಎದುರಿಸಲು ಶುರು ಮಾಡಿದ್ದರು.

ಈ ಬಗ್ಗೆ ತಿಳಿದಾಗ ಕಲ್ಪನಾ ಪೋಷಕರು ಹಲ್ಲು ತೆಗೆಸದಂತೆ ಆಕೆಗೆ ಸೂಚಿಸಿದ್ದರು. ಹೆಚ್ಚುವರಿಯಾಗಿ ಬೆಳೆದಿರುವ ಹಲ್ಲುಗಳನ್ನು ಕೀಳುವುದು ಕಷ್ಟಕರವಾಗಿದ್ದು, ಅವುಗಳು ಬೆಳೆಯುವವರೆಗೆ ತೆಗೆಸುವುದು ಬೇಡ ಎಂದು ಆಕೆಗೆ ಹೇಳಿದ್ದರು. ಆದರೆ, ದಿನ ಕಳೆದಂತೆ ಕಲ್ಪನಾ ಅವರಿಗೆ ಹಲ್ಲು ಕೀಳಿಸುವ ಪ್ರಕ್ರಿಯೆ ಭಯ ಹುಟ್ಟಿಸಿದ ಪರಿಣಾಮ ಅವರು ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ದಂತವೈದ್ಯರೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net