ಏಕದಿನ ವಿಶ್ವಕಪ್​ ಫಿನಾಲೆಯಲ್ಲಿ ಭಾರತ ಸೋಲಲು ಇದೊಂದೆ ಕಾರಣ: ಶಾಹಿದ್ ಅಫ್ರಿದಿ

Shahid Afridi
Published on

ನವದೆಹಲಿ: ಇತ್ತಿಚಿಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್ ಫಿನಾಲೆಯಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋತ ಬೆನ್ನಲ್ಲೇ ಸಂತಸಗೊಂಡಿರುವ ನೆರೆಯ ಪಾಕಿಸ್ತಾನ ಟೀಂ ಇಂಡಿಯಾ ವಿರುದ್ಧ ತನ್ನ ಟೀಕಾಪ್ರಹಾರವನ್ನು ಮುಂದುವರೆಸುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ಪಾಕ್​ ಕ್ರಿಕೆಟ್​ ತಂಡದ ಮಾಜಿ ನಾಯಕ ಶಾಹಿದ್​ ಅಫ್ರಿದಿ ಟೀಂ ಇಂಡಿಯಾ ವಿರುದ್ಧ ಮತ್ತೊಮ್ಮೆ ನಾಲಿಗೆ ಹರಿಬಿಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಶಾಹಿದ್​ ಅಫ್ರಿದಿ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಕುಣಿಲಾರದೇ ಇರುವವರು ನೆಲ ಡೊಂಕು ಎಂಬುದಕ್ಕೆ ಪಾಕಿಸ್ತಾನದವರೇ ಸ್ಪಷ್ಟ ಉದಾಹರಣೆ ಎಂದು ನೆಟ್ಟಿರಗು ಅಫ್ರಿದಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಪಾಕಿಸ್ತಾನದ ಖಾಸಗಿ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅಫ್ರಿದಿ, ಪಾಯಿಂಟ್ಸ್​ ಟೇಬಲ್​ನಲ್ಲಿ ಅಜೇಯವಾಗಿ ಉಳಿದಿದ್ದೇವೆ ಎಂಬ ಕಾರಣಕ್ಕೆ ನಿಮ್ಮಲ್ಲಿ ಉಂಟಾದ ಆತ್ಮವಿಶ್ವಾಸವೇ ನಿಮ್ಮ ಅವನತಿಗೆ ಕಾರಣವಾಗಿದೆ. ಯಾವಾಗ ನೀವು ಆಡಿದ 10 ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿ ಫಿನಾಲೆ ಪ್ರವೇಶಿಸಿದಾಗ ನಿಮ್ಮಲ್ಲಿದ್ದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗ ತೊಡಗಿತ್ತು. ಎದುರಾಳಿ ತಂಡದ ವಿರುದ್ಧ ಸರಿಯಾದ ಗೇಮ್​ಪ್ಲ್ಯಾನ್​ ಮಾಡದೇ ಅತಿಯಾದ ಆತ್ಮವಿಶ್ವಾಸದಿಂದ ಭಾರತ ಆಸ್ಟ್ರೇಲಿಯಾ ವಿರುದ್ಧ ಸರಿಯಾದ ಗೇಮ್​ಪ್ಲ್ಯಾನ್​ ಮಾಡದೇ ಸೋತಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.

ಇತ್ತ ಅಫ್ರಿದಿಯ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವಯರಲ್​ ಆದ ಬೆನ್ನಲ್ಲೇ ಕಿಡಿಕಾರಿರುವ ನೆಟ್ಟಿಗರು, ಭಾರತ ಫಿನಾಲೆವರೆಗೂ ಬಂದು ಸೋತಿದೆ. ಆದರೆಮ ನಿಮ್ಮಂವರಂತೆ ಲೀಗ್ ಹಂತದಲ್ಲೇ ಹೊರಬಿದ್ದು, ಅವಮಾನ ಅನುಭವಿಸಲಿಲ್ಲ. ಸುಮ್ಮನೇ ಕುಣಿಯಲಾರದೇ ಇರುವವರು ನೆಲ ಡೊಂಕು ಎಂಬಂತಾಗಿದೆ ನಿಮ್ಮ ಪರಿಸ್ಥಿತಿ ಅಭಿನಂದಿಸುವ ಬದಲು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net