60 ಸೆಕೆಂಡ್‌ಗಳಲ್ಲಿ ತನ್ನ ನಾಲಿಗೆಯಿಂದ 57 ಫ್ಯಾನ್‌ಗಳ ರೆಕ್ಕೆ ನಿಲ್ಲಿಸಿ ಗಿನ್ನಿಸ್ ವಿಶ್ವ ದಾಖಲೆ ಬರೆದ ಭಾರತೀಯ

dk - 2025-01-03T191617.364 (1)
Published on

ನವದೆಹಲಿ: ತೆಲಂಗಾಣದ ಸೂರ್ಯಪೇಟ್‌ನ ವ್ಯಕ್ತಿಯೊಬ್ಬ 60 ಸೆಕೆಂಡ್‌ಗಳಲ್ಲಿ ತನ್ನ ನಾಲಿಗೆಯಿಂದ 57 ಎಲೆಕ್ಟ್ರಿಕ್ ಫ್ಯಾನ್‌ಗಳನ್ನು ನಿಲ್ಲಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ಮಾಡಿದ್ದಾನೆ. ಇದೀಗ ಇತನ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ಭಾರಿ ವೈರಲ್​ ಆಗಿದೆ.

ಭಾರತದ ಕ್ರಾಂತಿ ಕುಮಾರ್ ಪಣಿಕೇರ ಎಂಬುವರ ಈ ಸಾಧನೆ ಮಾಡಿದವರು. ಇತನ ಈ ಕೌಶಲದ ಅದ್ಭುತ ಪ್ರದರ್ಶನದಿಂದ ಪ್ರೇಕ್ಷಕರು ಆಶ್ಚರ್ಯಚಕಿತರಾಗುತ್ತಿದ್ದಾರೆ. ಗಿನ್ನಿಸ್​ ವರ್ಲ್ಡ್ ರೆಕಾರ್ಡ್ಸ್ (ಜಿಡಬ್ಲ್ಯೂಆರ್) ಹಂಚಿಕೊಂಡಿರುವ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿಡಿಯೋದಲ್ಲಿ ಏನಿದೆ?

ಒಂದು ನಿಮಿಷದ ಮೂವತ್ತೊಂಬತ್ತು ಸೆಕೆಂಡುಗಳ ವೀಡಿಯೋದಲ್ಲಿ 60 ಸೆಕೆಂಡ್‌ಗಳಲ್ಲಿ ತನ್ನ ನಾಲಿಗೆಯಿಂದ 57 ಎಲೆಕ್ಟ್ರಿಕ್ ಫ್ಯಾನ್‌ಗಳನ್ನು ದೇಹದ ಅತ್ಯಂತ ಶಕ್ತಿಶಾಲಿ ಸ್ನಾಯುಗಳಲ್ಲಿ ಒಂದಾದ ನಾಲಿಗೆಯೊಂದಿಗೆ ನಿಲ್ಲಿಸಿದಂತೆ ತೋರಿಸುತ್ತದೆ. ಈ ಸಾಧನೆಯು ನೋಡುಗರನ್ನು ಆಚ್ಚರಿಗೊಳಿಸುವುದರ ಜತೆಗೆ ಎಲ್ಲರ ಹುಬ್ಬೆರಿಸುವಂತೆ ಮಾಡಿದ್ದಾನೆ.

ವೈರಲ್ ವೀಡಿಯೊ 14.7 ಮಿಲಿಯನ್ ವೀಕ್ಷಣೆಗಳು, 23 ಸಾವಿರ ಇಷ್ಟಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಸಂಗ್ರಹಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಪಣಿಕೇರಾ ಅವರ ಸಾಧನೆಗೆ ಸ್ವಾಗತಿಸಿ, ಶ್ಲಾಘನೆ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net